ಚಾಮರಾಜನಗರ : ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯದಲ್ಲಿ ರಣಹದ್ದುಗಳ ಗುಂಪು ಕಾಣಿಸಿಕೊಂಡಿದ್ದು, ಸಫಾರಿಗೆ ತೆರಳಿದ್ದ ಪ್ರವಾಸಿಗರು ಈ ಅಪರೂಪದ ದೃಶ್ಯವನ್ನು ಕ್ಯಾಮಾರದಲ್ಲಿ ಸೆರೆಹಿಡಿದಿದ್ದಾರೆ.
ಒಂದು ಕಾಲದಲ್ಲಿ ಬಂಡೀಪುರ ಅರಣ್ಯದಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದ ರಣಹದ್ದುಗಳ ಸಂಖ್ಯೆ ಕಳೆದ ಕೆಲವು ವರ್ಷಗಳಲ್ಲಿ ಗಣನೀಯವಾಗಿ ಕುಸಿದಿದೆ. ಹೀಗಾಗಿ ನಶಿಸುವ ಹಂತದಲ್ಲಿರುವ ಈ ಪಕ್ಷಿಗಳ ಗುಂಪು ಮತ್ತೆ ಕಾಣಿಸಿಕೊಳ್ಳುತ್ತಿರುವುದು ಅರಣ್ಯ ಪ್ರಿಯರು ಹಾಗೂ ವನ್ಯಜೀವಿ ಆಸಕ್ತರಲ್ಲಿ ಆಶಾಭಾವನೆ ಮೂಡಿಸಿದೆ.
ಬಂಡೀಪುರ ಅರಣ್ಯದಲ್ಲಿ ರಣಹದ್ದುಗಳ ನಿರಂತರ ದರ್ಶನವು ಅಲ್ಲಿನ ಪರಿಸರ ವ್ಯವಸ್ಥೆ ಉತ್ತಮವಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಅಪರೂಪದ ಪಕ್ಷಿಗಳ ಸಂರಕ್ಷಣೆಗೆ ಇನ್ನಷ್ಟು ಒತ್ತು ನೀಡಬೇಕೆಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
ಬಂಡೀಪುರದಲ್ಲಿ ಆಗಿಂದಾಗ್ಗೆ ರಣಹದ್ದುಗಳು ಪ್ರವಾಸಿಗರ ಕಣ್ಣಿಗೆ ಬೀಳುತ್ತಿರುವುದು ಸಫಾರಿಗೆ ಹೊಸ ಆಕರ್ಷಣೆಯಾಗಿದ್ದು, ಈ ದೃಶ್ಯಗಳು ವನ್ಯಜೀವಿ ಪ್ರಿಯರನ್ನು ಮತ್ತಷ್ಟು ಸೆಳೆಯುತ್ತಿವೆ.
ಇದನ್ನೂ ಓದಿ : ಜೆಸ್ಕಾಂ ಲೈನ್‌ಮ್ಯಾನ್ ನಿರ್ಲಕ್ಷ್ಯಕ್ಕೆ ಅಮಾಯಕ ರೈತ ಬಲಿ.. ಗ್ರಾಮಸ್ಥರ ಆಕ್ರೋಶ!



















