ಬೆಂಗಳೂರು : ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾದರಿಯ (ಟೈಡಾಲ್) ಮಾತ್ರೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪ್ರೇಮ್ ಅಲಿಯಾಸ್ ವೈಷ್ಣವ್ ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿ ಬಳಿಯಿಂದ ಪೊಲೀಸರು 6,700 ತ್ಯಾಪೆನ್ಡನಾಲ್ ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ. ಈತ ಕಾಲೇಜು ವಿದ್ಯಾರ್ಥಿಗಳಿಗೆ ಇನ್ನೂರರಿಂದ ಐನೂರು ರೂ.ಗೆ ಒಂದು ಮಾತ್ರೆ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಈ ಮಾತ್ರೆಗಳಿಂದ ಸೈಕೋಟ್ರಾಫಿಕ್ ಎಫೆಕ್ಟ್ ಆಗಿ ಮತ್ತು ಬರುತ್ತದೆ ಎಂದು ತಿಳಿದು ಬಂದಿದೆ. ಬೇರೆ ರಾಜ್ಯದಿಂದ ಆರೋಪಿ ಮಾತ್ರೆಗಳನ್ನು ತರಿಸಿ, ಮಾರಾಟ ಮಾಡುತ್ತಿದ್ದ. ಆರೋಪಿ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : 7 ಕೋಟಿ ರಾಬರಿ ಕೇಸ್ | ರಿಕವರಿ ಹಣವನ್ನು ಸೂಟ್‌ಕೇಸ್, ಬ್ಯಾಗ್, ಗೋಣಿ ಚೀಲದಲ್ಲಿ ಕಮಿಷನರ್ ಕಚೇರಿಗೆ ತಂದ ಪೊಲೀಸರು!



















