ಬೆಂಗಳೂರು : ಮಗಳ ಹಿಂದೆ ಬಿದ್ದಿದ್ದ ವ್ಯಕ್ತಿಯನ್ನು ಹತ್ಯೆಗೈದ ತಂದೆ ಮತ್ತವರ ಸಂಬಂಧಿಗಳನ್ನ ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಾಗಲಕೋಟೆ ಮೂಲದ ರಮೇಶ್ ಕೊಲೆಯಾದ ವ್ಯಕ್ತಿ.
ಹತ್ಯೆಯ ಬಳಿಕ ಮೃತದೇಹವನ್ನ ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದ ಯುವತಿಯ ತಂದೆ ಈರಯ್ಯ (44), ಸಂಬಂಧಿಕರಾದ ಚಿನ್ನಯ್ಯ (29), ಚೇತನ್ ಮಾದರ (26), ವಿನಾಯಕ (19) ಎಂಬುವರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಈ ಕುರಿತು ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ಜಿ. ಕೆ. ಮಿಥುನ್ ಕುಮಾರ್ ಅವರು ಮಾತನಾಡಿ, ‘ಅಲ್ಲಾಳಸಂದ್ರದ ಬಳಿ ರಾಜಕಾಲುವೆಯಲ್ಲಿ ಮೃತದೇಹ ಪತ್ತೆಯಾಗಿತ್ತು. ಪ್ರಾರಂಭದಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದೆವು. ಅದಾದ ನಂತರ ನಮಗೆ ಕೊಲೆ ಆಗಿದೆ ಎಂಬುದಾಗಿ ಗೊತ್ತಾಯಿತು, ಸದ್ಯ ಆರೋಪಿಗಳನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದೇವೆ ಎಂದು ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಆಸ್ತಿ ವಿಚಾರಕ್ಕೆ ಗಲಾಟೆ ; ಅಣ್ಣನ ಕೊಲೆಯಲ್ಲಿ ಅಂತ್ಯ.. ಆರೋಪಿ ತಮ್ಮನ ಬಂಧನ!


















