ಇತ್ತೀಚಿಗೆ ಹೊಸಬರ ಚಿತ್ರಗಳು ಸಾಕಷ್ಟು ಸದ್ದು ಮಾಡುತ್ತಿದ್ದು, ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಮೈಲಿಗಲ್ಲನ್ನು ಸೃಷ್ಟಿಸುತ್ತಿದೆ. ಅದೇ ರೀತಿ
ಚಿತ್ರರಂಗಕ್ಕೆ ಹೊಸ ಸೇರ್ಪಡೆ ಆಗಿರುವ “ಕಾಣದ ಕಡಲಿಗೆ” ಚಿತ್ರದ ಮೊದಲ ಹಾಡು “ನಮಗಾಗಿ ಕಾಲ ಕೂಡಿ ಬಂದಿದೆ” ಬಿಡುಗಡೆಯಾಗಿದೆ. ಈ ಹಾಡು ಆಕಾಶ್ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಲಾಂಚ್ ಆಗಿದ್ದು, ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಭಾವನಾತ್ಮಕ ಸಾಲುಗಳು ಮತ್ತು ಮಧುರ ಸಂಗೀತ ಈ ಹಾಡಿನ ಪ್ರಮುಖ ಆಕರ್ಷಣೆಯಾಗಿದೆ.
ಕಾಣದ ಕಡಲಿಗೆ ಚಿತ್ರವನ್ನು ವಾಸುದೇವರೆಡ್ಡಿ ನಿರ್ಮಿಸಿದ್ದು, ಜಗ್ಗಿ ಮುದೇನಹಳ್ಳಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಸಾತ್ವಿಕ ಸಿ, ಹೆಥನ್, ಪ್ರಮೋದ್ ಶೆಟ್ಟಿ, ಹುಲಿಕಾರ್ತಿಕ್, ಸುಶ್ಮಿತಾ ಮಹಾಭಾರತ, ಮುಗುರು ಸುರೇಶ್, ರೇಣುಶಿಖಾರಿ ಮತ್ತು ಮನಮೋಹನ್ ರಾಯ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಹೊಸತಾನದ ವಿಷಯ ಮತ್ತು ಕಲಾತ್ಮಕ ನಿರೂಪಣೆಯೊಂದಿಗೆ ಚಿತ್ರತಂಡ ಎಲ್ಲರ ಗಮನ ಸೆಳೆಯುತ್ತಿದೆ.
ಚಿತ್ರದ ಮೊದಲ ಹಾಡಿನ ಬಿಡುಗಡೆ ಮೂಲಕ ಚಿತ್ರತಂಡ ಪ್ರೇಕ್ಷಕರಿಗೆ ಭರವಸೆ ನೀಡಿದ್ದು, ಮುಂದಿನ ದಿನಗಳಲ್ಲಿ “ಕಾಣದ ಕಡಲಿಗೆ” ಇನ್ನಷ್ಟು ವಿಶೇಷತೆಗಳೊಂದಿಗೆ ತೆರೆಗೆ ಬರಲಿದೆ ಎಂಬ ನಿರೀಕ್ಷೆ ಮೂಡಿಸಿದೆ.
ಇದನ್ನೂ ಓದಿ: ರಾಜ್ಯ ರಾಜಧಾನಿಯಲ್ಲಿ 77ನೇ ಗಣರಾಜ್ಯೋತ್ಸವ ಸಂಭ್ರಮ | ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ರಿಂದ ಧ್ವಜಾರೋಹಣ



















