ಶಿವಮೊಗ್ಗ: ಇಂದು ನಾಡಿನೆಲ್ಲೆಡೆ ರಂಜಾನ್ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಶಿವಮೊಗದಲ್ಲೂ ಸಡಗರದಿಂದ ರಂಜಾನ್ ಆಚರಣೆ ಮಾಡಲಾಗುತ್ತಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಮೈದಾನದಲ್ಲಿ ಸಾವಿರಾರು ಜನ ಮುಸ್ಲಿಂ ಬಾಂಧವರು ಒಟ್ಟಿಗೆ ಸೇರಿ ಸಾಮೂಹಿಕ ಪ್ರಾರ್ಥನೆ ಮಾಡಿದ್ದಾರೆ.
ಪ್ರಾರ್ಥನೆಯ ಬಳಿಕ ಒಬ್ಬರನ್ನೊಬ್ಬರು ಶುಭಾಶಯ ಕೋರಿದ್ದಾರೆ. ಒಂದು ತಿಂಗಳುಗಳ ಕಾಲ ಉಪವಾಸ ಮಾಡಿ ಇಂದು ಸಂಭ್ರಮದಿಂದ ಹಬ್ಬ ಆಚರಣೆ ಮಾಡಿದ್ದಾರೆ. ಮಕ್ಕಳು, ವೃದ್ಧರು ಎಲ್ಲರೂ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.



















