ಬೆಂಗಳೂರು: ದಸರಾ, ದೀಪಾವಳಿ ಹಾಗೂ ಧನತ್ರಯೋದಶಿ ಹಬ್ಬದ ಸಂಭ್ರಮದಲ್ಲಿರುವ ಜನರಿಗೆ ಆರ್ಥಿಕ ತಜ್ಞರು ಪ್ರಮುಖ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಶಾಪಿಂಗ್ ಪ್ರಿಯರನ್ನು ಆಕರ್ಷಿಸುವ ‘ಈಗ ಖರೀದಿಸಿ, ಆಮೇಲೆ ಪಾವತಿಸಿ’ (Buy Now, Pay Later – BNPL) ಸೌಲಭ್ಯವು ಆಕರ್ಷಕವಾಗಿ ಕಂಡರೂ, ಇದು ನಿಮ್ಮನ್ನು ಭಾರಿ ಸಾಲದ ಸುಳಿಗೆ ಸಿಲುಕಿಸುವ ಸಾಧ್ಯತೆಯಿದೆ. ಹಬ್ಬದ ಸಂದರ್ಭದಲ್ಲಿ ಬಿಎನ್ ಪಿಎಲ್ ಬಳಸುವುದರಿಂದ ಎದುರಾಗುವ 5 ಪ್ರಮುಖ ಅಪಾಯಗಳ ವಿವರ ಇಲ್ಲಿದೆ.
- ಅಗತ್ಯಕ್ಕಿಂತ ಹೆಚ್ಚಿನ ಖರ್ಚು: ಜೇಬಿನಿಂದ ತಕ್ಷಣ ಹಣ ಹೋಗುವುದಿಲ್ಲ ಎಂಬ ಕಾರಣಕ್ಕೆ ಗ್ರಾಹಕರು ತಮ್ಮ ಆದಾಯದ ಮಿತಿ ಮೀರಿ ಅನಗತ್ಯ ವಸ್ತುಗಳನ್ನು ಖರೀದಿಸುತ್ತಾರೆ. ಸಣ್ಣಪುಟ್ಟ ಖರೀದಿಗಳೂ ಸೇರಿ ತಿಂಗಳ ಕೊನೆಯಲ್ಲಿ ದೊಡ್ಡ ಆರ್ಥಿಕ ಹೊರೆಯಾಗುತ್ತವೆ.
- ಭಾರಿ ವಿಳಂಬ ಶುಲ್ಕ: ನಿಗದಿತ ದಿನಾಂಕದೊಳಗೆ ಬಿಲ್ ಪಾವತಿಸಲು ವಿಫಲವಾದರೆ ಅಥವಾ ಕಂತು ತಪ್ಪಿದರೆ, ಕಂಪನಿಗಳು ದುಬಾರಿ ದಂಡ ಹಾಗೂ ಬಡ್ಡಿಯನ್ನು ವಿಧಿಸುತ್ತವೆ. ಇದರಿಂದ ವಸ್ತುವಿನ ಅಸಲು ಬೆಲೆಗಿಂತ ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ.
- ಸಿಬಿಲ್ ಸ್ಕೋರ್ ಕುಸಿತ: ಬಿಎನ್ ಪಿಎಲ್ ಪಾವತಿಗಳಲ್ಲಿ ವ್ಯತ್ಯಯ ಉಂಟಾದರೆ ಅದು ನಿಮ್ಮ ಕ್ರೆಡಿಟ್ ಅಥವಾ ಸಿಬಿಲ್ ಸ್ಕೋರ್ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರಿಂದ ಭವಿಷ್ಯದಲ್ಲಿ ಗೃಹ ಅಥವಾ ವಾಹನ ಸಾಲ ಪಡೆಯುವುದು ಕಷ್ಟವಾಗುತ್ತದೆ.
- ಹಲವು ಕಂತುಗಳ ಗೊಂದಲ: ಬೇರೆ ಬೇರೆ ಆ್ಯಪ್ ಗಳಲ್ಲಿ ಏಕಕಾಲಕ್ಕೆ ಬಿಎನ್ ಪಿಎಲ್ ಬಳಸಿದರೆ, ಪ್ರತಿಯೊಂದರ ಬಾಕಿ ಮೊತ್ತ ಹಾಗೂ ಪಾವತಿ ದಿನಾಂಕಗಳ ಲೆಕ್ಕಾಚಾರ ಇಡುವುದು ಕಷ್ಟವಾಗಿ ಮಾಸಿಕ ಬಜೆಟ್ ಸಂಪೂರ್ಣ ಅಸ್ತವ್ಯಸ್ತಗೊಳ್ಳುತ್ತದೆ.
- ಮರೆತುಹೋಗುವ ಸಣ್ಣ ಮೊತ್ತದ ಸಾಲಗಳು: ಸಣ್ಣಪುಟ್ಟ ಮೊತ್ತದ ಬಿಎನ್ ಪಿಎಲ್ ಖರೀದಿಗಳನ್ನು ಜನರು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ಇವು ಒಟ್ಟು ಸೇರಿ ದೊಡ್ಡ ಸಾಲದ ಹೊರೆಯಾಗಿ ಪರಿಣಮಿಸಿ ಆರ್ಥಿಕ ಮುಗ್ಗಟ್ಟಿಗೆ ದಾರಿ ಮಾಡಿಕೊಡುತ್ತವೆ.
ಇದನ್ನೂ ಓದಿ:WPL 2027 ಹರಾಜು: ಕಮಲಿನಿ ಸೇರಿ 146 ಆಟಗಾರ್ತಿಯರು ಕಣಕ್ಕೆ, ಅಕ್ಟೋಬರ್ 28ರಂದು ಭರ್ಜರಿ ಬಿಡ್ಡಿಂಗ್!



















