ಬೆಂಗಳೂರು : ನಗರದ ಟ್ರಿನಿಟಿ ಮೆಟ್ರೋ ನಿಲ್ದಾಣದ ಸಮೀಪ ಕೆಲಸದ ವೇಳೆ ವಿದ್ಯುತ್ ಶಾಕ್ ತಗುಲಿ ಕಾರ್ಮಿಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ BMRCL ಅಧಿಕಾರಿಗಳು ಸೇರಿ ನಾಲ್ವರ ವಿರುದ್ಧ ಹಲಸೂರು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಕೆಲಸದ ವೇಳೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸದೆ ನಿರ್ಲಕ್ಷ್ಯ ತೋರಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಮೃತ ಕಾರ್ಮಿಕ ಗುರುವಪ್ಪ ಅವರ ಪುತ್ರ ಮೂರ್ತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಪ್ರಕರಣದಲ್ಲಿ ಆರೋಪಿಗಳಾಗಿ A1 – ಸೂರಜ್ (ಗುತ್ತಿಗೆ ಕಂಪನಿ), A2 – ರಾಜೇಶ್ (ಗುತ್ತಿಗೆ ಪಡೆದ ಕಂಪನಿಯ ಇನ್‌ಚಾರ್ಜ್), A3 – ಮಾನಸ (ಗುತ್ತಿಗೆ ಪಡೆದ ಕಂಪನಿಯ ವ್ಯವಸ್ಥಾಪಕರು), A4 – BMRCL ಅಧಿಕಾರಿಗಳು ಎಂದು ಹೆಸರು ಉಲ್ಲೇಖಿಸಲಾಗಿದೆ.
ವಿದ್ಯುತ್ ಶಾಕ್‌ನಿಂದ ಕಾರ್ಮಿಕ ಮೃತಪಟ್ಟಿರುವ ಪ್ರಕರಣದ ಕುರಿತು ಹಲಸೂರು ಪೊಲೀಸರು ತನಿಖೆ ಮುಂದುವರಿಸಿದ್ದು, ನಿರ್ಲಕ್ಷ್ಯ ಹಾಗೂ ಸುರಕ್ಷತಾ ನಿಯಮಗಳ ಉಲ್ಲಂಘನೆ ನಡೆದಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಫುಟ್‌ಪಾತ್ ಒತ್ತುವರಿಗೆ ಡೆಡ್‌ಲೈನ್ : ನಾಳೆಯೊಳಗೆ ತೆರವುಗೊಳಿಸಿ, ಇಲ್ಲದಿದ್ದರೆ ಭಾರಿ ದಂಡ-ಲೈಸೆನ್ಸ್ ರದ್ದು!



















