ಧಾರವಾಡ : ಧಾರವಾಡದ ಕೇಂದ್ರ ಕಾರಾಗೃಹ ಅಂದ್ರೆ ಕೈದಿಗಳಿಗೆ ಭಯವೇ ಇಲ್ಲದಂತಾಗಿದೆ. ಹಣ ಕೊಟ್ಟರೆ ಕಾರಾಗೃಹದಲ್ಲಿ ಎಲ್ಲವೂ ಸಿಗುತ್ತದೆ ಎಂಬ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿತ್ತು. ಇದು ಸತ್ಯ ಎಂಬಂತೆ ಕಾರಾಗೃಹದಲ್ಲಿ ಘಟನೆಯೊಂದು ನಡೆದಿದೆ. ಹೌದು.. ಜಿಲ್ಲಾ ಕೇಂದ್ರ ಕಾರಾಗೃಹದ ಜೈಲು ಅಧಿಕಾರಿಗಳೇ ಕೈದಿಗಳಿಗೆ ಮಾದಕ ವಸ್ತುಗಳ ಪೂರೈಕೆ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಜೈಲಿನ ವಾರ್ಡನ್ ಆಗಿರುವ ರಾಜು ಸೋಲಬಣ್ಣವರ ಹಾಗೂ ಅಲ್ತಾಪ್ ಶೇಕಸನದಿ ಬಂಧಿತ ವಾರ್ಡನ್ಗಳಾಗಿದ್ದು, ಅವರ ಜೊತೆಗೆ ಆಟೋ ಚಾಲಕ ಮುನೀರ ಅಹ್ಮದ್ ಬೆಟಗೇರಿಯನ್ನು ಕೂಡಾ ಬಂಧಿಸಲಾಗಿದೆ. ಇವರು ಒಳಗಿರುವ ಕೈದಿಗಳಿಗೆ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದರು.
ಬಂಧಿತರಿಂದ 75 ಸಾವಿರ ಮೌಲ್ಯದ ಗುಟ್ಕಾ, ತಂಬಾಕು, ಸಿಗರೇಟ್ ವಸ್ತುಗಳ ಸಮೇತ ಮೂವರು ಪೋಲಿಸರ ವಶಕ್ಕೆ ಪಡೆದುಕೊಂಡಿದ್ದಾರೆ. ಆಟೋ ಚಾಲಕ ಮುನೀರ ಅಹ್ಮದ್ ಬೆಳಗ್ಗೆಯೇ ಕಾರಾಗೃಹಕ್ಕೆ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ. ಈ ಹಿನ್ನೆಲೆ ಉಪನಗರ ಪೊಲೀಸರ ಕಾರ್ಯಾಚರಣೆ ನಡೆಸಿ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಎಷ್ಟು ವರ್ಷದಿಂದ ಸಪ್ಲೈ ಆಗುತ್ತಿದೆ ಎನ್ನುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಕೊಪ್ಪಳದಲ್ಲಿ ಪೆಟ್ರೋಲ್, ಡೀಸೆಲ್ ಕೊರತೆ ಇಲ್ಲ – ಡಿಸಿ ಸ್ಪಷ್ಟನೆ


















