ಉತ್ತರ ಕನ್ನಡ: ಸಂಚಾರಿ ನಿಯಮ ಉಲ್ಲಂಘನೆಗೆ ಮತ್ತೊಂದು ಅಮಾಯಕ ಜೀವ ಬಲಿಯಾಗಿದೆ. ಮಧ್ಯರಾತ್ರಿ ಭೀಕರ ಅಪಘಾತದಲ್ಲಿ 17 ವರ್ಷದ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ–ದಾಂಡೇಲಿ ರಸ್ತೆಯಲ್ಲಿ ನಡೆದಿದೆ.
ಜಾನ್‌ವಿಯಾನಿ ಜೇಮ್ಸ್ ಡಿಸೋಜಾ ಸಾವನ್ನಪ್ಪಿದ ವಿದ್ಯಾರ್ಥಿ. ಹೆಲ್ಮೆಟ್ ಧರಿಸದೆ, ಲೈಸನ್ಸ್ ಇಲ್ಲದೇ ವೇಗವಾಗಿ ಬೈಕ್ ಚಲಾಯಿಸಿದ್ದ ಆರೋಪ ಕೇಳಿ ಬಂದಿದೆ.ನಿಯಂತ್ರಣ ತಪ್ಪಿದ ಬೈಕ್ ಕಬ್ಬಿನ ಗದ್ದೆಗೆ ದೂಡಿದ ಪರಿಣಾಮ ತಲೆಗೆ ಗಂಭೀರ ಗಾಯವಾಗಿದ್ದು, ರಾತ್ರಿಯಿಡೀ ನೆರವಿಲ್ಲದೆ ನರಳಾಡಿ ವಿದ್ಯಾರ್ಥಿ ಮೃತಪಟ್ಟಿದ್ದಾನೆ.
ಬೆಳಗ್ಗೆ ಕುಟುಂಬಕ್ಕೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಧಾವಿಸಿದ ಪೋಷಕರಿಗೆ ಅಘಾತ ಉಂಟಾಗಿದೆ. ಈ ಘಟನಾ ಸಂಬಂಧ
ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ : ಬೈಕ್‌ಗೆ ಗೂಡ್ಸ್ ವಾಹನ ಡಿಕ್ಕಿ – ಅರಣ್ಯ ಇಲಾಖೆಯ ಇಬ್ಬರು ವಾಚರ್ಸ್ ಸಾವು



















