ಬೆಂಗಳೂರು : ಫಾರೆಸ್ಟ್ ವಿಜಿಲೆನ್ಸ್ ತಂಡದ ಅಧಿಕಾರಿಗಳು ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ನಲ್ಲಹಳ್ಳಿ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿ, ಸ್ಫೋಟಕಗಳಿಗೆ ಬಳಸಲಾಗುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಗ್ರಾಮದ ಶಿವಮಾದೇಗೌಡ ಎಂಬುವವರ ಮನೆಯಲ್ಲಿ ದಾಳಿ ನಡೆಸಿದ ವೇಳೆ ಈ ವಸ್ತುಗಳು ಪತ್ತೆಯಾಗಿವೆ.
ದಾಳಿಯ ವೇಳೆ ಸೀಸಾ, ರಂಜಕ, ಗನ್ ಪೌಡರ್, ಉಪ್ಪು ಹಾಗೂ ಬಾಲ್ಸ್ ಸೇರಿದಂತೆ ಸ್ಫೋಟಕ ತಯಾರಿಕೆಗೆ ಬಳಸುವ ಹಲವು ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇವುಗಳನ್ನು ಕಾಡು ಪ್ರಾಣಿಗಳ ಬೇಟೆಗೆ ಬಳಸುವ ಸ್ಫೋಟಕಗಳನ್ನು ತಯಾರಿಸಲು ಸಂಗ್ರಹಿಸಿಡಲಾಗಿತ್ತು ಎಂಬ ಶಂಕೆ ವ್ಯಕ್ತವಾಗಿದೆ.
ಮಾಹಿತಿ ಆಧರಿಸಿ ದಾಳಿ ನಡೆಸಿದ ಫಾರೆಸ್ಟ್ ವಿಜಿಲೆನ್ಸ್ ಅಧಿಕಾರಿಗಳು ಮನೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ, ಸಿಕ್ಕ ವಸ್ತುಗಳನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಆರಂಭಿಸಿದ್ದಾರೆ.
ಘಟನೆ ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣವನ್ನು ಸಾತನೂರು ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಕಾನೂನು ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ ; ’50ರೂ. ಲಂಚ ಕೊಡದಿದ್ದರೆ SIR ವೇಳೆ ಹೆಸರು ಡಿಲೀಟ್’ ; ಮಹಿಳಾ ಅಧಿಕಾರಿಯ ವಿಡಿಯೋ ವೈರಲ್


















