ದಾವಣಗೆರೆ: ವೃದ್ಧ ದಂಪತಿಯ ಕೈ, ಕಾಲು ಕಟ್ಟಿ ಮನೆಯಲ್ಲಿದ್ದ ಚಿನ್ನಾಭರಣವನ್ನು ಖದೀಮರು ದೋಚಿ ಪರಾರಿಯಾಗಿರುವ ಘಟನೆಯೊಂದು ನಡೆದಿದೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾಕನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಐವರು ಮುಸುಕುಧಾರಿಗಳು ಗ್ರಾಮದ ಸಾವಿತ್ರಮ್ಮ (60) ಹಾಗೂ ಮಾದಪ್ಪ (62) ಎಂಬುವರ ಮನೆಗೆ ನುಗ್ಗಿ, ಕೈ, ಕಾಲು ಕಟ್ಟಿ 8.4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಪ್ರತಿರೋಧ ತೋರಿದ್ದಕ್ಕೆ ವೃದ್ಧ ದಂಪತಿ ಮೇಲೆಯೇ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಸಂತೆಬೆನ್ನೂರು (Santebennuru) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.



















