ಕಲಬುರಗಿ: ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲವೆಂದು ಕಲಬುರಗಿ ಬಿಜೆಪಿ ಓಬಿಸಿ ಮೋರ್ಚಾ ನಗರಾಧ್ಯಕ್ಷ ದೇವಿಂದ್ರ ನೇತೃತ್ವದಲ್ಲಿ ಡಿಸಿ ಕಚೇರಿ ಎದುರು ಕತ್ತೆ- ಕುದುರೆ ತಂದು ಪ್ರತಿಭಟನೆ ನಡೆಸಲಾಯಿತು.

ಐದು ಗ್ಯಾರಂಟಿಗಳನ್ನು ಕೊಟ್ಟು ಜನರಿಗೆ ಕಾಂಗ್ರೆಸ್ ಸರ್ಕಾರ ಮೂರ್ಖರನ್ನಾಗಿ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಪಂಚಗ್ಯಾರಂಟಿಗಳನ್ನು ಕತ್ತೆಗಳಿಗೆ ಹೋಲಿಸಿ, ಐದು ಕತ್ತೆಗಳನ್ನು ತಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಧರಣಿ ಮಾಡಿದ್ದಾರೆ.
ಕುದುರೆ ಮೇಲೆ ಸಿಎಂ ಸಿದ್ದರಾಮಯ್ಯ ಭಾವಚಿತ್ರದ ಮುಖವಾಡ ಧರಿಸಿ, ಐದು ಕತ್ತೆಗಳೊಂದಿಗೆ ಡಿಸಿ ಕಚೇರಿ ಮುಂದೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ; ಒಂದೇ ವೇದಿಕೆಯಲ್ಲಿ ಅಜಿತ್ ಪವಾರ್-ಸುಪ್ರಿಯಾ ಸುಳೆ | ಪುಣೆ ಪಾಲಿಕೆ ಚುನಾವಣೆಗೆ ಜಂಟಿ ಪ್ರಣಾಳಿಕೆ ಬಿಡುಗಡೆ



















