ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಕ್ರೀಡೆ

“ಇದೊಂದು ನಾಚಿಕೆಗೇಡಿನ ಪ್ರದರ್ಶನ” : ಐರ್ಲೆಂಡ್ ಎದುರು ಸೋತ ಭಾರತದ ವಿರುದ್ದ ಅಭಿಮಾನಿಗಳ ಆಕ್ರೋಶ!

June 29, 2026
Share on WhatsappShare on FacebookShare on Twitter

ಬೆಲ್‌ಫಾಸ್ಟ್‌ : ಭಾನುವಾರ ರಾತ್ರಿ ನಡೆದ ರೋಚಕ ಹಾಗೂ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಆತಿಥೇಯ ಐರ್ಲೆಂಡ್ ತಂಡವು ಭಾರತೀಯ ಕ್ರಿಕೆಟ್ ತಂಡದ ವಿರುದ್ಧ ಕೇವಲ ಒಂದು ರನ್ ಅಂತರದ ಐತಿಹಾಸಿಕ ಜಯ ದಾಖಲಿಸುವ ಮೂಲಕ ಅಚ್ಚರಿಯ ರೀತಿಯಲ್ಲಿ 2-0 ಅಂತರದಿಂದ ಟಿ20 ಸರಣಿಯನ್ನು ಕೈವಶ ಮಾಡಿಕೊಂಡಿದೆ.

ಯುವ ಆಟಗಾರರಿಂದ ಕೂಡಿದ್ದ ಹಾಗೂ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ, ಸರಣಿ ಆರಂಭಕ್ಕೂ ಮುನ್ನವೇ ಅತ್ಯಂತ ನೆಚ್ಚಿನ ತಂಡವೆಂದು ಪರಿಗಣಿಸಲ್ಪಟ್ಟಿತ್ತು. ಆದರೆ, ಬೆಲ್‌ಫಾಸ್ಟ್ ಕ್ರೀಡಾಂಗಣದಲ್ಲಿ ಎಲ್ಲರ ನಿರೀಕ್ಷೆಗಳನ್ನೂ ತಲೆಕೆಳಗು ಮಾಡಿ, ಯಾರೂ ಊಹಿಸಿರದಂತಹ ಅಚ್ಚರಿಯ ಟ್ವಿಸ್ಟ್‌ನೊಂದಿಗೆ ಸರಣಿ ಅಂತ್ಯಗೊಂಡಿದೆ. ಇದು ಭಾರತೀಯ ಕ್ರಿಕೆಟ್ ತಂಡಕ್ಕೆ ಎದುರಾದ ಬೃಹತ್ ಹಿನ್ನಡೆ ಎಂದು ಪರಿಗಣಿಸಲಾಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಐರಿಶ್ ತಂಡದ ಸ್ಟಾರ್ ಬೌಲರ್ ಜೈ ಮೂಂದ್ರಾ ಅವರು ಭಾರತೀಯ ತಂಡಕ್ಕೆ ಭಾರಿ ಪೆಟ್ಟು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂದ್ಯದ ಎರಡನೇ ಇನ್ನಿಂಗ್ಸ್‌ನ ಬೌಲಿಂಗ್ ಆರಂಭಿಸಿದ ಮೂಂದ್ರಾ, ತಮ್ಮ ಮೊದಲ ಓವರ್‌ನಲ್ಲೇ ಅಪಾಯಕಾರಿ ಆರಂಭಿಕರಾದ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರನ್ನು ಪೆವಿಲಿಯನ್‌ಗಟ್ಟಿ ಭಾರತಕ್ಕೆ ಆರಂಭಿಕ ಆಘಾತ ನೀಡಿದರು.

ಈ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಇಶಾನ್ ಕಿಶನ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಕೂಡ ಬಹುಬೇಗ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಈ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಯುವ ಸೌತ್‌ಪಾವ್ ತಿಲಕ್ ವರ್ಮಾ ಮಾತ್ರ ಭಾರತೀಯರ ಏಕೈಕ ಭರವಸೆಯ ಕಿರಣವಾಗಿ ಹೊರಹೊಮ್ಮಿದರು. ಅಕ್ಷರ್ ಪಟೇಲ್ ಅವರೊಂದಿಗೆ ಮಹತ್ವದ ಜೊತೆಯಾಟದಲ್ಲಿ ಭಾಗಿಯಾದ ತಿಲಕ್, 46 ಎಸೆತಗಳಲ್ಲಿ 55 ರನ್‌ಗಳ ಮನಮೋಹಕ ಹಾಗೂ ಆಕರ್ಷಕ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಆಧರಿಸಿದರು. ಅವರ ಈ ಹೋರಾಟದ ಇನ್ನಿಂಗ್ಸ್ ಇಲ್ಲದಿದ್ದರೆ, ರನ್‌ಚೇಸ್‌ನ ಬಹುಬೇಗನೆ ಟೀಮ್ ಇಂಡಿಯಾದ ಇನ್ನಿಂಗ್ಸ್‌ಗೆ ತೆರೆಬೀಳುವ ಸಾಧ್ಯತೆಯಿತ್ತು.

ಬೌಲರ್​ಗಳ ಸಾಹಸ

ಇದಕ್ಕೂ ಮುನ್ನ, ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡುವ ದಿಟ್ಟ ನಿರ್ಧಾರ ತೆಗೆದುಕೊಂಡ ನಾಯಕ ಶ್ರೇಯಸ್ ಅಯ್ಯರ್ ಅವರ ಯೋಜನೆಯನ್ನು ಬೌಲರ್‌ಗಳು ಸಮರ್ಥವಾಗಿ ಅನ್ವಯಿಸಿದರು. ವೇಗಿಗಳಾದ ಅರ್ಷ್‌ದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ಆರಂಭಿಕ ವಿಕೆಟ್‌ಗಳನ್ನು ಕಬಳಿಸಿದರೆ, ತಮ್ಮ ಚೊಚ್ಚಲ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಯುವ ವೇಗಿ ಪ್ರಿನ್ಸ್ ಯಾದವ್ ಅತ್ಯದ್ಭುತ ಪ್ರದರ್ಶನ ನೀಡಿದರು. ಮೂರು ಪ್ರಮುಖ ವಿಕೆಟ್‌ಗಳನ್ನು ಪಡೆದು ಮಿಂಚಿದ ಪ್ರಿನ್ಸ್, ಆತಿಥೇಯ ಪಡೆಯನ್ನು ಕೇವಲ 154/8 ರನ್‌ಗಳಿಗೆ ನಿಯಂತ್ರಿಸುವಲ್ಲಿ ನೆರವಾದರು. ಹಾಗೆ ನೋಡಿದರೆ ಇದು ದೊಡ್ಡ ಗುರಿಯೇನಲ್ಲ. ಆದರೆ, ಬೆಲ್‌ಫಾಸ್ಟ್‌ನ ಮೋಡ ಕವಿದ ವಾತಾವರಣ ಮತ್ತು ಮಳೆಯ ಕಾರಣದಿಂದ ಮೈದಾನದ ಪರಿಸ್ಥಿತಿಯು ಟಿ20-ಶೈಲಿಯ ಬಿರುಸಿನ ಬ್ಯಾಟಿಂಗ್‌ಗೆ ಹೇಳಿ ಮಾಡಿಸಿದಂತಿರಲಿಲ್ಲ. ಬದಲಾಗಿ ಬೌಲರ್‌ಗಳು ಅದರಲ್ಲೂ ವಿಶೇಷವಾಗಿ ವೇಗಿಗಳು ಈ ಪರಿಸ್ಥಿತಿಯ ಸಂಪೂರ್ಣ ಲಾಭವನ್ನು ಪಡೆದುಕೊಂಡರು.

ಪಂದ್ಯವು ರೋಚಕ ಹಂತ ತಲುಪಿದಂತೆ, ಕೊನೆಯ ಓವರ್ ತೀವ್ರ ಕುತೂಹಲ ಕೆರಳಿಸಿತ್ತು. ಹರ್ಷಿತ್ ರಾಣಾ ಮತ್ತು ಪ್ರಿನ್ಸ್ ಯಾದವ್ ಕ್ರೀಸ್‌ನಲ್ಲಿದ್ದು, ಐರ್ಲೆಂಡ್ ಬೌಲರ್ ಹ್ಯಾರಿ ಟೆಕ್ಟರ್ ಅವರ ಮೇಲೆ ತೀವ್ರ ಒತ್ತಡ ಹೇರುವ ಪ್ರಯತ್ನ ಮಾಡಿದರು. ಒತ್ತಡದ ಸುಳಿಗೆ ಸಿಲುಕಿದ ಹ್ಯಾರಿ ಕೆಲವು ಹೆಚ್ಚುವರಿ ರನ್‌ಗಳನ್ನು ಬಿಟ್ಟುಕೊಡಬೇಕಾಯಿತು. ಇದರಿಂದ ಉತ್ಸಾಹಿತಗೊಂಡ ರಾಣಾ, ಕೆಲವು ಆಕರ್ಷಕ ಹೊಡೆತಗಳ ಮೂಲಕ ತಂಡವನ್ನು ಗುರಿಯ ಸಮೀಪಕ್ಕೆ ಕೊಂಡೊಯ್ದರು. ಆದರೆ, ಯಶಸ್ಸು ಕೇವಲ ಕೂದಲೆಳೆಯಷ್ಟೇ ದೂರವಿದ್ದಾಗ ಹ್ಯಾರಿ ಟೆಕ್ಟರ್‌ಗೆ ವಿಕೆಟ್ ಒಪ್ಪಿಸಿ ರಾಣಾ ನಿರಾಸೆಯಿಂದ ನಿರ್ಗಮಿಸಿದರು. ಅಂತಿಮ ಎಸೆತದಲ್ಲಿ ಭಾರತದ ಗೆಲುವಿಗೆ ಬರೋಬ್ಬರಿ 8 ರನ್‌ಗಳ ಅವಶ್ಯಕತೆಯಿತ್ತು. ಸ್ಟ್ರೈಕ್‌ನಲ್ಲಿದ್ದ ಪ್ರಿನ್ಸ್ ಯಾದವ್, ಭರ್ಜರಿ ಬ್ಯಾಟ್ ಬೀಸಿ ಚೆಂಡನ್ನು ಗ್ಯಾಲರಿಗೆ ಅಟ್ಟುವ ಮೂಲಕ ಭವ್ಯವಾದ ಸಿಕ್ಸರ್ ಸಿಡಿಸಿದರು. ಆದರೆ ಗೆಲುವಿಗೆ ಬೇಕಿದ್ದದ್ದು 8 ರನ್ ಗುರಿಯಾಗಿತ್ತು. ಈ ಮೂಲಕ ಭಾರತ ಕೇವಲ 1 ರನ್ ಅಂತರದ ವಿರೋಚಿತ ಹಾಗೂ ಆಘಾತಕಾರಿ ಸೋಲು ಅನುಭವಿಸಿ, ಐರ್ಲೆಂಡ್ ತಂಡವು ಸತತ ಎರಡನೇ ಬಾರಿಗೆ ಭಾರತದ ವಿರುದ್ಧ ವಿಜಯೋತ್ಸವ ಆಚರಿಸಿತು.

ಅಭಿಮಾನಿಗಳ ಆಕ್ರೋಶ

ಈ ಐತಿಹಾಸಿಕ ಸೋಲಿನ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣವಾದ ‘X’ (ಹಿಂದಿನ ಟ್ವಿಟರ್) ನಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಟಿ20 ವಿಶ್ವಕಪ್‌ನ ಗುಂಪು ಹಂತದಲ್ಲೇ ನಿರ್ಗಮಿಸಿದ್ದನ್ನು ನೆನಪಿಸಿಕೊಂಡಿರುವ ಓರ್ವ ಅಭಿಮಾನಿ, ಇದೀಗ ಐರ್ಲೆಂಡ್ ಎದುರು ಸರಣಿ ಸೋತಿರುವುದು ಭಾರತೀಯ ಕ್ರಿಕೆಟ್‌ ಅಭಿಮಾನಿಗಳಿಗೆ ಅತ್ಯಂತ “ಭಯಾನಕ ಭಾನುವಾರ” (Terrible Sunday) ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೋರ್ವ ಅಭಿಮಾನಿ, “ನಾಚಿಕೆಗೇಡಿನ ಪ್ರದರ್ಶನ. ಅತ್ಯಂತ ಕಳಪೆ ನಾಯಕ, ಕಳಪೆ ಕೋಚ್ ಹಾಗೂ ಕಳಪೆ ಆಯ್ಕೆದಾರರು. ಗಲ್ಲಿ ಕ್ರಿಕೆಟ್ ಆಡುವ ಹುಡುಗರಷ್ಟೂ ಈ ಆಟಗಾರರು ಬುದ್ಧಿವಂತರಲ್ಲ” ಎಂದು ಅತ್ಯಂತ ಕಟುವಾದ ಶಬ್ದಗಳಿಂದ ಟೀಕಿಸಿದ್ದಾರೆ. “ಭಾರತದ ದಿಗ್ಗಜರೇ, ಮನೆಯಿಂದ ಹೊರಗಡೆ ಹೋಗಿ ಗೆಲ್ಲುವ ಮೂಡ್ ಇಲ್ಲವೇ?” ಎಂಬಂತಹ ವ್ಯಂಗ್ಯಭರಿತ ತೀಕ್ಷ್ಣ ಪ್ರತಿಕ್ರಿಯೆಗಳು ಕೂಡ ವೈರಲ್ ಆಗುತ್ತಿವೆ.

ಇದನ್ನೂ ಓದಿ : ‘ಅವರು ಅದ್ಭುತವಾಗಿ ಆಡಿದರು’ : ಸರಣಿ ಸೋಲಿನ ಬಳಿಕ ಐರ್ಲೆಂಡ್ ತಂಡವನ್ನು ಗುಣಗಾನ ಮಾಡಿದ ಅಯ್ಯರ್

Tags: CricketIndiaKarnataka News beat
SendShareTweet
Previous Post

ಫುಟ್‌ಪಾತ್ ಒತ್ತುವರಿಗೆ ಡೆಡ್‌ಲೈನ್ : ನಾಳೆಯೊಳಗೆ ತೆರವುಗೊಳಿಸಿ, ಇಲ್ಲದಿದ್ದರೆ ಭಾರಿ ದಂಡ-ಲೈಸೆನ್ಸ್ ರದ್ದು!

Next Post

ಸಚಿವ ಸಂಪುಟ ಪುನಾರಚನೆಗೆ ಕೌಂಟ್‌ಡೌನ್ : ಇದೇ ವಾರ ಹೈಕಮಾಂಡ್ ಸಭೆ.. ಯಾರಿಗೆ ಮಂತ್ರಿಗಿರಿ?

Related Posts

ಕೊಹ್ಲಿಯ ಹೊಸ ಅವತಾರ ; ಅತಿವೇಗದಲ್ಲಿ 15 ಸಾವಿರ ಒಡಿಐ ರನ್​ಗಳ ಸರದಾರ ಚೇಸ್ ಮಾಸ್ಟರ್!​
ಕ್ರೀಡೆ

ಕೊಹ್ಲಿಯ ಹೊಸ ಅವತಾರ ; ಅತಿವೇಗದಲ್ಲಿ 15 ಸಾವಿರ ಒಡಿಐ ರನ್​ಗಳ ಸರದಾರ ಚೇಸ್ ಮಾಸ್ಟರ್!​

ಕೊಹ್ಲಿ ಅಬ್ಬರಕ್ಕೆ ವೆಸ್ಟ್‌ಇಂಡೀಸ್‌ ಧೂಳೀಪಟ ; 139 ರನ್‌ಗಳ ಅಜೇಯ ಆಟ.. ಹಲವು ದಾಖಲೆಗಳ ಸರದಾರ
ಕ್ರೀಡೆ

ಕೊಹ್ಲಿ ಅಬ್ಬರಕ್ಕೆ ವೆಸ್ಟ್‌ಇಂಡೀಸ್‌ ಧೂಳೀಪಟ ; 139 ರನ್‌ಗಳ ಅಜೇಯ ಆಟ.. ಹಲವು ದಾಖಲೆಗಳ ಸರದಾರ

ಸಿಎಸ್‌ಕೆ ಹೊಸ ಕೋಚ್‌ ಝಹೀರ್‌ ಖಾನ್‌ ಪ್ಲ್ಯಾನ್‌ ಏನು? ‘ಬ್ರ್ಯಾಂಡ್‌ ರಕ್ಷಿಸುವುದೇ ಮೊದಲ ಗುರಿ’
ಕ್ರೀಡೆ

ಸಿಎಸ್‌ಕೆ ಹೊಸ ಕೋಚ್‌ ಝಹೀರ್‌ ಖಾನ್‌ ಪ್ಲ್ಯಾನ್‌ ಏನು? ‘ಬ್ರ್ಯಾಂಡ್‌ ರಕ್ಷಿಸುವುದೇ ಮೊದಲ ಗುರಿ’

ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಶುಭ್‌ಮನ್ ಗಿಲ್‌ಗೆ ಗಾಯದ ಆತಂಕ ; ಭಾರತ ತಂಡಕ್ಕೆ ಭಾರೀ ಆಘಾತ?
ಕ್ರೀಡೆ

ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಶುಭ್‌ಮನ್ ಗಿಲ್‌ಗೆ ಗಾಯದ ಆತಂಕ ; ಭಾರತ ತಂಡಕ್ಕೆ ಭಾರೀ ಆಘಾತ?

‘ಅವರು ಹೋದ್ರೂ ಕ್ರಿಕೆಟ್‌ ನಿಲ್ಲುವುದಿಲ್ಲ’ ; ರೋಹಿತ್‌–ಕೊಹ್ಲಿ ನಿವೃತ್ತಿ ಚರ್ಚೆಗೆ ಸೆಹ್ವಾಗ್‌ ಈ ರೀತಿ ಹೇಳಿದ್ಯಾಕೆ?
ಕ್ರೀಡೆ

‘ಅವರು ಹೋದ್ರೂ ಕ್ರಿಕೆಟ್‌ ನಿಲ್ಲುವುದಿಲ್ಲ’ ; ರೋಹಿತ್‌–ಕೊಹ್ಲಿ ನಿವೃತ್ತಿ ಚರ್ಚೆಗೆ ಸೆಹ್ವಾಗ್‌ ಈ ರೀತಿ ಹೇಳಿದ್ಯಾಕೆ?

ವಿಂಡೀಸ್‌ ಸರಣಿಗೆ ರೋಹಿತ್‌-ಕೊಹ್ಲಿ ಸಜ್ಜು : ನೆಟ್ಸ್‌ನಲ್ಲಿ ಭರ್ಜರಿ ಅಭ್ಯಾಸ.. ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ!
ಕ್ರೀಡೆ

ವಿಂಡೀಸ್‌ ಸರಣಿಗೆ ರೋಹಿತ್‌-ಕೊಹ್ಲಿ ಸಜ್ಜು : ನೆಟ್ಸ್‌ನಲ್ಲಿ ಭರ್ಜರಿ ಅಭ್ಯಾಸ.. ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ!

Next Post
ಸಚಿವ ಸಂಪುಟ ಪುನಾರಚನೆಗೆ ಕೌಂಟ್‌ಡೌನ್ : ಇದೇ ವಾರ ಹೈಕಮಾಂಡ್ ಸಭೆ.. ಯಾರಿಗೆ ಮಂತ್ರಿಗಿರಿ?

ಸಚಿವ ಸಂಪುಟ ಪುನಾರಚನೆಗೆ ಕೌಂಟ್‌ಡೌನ್ : ಇದೇ ವಾರ ಹೈಕಮಾಂಡ್ ಸಭೆ.. ಯಾರಿಗೆ ಮಂತ್ರಿಗಿರಿ?

  • Trending
  • Comments
  • Latest
ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಧಾರವಾಡದಲ್ಲಿರುವ IITಯಲ್ಲಿ ನೇಮಕಾತಿ : ಡಿಗ್ರಿ ಮುಗಿಸಿದವರಿಗೆ ಒಳ್ಳೆಯ ಅವಕಾಶ

ಧಾರವಾಡದಲ್ಲಿರುವ IITಯಲ್ಲಿ ನೇಮಕಾತಿ : ಡಿಗ್ರಿ ಮುಗಿಸಿದವರಿಗೆ ಒಳ್ಳೆಯ ಅವಕಾಶ

ಕೊಹ್ಲಿಯ ಹೊಸ ಅವತಾರ ; ಅತಿವೇಗದಲ್ಲಿ 15 ಸಾವಿರ ಒಡಿಐ ರನ್​ಗಳ ಸರದಾರ ಚೇಸ್ ಮಾಸ್ಟರ್!​

ಕೊಹ್ಲಿಯ ಹೊಸ ಅವತಾರ ; ಅತಿವೇಗದಲ್ಲಿ 15 ಸಾವಿರ ಒಡಿಐ ರನ್​ಗಳ ಸರದಾರ ಚೇಸ್ ಮಾಸ್ಟರ್!​

ನವಮಂಗಳೂರು ಪೋರ್ಟ್ ಟ್ರಸ್ಟ್‌ನಲ್ಲಿ ಕನ್ಸಲ್ಟಂಟ್ ಹುದ್ದೆಯ ನೇಮಕಾತಿ : ಕೂಡಲೇ ಅರ್ಜಿ ಸಲ್ಲಿಸಿ

ನವಮಂಗಳೂರು ಪೋರ್ಟ್ ಟ್ರಸ್ಟ್‌ನಲ್ಲಿ ಕನ್ಸಲ್ಟಂಟ್ ಹುದ್ದೆಯ ನೇಮಕಾತಿ : ಕೂಡಲೇ ಅರ್ಜಿ ಸಲ್ಲಿಸಿ

ಕೊಹ್ಲಿ ಅಬ್ಬರಕ್ಕೆ ವೆಸ್ಟ್‌ಇಂಡೀಸ್‌ ಧೂಳೀಪಟ ; 139 ರನ್‌ಗಳ ಅಜೇಯ ಆಟ.. ಹಲವು ದಾಖಲೆಗಳ ಸರದಾರ

ಕೊಹ್ಲಿ ಅಬ್ಬರಕ್ಕೆ ವೆಸ್ಟ್‌ಇಂಡೀಸ್‌ ಧೂಳೀಪಟ ; 139 ರನ್‌ಗಳ ಅಜೇಯ ಆಟ.. ಹಲವು ದಾಖಲೆಗಳ ಸರದಾರ

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಧಾರವಾಡದಲ್ಲಿರುವ IITಯಲ್ಲಿ ನೇಮಕಾತಿ : ಡಿಗ್ರಿ ಮುಗಿಸಿದವರಿಗೆ ಒಳ್ಳೆಯ ಅವಕಾಶ

ಧಾರವಾಡದಲ್ಲಿರುವ IITಯಲ್ಲಿ ನೇಮಕಾತಿ : ಡಿಗ್ರಿ ಮುಗಿಸಿದವರಿಗೆ ಒಳ್ಳೆಯ ಅವಕಾಶ

ಕೊಹ್ಲಿಯ ಹೊಸ ಅವತಾರ ; ಅತಿವೇಗದಲ್ಲಿ 15 ಸಾವಿರ ಒಡಿಐ ರನ್​ಗಳ ಸರದಾರ ಚೇಸ್ ಮಾಸ್ಟರ್!​

ಕೊಹ್ಲಿಯ ಹೊಸ ಅವತಾರ ; ಅತಿವೇಗದಲ್ಲಿ 15 ಸಾವಿರ ಒಡಿಐ ರನ್​ಗಳ ಸರದಾರ ಚೇಸ್ ಮಾಸ್ಟರ್!​

  • About
  • Advertise
  • Privacy & Policy
  • Contact Us

© 2025 News beat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 News beat