ಬೆಂಗಳೂರು : ಸ್ಕೂಲ್ ಬಸ್ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳ ಜೀವ ಹೋಗಿದೆ. ಹೆಣ್ಣೂರು ಸಂಚಾರಿ ಠಾಣೆ ವ್ಯಾಪ್ತಿಯ ಥಣಿಸಂದ್ರ ಬಳಿ ಈ ಅಪಘಾತ ಸಂಭವಿಸಿದ್ದು, ಮಕ್ಕಳನ್ನ ಕರೆದುಕೊಂಡು ಸ್ಕೂಟರ್ನಲ್ಲಿ ಹೋಗ್ತಿದ್ದ ವ್ಯಕ್ತಿಗೆ ಸ್ಕೂಲ್ ಬಸ್ ಒಂದು ಡಿಕ್ಕಿ ಹೊಡೆದಿದೆ. ಪರಿಣಾಮ ಮಕ್ಕಳು ಕೆಳಗೆ ಬಿದ್ದಿದ್ದು, ಮಕ್ಕಳ ಮೇಲೆಯೇ ಬಸ್ ಹರಿದಿದೆ.
ಸ್ಕೂಲ್ ಬಸ್ ಟರ್ನ್ ಮಾಡಿಕೊಳ್ಳುವ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ವೇಳೆ ಗಾಡಿಯಲ್ಲಿ ಕೂತಿದ್ದ ಇಬ್ಬರು ಮಕ್ಕಳು ಕೆಳಗೆ ಬೀಳ್ತಿದ್ದಂತೆ ಇಬ್ಬರ ಮೇಲೂ ಬಸ್ ಹರಿದಿದೆ. ಅಪಘಾತದಲ್ಲಿ 2 ವರ್ಷದ ಕಂದ ವರ್ಷ ಹಾಗೂ 4 ವರ್ಷದ ಭಾನು ಮೃತಪಟ್ಟಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನಾ ಸ್ಥಳಕ್ಕೆ ಉತ್ತರ ವಿಭಾಗದ ಸಂಚಾರ ಪೊಲೀಸ್ ಡಿಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲ ಸೆರೆಯಾಗಿದೆ. ವರ್ಷ ಹಾಗೂ ಭಾನು ಇಬ್ಬರು ಪೊಲೀಸ್ ಸಿಬ್ಬಂದಿ ಮಕ್ಕಳಾಗಿದ್ದಾರೆ. ಮಕ್ಕಳನ್ನ ಗಾಡಿಯಲ್ಲಿ ಕೂರಿಸಿಕೊಂಡು ಹಾಲು ತರಲು ಕಾನ್ಸಟೇಬಲ್ ಹೋಗ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ.
ಯಲಹಂಕ ಸರ್ಕಾರಿ ಆಸ್ಪತ್ರೆಗೆ ಮೃತದೇಹಗಳನ್ನ ರವಾನೆ ಮಾಡಲಾಗಿದ್ದು, ಆಸ್ಪತ್ರೆ ಬಳಿ ಕುಟುಂಬಸ್ಥರು ಜಮಾಯಿಸಿದ್ದಾರೆ. ಮಕ್ಕಳನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಕಾನ್ಸ್‌ಟೇಬಲ್ ನಾಗನಗೌಡ ಯಾದಗಿರಿ ಮೂಲದವರಾಗಿದ್ದಾರೆ. ಆಸ್ಪತ್ರೆಗೆ ಪೊಲೀಸ್ ಅಧಿಕಾರಿಗಳು ಕೂಡ ದೌಡಾಯಿಸಿದ್ದು, ಹೆಣ್ಣೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಲಾಗಿದೆ.
ಇದನ್ನೂ ಓದಿ : ಅಮೆರಿಕ ನಮ್ಮನ್ನು ಟಾಯ್ಲೆಟ್ ಪೇಪರ್‌ನಂತೆ ಬಳಸಿ ಎಸೆಯಿತು | ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಆಕ್ರೋಶ



















