ಧಾರವಾಡ : ಜಿಲ್ಲೆಯ ನವಲಗುಂದ ತಾಲೂಕಿನ ಹಣಸಿ ಗ್ರಾಮದಲ್ಲಿ ದಪ್ಪ ಇದ್ದಾಳೆ ಹಾಗೂ ಗರ್ಭಿಣಿಯಾಗುವುದಿಲ್ಲ ಎಂದುಕೊಂಡು ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಪ್ರಿಯಾಂಕ್ ಕಮಲಾಕರ್ (29) ಮೃತಪಟ್ಟ ಮಹಿಳೆ. 2024ರಲ್ಲಿ ಪ್ರಿಯಾಂಕ್ ಅವರನ್ನು ಮದುವೆಯಾಗಿದ್ದ ಬಸವರಾಜ್ ವಡ್ಡರ್, ಮದುವೆಯಾದ ಕೆಲವೇ ತಿಂಗಳಲ್ಲಿ ಪತ್ನಿಗೆ ವಿವಿಧ ಕಾರಣಗಳಿಂದ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಬಳಿಕ ‘ನೀನು ದಪ್ಪ ಇದ್ದೀಯ, ಗರ್ಭಿಣಿಯಾಗುವುದಿಲ್ಲ’ ಎಂದು ಹೇಳಿ ಕಳೆದ ಸೋಮವಾರ ರಾತ್ರಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಎರಡು ದಿನಗಳ ಹಿಂದೆ ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಮೃತಳ ಕುಟುಂಬದ ದೂರಿನ ಮೇರೆಗೆ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಪ್ರಮುಖ ಆರೋಪಿ ಬಸವರಾಜ್ ವಡ್ಡರ್ ಸೇರಿದಂತೆ ರೇಣವ್ವ, ಸುಭಾಷ್ ಹಾಗೂ ಸಿದ್ದರಾಮೇಶ್ ಎಂಬ ನಾಲ್ವರನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಕಾಲೇಜು ವಿದ್ಯಾರ್ಥಿಗಳ ನಡುವೆ ಗಲಾಟೆ ; ಓರ್ವ ಬಾಲಕನ ಮೇಲೆ ಐವರಿಂದ ಮಾರಣಾಂತಿಕ ಹಲ್ಲೆ


















