ಬೆಂಗಳೂರು ಗ್ರಾಮಾಂತರ : ಮನೆ ಅಂಗಳದಲ್ಲೇ ವ್ಯಕ್ತಿಯೊಬ್ಬನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ದಬ್ಬಗುಂಠಹಳ್ಳಿ ಗ್ರಾಮದಲ್ಲಿ ನಡೆದಿದೆ.
ನಿನ್ನೆ ರಾತ್ರಿ ನಡೆದಿರುವ ಘಟನೆ ಇಂದು ಬೆಳಕಿಗೆ ಬಂದಿದೆ. ಶಿವಶಂಕರ್ (40) ಮೃತ ದುರ್ದೈವಿ. ದುಷ್ಕರ್ಮಿಗಳು ಶಿವಶಂಕರನನ್ನು ಕೊಚ್ಚಿ ರಕ್ತಸಿಕ್ತ ಸ್ಥಿತಿಯಲ್ಲಿ ಆತನ ಮನೆ ಆವರಣದಲ್ಲೇ ಬಿಟ್ಟುಹೋಗಿದ್ದಾರೆ ಎನ್ನಲಾಗಿದೆ.
ಹೊಸಕೋಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಇನ್ನೇನು ಕೊಲೆಗೆ ನಿಖರ ಕಾರಣ ತಿಳಿದುಬರಬೇಕಿದೆ.
ಇದನ್ನೂ ಓದಿ : ಬೀದರ್‌ನಲ್ಲಿ ವಿದ್ಯುತ್ ಅವಘಡ – ಲೈನ್‌ಮನ್‌ಗೆ ಗಂಭೀರ ಗಾಯ!



















