ಬೆಂಗಳೂರು : ನಗರದ ಮಲ್ಲೇಶ್ವರಂನ ಸೇವಾ ಸದನ ಸಭಾಂಗಣದಲ್ಲಿ ಬಿರಾದಾರ್ ಮಿತ್ರ ಮಂಡಳಿ ವತಿಯಿಂದ ಡಾ. ರಾಜಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಏಕದಿನ ನಾಟಕೋತ್ಸವವನ್ನು ಅದ್ದೂರಿಯಾಗಿ ಆಯೋಜಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಡಾ. ರಾಜಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಬಳಿಕ “ಗೆಜ್ಜೆ ಹೆಜ್ಜೆ” ತಂಡದಿಂದ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಿತು.
ಈ ನಾಟಕೋತ್ಸವವನ್ನು ಹಾಸನ ಜಿಲ್ಲೆಯ ವಿಶೇಷ ಭೂಸ್ವಾಧೀನಾಧಿಕಾರಿ ಶ್ರೀ ಮಂಜುನಾಥ ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾನ ಗಾರುಡಿಗ ಗುರುರಾಜ್ ಹೊಸಕೋಟೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಹಿರಿಯ ಕಲಾವಿದರಾದ ಶಂಕರ್ ಭಟ್, ಶಿವಕುಮಾರ್ ಆರಾಧ್ಯ, ಮೈಸೂರು ರಮಾನಂದ, ನಟ-ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ, ಕರ್ನಾಟಕ ನ್ಯೂಸ್ ಬಿಟ್ ಸುದ್ದಿ ವಾಹಿನಿಯ ಮುಖ್ಯಸ್ಥ ನಾಗರಾಜ್ ಅರೆಹೊಳೆ ಉಪಸ್ಥಿತರಿದ್ದರು.
ಬಿರಾದಾರ್ ಮಿತ್ರ ಮಂಡಳಿಯ ಸಂಸ್ಥಾಪಕ ಅಧ್ಯಕ್ಷ ವೈಜನಾಥ ಬಿರಾದಾರ್ ಮತ್ತು ಹಾಲಿ ಅಧ್ಯಕ್ಷ ಮಲ್ಲಿಕಾರ್ಜುನ್ ಮತ್ತು ಪದಾಧಿಕಾರಿಗಳು, ಸದಸ್ಯ ಮಂಡಳಿಯವರ ಆಯೋಜನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸಿ ಮೆರುಗು ತಂದರು. ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಇದನ್ನೂ ಓದಿ : ಅಟಲ್ ಸೇತುವೆಯಿಂದ ಗೇಟ್‌ವೇ ಆಫ್ ಇಂಡಿಯಾವರೆಗೆ 17 ಕಿ.ಮೀ. ಈಜಿ ಅಚ್ಚರಿ ಮೂಡಿಸಿದ ಬಾಲಕ!



















