ಬೆಂಗಳೂರು : ಹಿಂದೂ ಮಹಾಸಭಾ ಕರ್ನಾಟಕ ಹಾಗೂ ಸುರ್ವೆ ಕಲ್ಚರಲ್ ಅಕಾಡೆಮಿ ಅವರ ಸಂಯುಕ್ತ ಆಶ್ರಯದಲ್ಲಿ, ಸಂಪಾಜೆ ರಂಗ ಸಂಗಮ ಬೆಂಗಳೂರು ಅವರ ಆಯೋಜನೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ನಿರ್ದೇಶನದ ʼಛತ್ರಪತಿ ಶಿವಾಜಿʼ ನಾಟಕ ಪ್ರದರ್ಶನ ನಾಳೆ ನಡೆಯಲಿದೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಾಳೆ (ಆ.10) ಒಂದೇ ದಿನ ʼಛತ್ರಪತಿ ಶಿವಾಜಿʼ ನಾಟಕದ ಎರಡು ಪ್ರದರ್ಶನಗಳು ನಡೆಯಲಿವೆ. ಮಧ್ಯಾಹ್ನ 2.44ಕ್ಕೆ ಒಂದು ಪ್ರದರ್ಶನ ತುಳುವಿನಲ್ಲಿ ಹಾಗೂ ಸಂಜೆ 5.44ಕ್ಕೆ ಕನ್ನಡದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕ, ನಟ, ನಿರ್ದೇಶಕ ರಾಜ್ ಸಂಪಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಟಕ ಪ್ರದರ್ಶನಕ್ಕೆ 500/-, 300/- ರೂ.ನಂತೆ ಹಾಗೂ ಬಾಲ್ಕನಿಗೆ 200 ರೂ.ನಂತೆ ಟಿಕೇಟ್ ದರವೆಂದು ನಿಗದಿಗೊಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ 9035144776 ಗೆ ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.



















