ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಾರೋಗೋಳಿಗೆ ಪಂಚಾಯಿತಿ ವ್ಯಾಪ್ತಿಯ ಕಡಿದಾಳ್ ಗ್ರಾಮದ ತೋಟದಲ್ಲಿ ಬರೋಬ್ಬರಿ 27.750 ಕೆಜಿ ತೂಕದ ಬೃಹತ್ ಹೆಬ್ಬಾವು ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ಕೆಲಕಾಲ ಆತಂಕ ಮೂಡಿಸಿತು.
ಮಧ್ಯಾಹ್ನ ತೋಟದಲ್ಲಿ ಭಾರಿ ಗಾತ್ರದ ಹೆಬ್ಬಾವನ್ನು ಕಂಡ ಗ್ರಾಮಸ್ಥರು ಅಚ್ಚರಿಗೊಂಡು ಉರಗ ತಜ್ಞ ಚಂದ್ರು ಕೆ. ನಾಯರ್ ಅವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಚಂದ್ರು ಕೆ. ನಾಯರ್ ಹೆಬ್ಬಾವನ್ನು ಅತ್ಯಂತ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಇದುವರೆಗೆ ಸುಮಾರು 2,000ಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿರುವ ಚಂದ್ರು ಕೆ. ನಾಯರ್, ಈ ಬೃಹತ್ ಹೆಬ್ಬಾವನ್ನೂ ಸುರಕ್ಷಿತವಾಗಿ ರಕ್ಷಿಸಿದರು. ಬಳಿಕ ಅರಣ್ಯ ಇಲಾಖೆ ನಿಯಮಾನುಸಾರ ಹೆಬ್ಬಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.
ಇದನ್ನೂ ಓದಿ : ಪಾಕ್ ಆಟಗಾರನ ನೌಟಂಕಿ ಆಟ, ಸುಳ್ಳು ಗಾಯದ ನೆಪವೊಡ್ಡಿದ್ದಾರೆಂದು ಮಾಜಿ ಆಯ್ಕೆಗಾರನ ಆರೋಪ!



















