ಬಿಗ್ ಬಾಸ್ ವಾರಾಂತ್ಯದಲ್ಲಿ ಡಬಲ್ ಎಲಿಮಿನೇಷನ್ ಶಾಕ್ ಕೊಟ್ಟ ಬೆನ್ನಲ್ಲೇ ಶನಿವಾರ ಸೂರಜ್ ಸಿಂಗ್ ಮನೆಯಿಂದ ಔಟ್ ಆಗಿದ್ದಾರೆ. ತಮ್ಮದೇ ಸ್ಟಾಟರ್ಜಿ ಇಟ್ಟುಕೊಂಡು ಆಟವಾಡುತ್ತ ಟಾಸ್ಕ್‌ಗಳನ್ನು ಮುಗಿಸುತ್ತಿದ್ದ ಸೂರಜ್ ಮನೆಯಿಂದ ಹೊರ ಬಂದಿದ್ದಾರೆ.
ಈ ವಾರ ಕಿಚ್ಚನ ಅನುಪಸ್ಥಿತಿಯಲ್ಲಿ ಎಲಿಮಿನೇಷನ್ ನಡೆದಿದೆ. ಧನುಷ್, ಧ್ರುವಂತ್, ಸೂರಜ್, ರಾಷಿಕಾ, ರಕ್ಷಿತಾ, ಮಾಳು, ಸ್ಪಂದನಾ ಎಲಿಮಿನೇಷನ್ ರೌಂಡ್‌ನಲ್ಲಿದ್ದರು. ಮೊದಲ ಸುತ್ತಿನಲ್ಲಿ ಧ್ರುವಂತ್, ಸೂರಜ್, ರಾಷಿಕಾ, ಸ್ಪಂದನಾರನ್ನು ಎಲಿಮಿನೇಷನ್ ಅಗ್ನಿಪರೀಕ್ಷೆಗೆ ಒಳಪಡಿಸಲಾಯಿತು. ಅಂತಿಮವಾಗಿ ಸೂರಜ್ ಮನೆಯಿಂದ ಹೊರ ಬಂದಿದ್ದಾರೆ. ಅಚ್ಚರಿ ಎಂಬಂತೆ ಅವರನ್ನು ಹೊರ ಕಳುಹಿಸಲಾಗಿದೆ.
ಈ ವಾರ ಮನೆಯಿಂದ ಒಬ್ಬರಲ್ಲ ಬದಲಿಗೆ ಇಬ್ಬರು ಹೊರಗೆ ಹೋಗಲಿದ್ದಾರೆ. ಬಿಗ್ಬಾಸ್ ಮನೆಗೆ ಈ ವಾರ ಕೆಲವು ಸೆಲೆಬ್ರಿಟಿಗಳು ಬಂದಿದ್ದಾರೆ, ನಿರ್ದೇಶಕ ಪ್ರೇಮ್ ಸೇರಿದಂತೆ ಇನ್ನೂ ಕೆಲವರು ಬಿಗ್ಬಾಸ್ ಮನೆಗೆ ಬಂದಿದ್ದಾರೆ. ಆದರೆ ಎಲ್ಲದರ ಅಂತ್ಯದಲ್ಲಿ ಡಬಲ್ ಎಲಿಮಿನೇಷನ್ ಎಂಬುದು ಮನೆ ಮಂದಿಗೆ ಶಾಕ್ ನೀಡಿದೆ. ಇದೀಗ ಸೂರಜ್ ಔಟ್ ಆಗಿದ್ದಾರೆ. ತಮ್ಮದೇ ಸ್ಟಾಟರ್ಜಿ ಇಟ್ಟುಕೊಂಡು ಆಟವಾಡುತ್ತ ಟಾಸ್ಕ್‌ಗಳನ್ನು ಮುಗಿಸುತ್ತಿದ್ದ ಸೂರಜ್ ಮನೆಯಿಂದ ಹೊರ ಬಂದಿದ್ದಾರೆ.
ಮನೆಗೆ ಪ್ರೇಮ್ ಹಾಗೂ ಸುಷ್ಮಾ ಅವರು ಅತಿಥಿಗಳಾಗಿ ಬಂದಿದ್ದಾರೆ. ನಿರ್ದೇಶಕ ಪ್ರೇಮ್ ತಮ್ಮ ‘ಕೆಡಿ: ದಿ ಡೆವಿಲ್’ ಚಿತ್ರತಂಡ ಮತ್ತು ಭಾಗ್ಯಲಕ್ಷ್ಮೀ ಸೀರಿಯಲ್ ತಂಡ ಆಗಮಿಸಿದೆ. ಡಬಲ್ ಎಲಿಮಿನೇಟ್ ಅಂತ ವಿಷಯ ತಿಳಿಯುತ್ತಲೇ ಸ್ಪರ್ಧಿಗಳು ಆಘಾತಗೊಂಡಿದ್ದಾರೆ.ಈ ವಾರ ಕಾವ್ಯಾ ಅವರನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಸದಸ್ಯರು ನಾಮಿನೇಟ್ ಆಗಿದ್ದಾರೆ.ಅಲ್ಲದೆ ಸ್ಪಂದನಾ ಸೋಮಣ್ಣ ಸಹ ದೊಡ್ಮನೆಯಿಂದ ಗೇಟ್ ಪಾಸ್ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ‘ನನ್ನ ದೇಹ ಚರ್ಚೆಯ ವಿಷಯವಲ್ಲ’ | ಟ್ರೋಲರ್ಸ್‌ಗೆ ಕಿಚ್ಚನ ಮಗಳ ಕೌಂಟರ್



















