ಧಾರವಾಡ: ಆನ್ ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಯುವಕನೊಬ್ಬ ಮನನೊಂದು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡ ತಾಲೂಕಿನ ಮಂಗಳಗಟ್ಟಿ ಗ್ರಾಮದಲ್ಲಿ ನಡೆದಿದೆ.
ಬಸವರಾಜ ಸಕ್ರಪ್ಪನ್ನವರ (28) ಮೃತ ಯುವಕ. ಗ್ರಾಮದಲ್ಲಿ ಯು ಕಿ ಟೆಕ್ಸ್ ಪೈನಾನ್ಸ್‌ನ ಹಣವನ್ನು ಕಲೆಕ್ಷನ್ ಮಾಡಿಕ್ಕೊಳ್ಳುತ್ತಿದ್ದ ಬಸವರಾಜ, ಪೈನಾನ್ಸ್‌ಗೆ ಕಟ್ಟಬೇಕಿದ್ದ ಮೂರು ಲಕ್ಷಕ್ಕೂ ಅಧಿಕ ಹಣವನ್ನು ಆನ್ ಲೈನ್ ಗೇಮ್‌ಗೆ ಬಳಸಿಕೊಂಡಿದ್ದ. ಫೈನಾನ್ಸ್ ಮಾಲೀಕರಿಗೆ ಹಣ ಕಟ್ಟಲು ಆಗದೆ ಇರುವುದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದ್ದು, ಸದ್ಯ ಈ ಸಂಬಂಧ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರು | ವಿದ್ಯಾರ್ಥಿ ಕೆನ್ನೆಗೆ ಬಾರಿಸಿದ ಪಿಟಿ ಟೀಚರ್ ಮೇಲೆ FIR ; ಶಿಕ್ಷಕ ಬಂಧನ



















