ಚಾಮರಾಜನಗರ : ದೇಶದಲ್ಲಿ ನರೇಂದ್ರ ಮೋದಿ ಬಂದ ಮೇಲೆ ಬೆಲೆ ಏರಿಕೆಯಾಗಿದೆ. ಪದೇಪದೇ ಬೆಲೆ ಏರಿಕೆ ಮಾಡ್ತಿದ್ದಾರೆ ಎಂದು ಸಚಿವ ಕೆ ವೆಂಕಟೇಶ್ ಆರೋಪಿಸಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ಅವರು, ಜನಸಾಮಾನ್ಯರಿಗೆ ಉಳಿತಾಯ ಮಾಡಿ ಅಂತಾರೆ. ಇವರೇ ಬೆಲೆ ಏರಿಸ್ತಾರೆ. ಬೆಲೆ ಏರಿಸಿಬಿಟ್ಟು ಮತ್ತೆ ಉಳಿಸಿ ಅನ್ನೋದು ಯಾವ ಕೆಲಸ ಎಂಧು ವಾಗ್ದಳಿ ನಡೆಸಿದ್ದಾರೆ.
ಯುದ್ದ ಇರೋದ್ರಿಂದ ಪೆಟ್ರೋಲ್ ಡೀಸೇಲ್ ಬೆಲೆ ಏರಿಕೆ ಒಪ್ಪೋಣ.ಆದ್ರೆ ಯುದ್ದಾನೇ ಇಲ್ಲದಿದ್ದಾಗಲೂ ಬೆಲೆ ಏರಿಕೆ ಮಾಡಿದ್ದಾರಲ್ಲ ಅದೇಕೆ? ಒಂದು ಕಡೆ ಜನಸಾಮಾನ್ಯರನ್ನು ಉಳಿತಾಯ ಮಾಡಿ ಅಂತಾರೆ. ಇನ್ನೊಂದೆಡೆ ಬೆಲೆ ಏರಿಕೆ ಮಾಡ್ತಾರೆ ಎಂದು ಕಿಡಿಕಾರಿದ್ದಾರೆ.
]ಇದನ್ನೂ ಓದಿ : ಶ್ರೀಲಂಕಾ ಕ್ರಿಕೆಟ್ ಬಿಕ್ಕಟ್ಟು : ಮಂಡಳಿ ರಾಜೀನಾಮೆ, ಮಧ್ಯಂತರ ಸಮಿತಿ ರಚನೆ ಬೆನ್ನಲ್ಲೇ ಐಸಿಸಿ ಭೇಟಿ



















