ಬೆಂಗಳೂರು : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೆಸರು ಬಳಕೆ ಮಾಡಿ ಕೋಟಿ ಕೋಟಿ ಲೂಟಿ ಮಾಡಿರುವ ಘಟನೆ ವರದಿಯಾಗಿದೆ. ಹಣ ಹೂಡಿಕೆಯ ಬಗ್ಗೆ ನಿರ್ಮಲಾ ಸೀತಾರಾಮನ್ ಅವರ ಫೇಕ್ ವೀಡಿಯೋ ಸೃಷ್ಟಿ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ವಂಚಕರು ಹರಿಬಿಟ್ಟಿದ್ದಾರೆ.
ಎ ಐ ವೀಡಿಯೋ ಹರಿ ಬಿಟ್ಟು, ಕಮೆಂಟ್ ಬಾಕ್ಸ್‌ನಲ್ಲಿ ಲಿಂಕ್ ಹಾಕುವ ವಂಚಕರು 21 ಸಾವಿರ ಹೂಡಿಕೆ ಮಾಡಿದರೆ ಒಂದೇ ತಿಂಗಳಲ್ಲಿ 20 ಲಕ್ಷ ಪ್ರಾಫಿಟ್, 30 ದಿನದಲ್ಲಿ ನಿಮ್ಮ ದುಡ್ಡು ಅಕೌಂಟ್‌ಗೆ ಬೀಳುತ್ತದೆ. ಇದನ್ನು ಆನ್‌ಲೈನ್ ಇನ್ವೆಷ್ಟ್ ಮೂಲಕ ರಿಜಿಸ್ಟರ್ ಮಾಡಿಕೊಳ್ಳಿ ಬ್ಯಾಂಕ್ ಡೀಟೇಲ್ಸ್ ಜೊತೆಗೆ ಇನ್ನಿತರ ದಾಖಲೆ ಸಲ್ಲಿಸಿ ಎಂದು ಮಾಹಿತಿ ನೀಡಲಾಗಿದೆ.
ಕೇಂದ್ರ ಸರ್ಕಾರ ಬಡವರಿಗಾಗಿ ಈ ಯೋಜನೆ ರೂಪಿಸಿದೆ. ಹೀಗಾಗಿ ಇನ್ವೆಷ್ಟ್ ಮಾಡುವ ಮೂಲಕ ಲಾಭ ಮಾಡಿಕೊಳ್ಳಿ ಎಂದು ಎಐಯಿಂದ ಮೂಲಕ ಸೃಷ್ಟಿ ಮಾಡಲಾಗಿದೆ. ನಿರ್ಮಲಾ ಸೀತಾರಾಮನ್ ಅವರೇ ಮಾತನಾಡಿದ್ದಾರೆಂದು ನಂಬಿದ ಜನರು, ಲಿಂಕ್ ಒಪನ್ ಮಾಡಿ ಹಣ ಹೂಡಿಕೆ ಮಾಡಿದ್ದಾರೆ. ಒಬ್ಬರಿಂದ 21 ಸಾವಿರ ದಂತೆ ಹಲವಾರು ಜನರಿಗೆ ವಂಚನೆ ಮಾಡಲಾಗಿದೆ.
ರಿಜಿಸ್ಟರ್ ಬಳಿಕ 21 ಸಾವಿರ ಮಾತ್ರ ಹಣ ಕಡಿತವಾಗೋದಲ್ಲ, ಅವರ ಅಕೌಂಟ್‌ನಿಂದ ಸಂಪೂರ್ಣ ಹಣ ವಂಚಕರು ಗುಳುಂ ಮಾಡಿದ್ದಾರೆ. ಹೀಗಾಗಿ, ಕೇಂದ್ರ ಸಚಿವರ ಹೆಸರಿನಲ್ಲಿ ಬರುವ ಎಐ ವೀಡಿಯೋ ನಂಬದಿರಲು ಪೊಲೀಸ್ ಇಲಾಖೆ ಮನವಿ ಮಾಡಿದ್ದಾರೆ. ಈ ಸಂಬಂಧ ಪೊಲೀಸ್ ಸೈಬರ್ ಸೆಲ್‌ಗಳಿಂದಲೇ ಸುಮೋಟೋ ದೂರುಗಳು ದಾಖಲಾಗಿದ್ದು, ನಗರ ಪೊಲೀಸರು ಫೇಸ್ ಬುಕ್‌ನಲ್ಲಿ ಸರ್ಚ್ ಮಾಡಿ ಅಂತಹ ವೀಡಿಯೋ ಡಿಲೀಟ್ ಮಾಡುತ್ತಿದ್ದಾರೆ. ಸದ್ಯ ಈ ಸಂಬಂಧ ಐವತ್ತಕ್ಕು ಹೆಚ್ಚು ಎಫ್‌ಐಆರ್‌ಗಳು ದಾಖಲಾಗಿದೆ.
ಇದನ್ನೂ ಓದಿ ; ಬೆಂಗಳೂರಲ್ಲಿ ಬೀದಿ ನಾಯಿ ಅಟ್ಟಹಾಸ | ಮಗುವಿನ ಮೇಲೆ ಡೆಡ್ಲಿ ಅಟ್ಯಾಕ್!



















