ವಿಶ್ವವಿಖ್ಯಾತ ನಾಡಹಬ್ಬ ದಸರಾ ಗಜಪಡೆ ಪಟ್ಟಿಯನ್ನು ಸಚಿವ ಈಶ್ವರ್ ಖಂಡ್ರೆ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದ್ದಾರೆ. 14 ಆನೆಗಳ ಪೈಕಿ 9 ಆನೆಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಮತ್ತಿಗೋಡು ಶಿಬಿರದಿಂದ ಕ್ಯಾಪ್ಟನ್ ಅಭಿಮನ್ಯು, ಭೀಮ, ದುಬಾರೆ ಶಿಬಿರದಿಂದ ಕಂಜನ್, ಧನಂಜಯ, ಪ್ರಶಾಂತ್, ಬಳ್ಳೆ ಶಿಬಿರದಿಂದ ಮಹೇಂದ್ರ, ದೊಡ್ಡ ಹರವೆ ಶಿಬಿರದಿಂದ ಏಕಲವ್ಯ, ದುಬಾರೆ ಶಿಬಿರದಿಂದ ಹೆಣ್ಣಾಣೆ ಕಾವೇರಿ, ಬಳ್ಳೆ ಶಿಬಿರದಿಂದ ಲಕ್ಷ್ಮೀ ಆಯ್ಕೆಯಾಗಿರುವ ಆನೆಗಳಾಗಿವೆ.
ಎರಡನೇ ಹಂತದಲ್ಲಿ ಇನ್ನುಳಿದ 5 ಆನೆಗಳನ್ನು ಅರಣ್ಯ ಇಲಾಖೆ ಆಯ್ಕೆ ಮಾಡಲಿದೆ. ಆಗಸ್ಟ್ 4ರಂದು ಕಾಡಿನಿಂದ 9 ಆನೆಗಳು ನಾಡಿಗೆ ಬರಲಿವೆ. ಈ ಬಾರಿಯೂ ಕ್ಯಾಪ್ಟನ್ ಅಭಿಮನ್ಯು ಅಂಬಾರಿ ಹೊರಲಿದೆ.


















