ಬೆಂಗಳೂರು: ಎಂಜಿನಿಯರಿಂಗ್ ಪದವಿ ಅಧ್ಯಯನ ಮಾಡುತ್ತಿರುವವರಿಗೆ ಅಮೆಜಾನ್ ಸಂಸ್ಥೆಯು ಭರ್ಜರಿ ಸಿಹಿಸುದ್ದಿ ನೀಡಿದೆ. ‘ಅಮೆಜಾನ್ ಫ್ಯೂಚರ್ ಇಂಜಿನಿಯರ್ ಸ್ಕಾಲರ್ ಶಿಪ್ ಪ್ರೋಗ್ರಾಂ 2026’ (Amazon Future Engineer Scholarship Programme 2026) ಘೋಷಣೆ ಮಾಡಲಾಗಿದ್ದು, ವಿದ್ಯಾರ್ಥಿನಿಯರು ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಹೆಣ್ಣುಮಕ್ಕಳು ತಂತ್ರಜ್ಞಾನ ಶಿಕ್ಷಣವನ್ನು ಸುಲಭವಾಗಿ ಮುಂದುವರಿಸಲು ಮತ್ತು ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಲು ಸ್ಕಾಲರ್ ಶಿಪ್ ನೆರವಾಗಲಿದೆ.
ಸ್ಕಾಲರ್ ಶಿಪ್ ಯೋಜನೆಯ ಪ್ರಮುಖಾಂಶಗಳು
- ಸ್ಕಾಲರ್ ಶಿಪ್ ಮೊತ್ತ: ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಪದವಿ ಮುಗಿಯುವವರೆಗೆ ಪ್ರತಿ ವರ್ಷ 50 ಸಾವಿರ ರೂಪಾಯಿಯಂತೆ ಒಟ್ಟು 2 ಲಕ್ಷ ರೂ.ವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ.
- ಲ್ಯಾಪ್ ಟಾಪ್: ಮೊದಲ ವರ್ಷದ ಅಧ್ಯಯನದಲ್ಲೇ ವಿದ್ಯಾರ್ಥಿನಿಯರಿಗೆ ಲ್ಯಾಪ್ ಟಾಪ್ ಒದಗಿಸಲಾಗುತ್ತದೆ.
- ಅಮೆಜಾನ್ ತಜ್ಞರಿಂದ ವೃತ್ತಿಪರ ಮಾರ್ಗದರ್ಶನ ಹಾಗೂ ಭವಿಷ್ಯದಲ್ಲಿ ಅಮೆಜಾನ್ ಸಂಸ್ಥೆಯಲ್ಲಿ ಇಂಟರ್ನ್ ಶಿಪ್ ಮಾಡಲು ಅವಕಾಶ ನೀಡಲಾಗುತ್ತದೆ.
ಯಾರು ಅರ್ಹರು?
- ವಿದ್ಯಾರ್ಥಿನಿಯರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರು.
- ವಿದ್ಯಾರ್ಹತೆ: ಬಿ.ಇ / ಬಿ.ಟೆಕ್ ಅಥವಾ ಇಂಟಿಗ್ರೇಟೆಡ್ ಎಂ.ಟೆಕ್ ಕೋರ್ಸ್ ಗಳ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರಬೇಕು (ಮುಖ್ಯವಾಗಿ ಕಂಪ್ಯೂಟರ್ ಸೈನ್ಸ್, ಐಟಿ ಅಥವಾ ಸಂಬಂಧಿಸಿದ ಬ್ರ್ಯಾಂಚ್).
- ಅರ್ಜಿದಾರರ ಕುಟುಂಬದ ಒಟ್ಟು ವಾರ್ಷಿಕ ಆದಾಯವು 4 ಲಕ್ಷ ರೂ.ಗಿಂತ ಕಡಿಮೆ ಇರಬೇಕು.
- ಕುಟುಂಬದಲ್ಲಿ ಮೊದಲ ಬಾರಿಗೆ ಪದವಿ ಕೋರ್ಸಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿನಿಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ಅಗತ್ಯವಿರುವ ದಾಖಲೆಗಳು
• 12ನೇ ತರಗತಿಯ ಅಂಕಪಟ್ಟಿ
• ಪ್ರವೇಶ ಪರೀಕ್ಷೆಯ ರ್ಯಾಂಕ್ ಪ್ರಮಾಣಪತ್ರ ಹಾಗೂ ಸೀಟ್ ಅಲಾಟ್ಮೆಂಟ್ ಪತ್ರ
• ಕುಟುಂಬದ ಆದಾಯ ಪ್ರಮಾಣಪತ್ರ
• ಕಾಲೇಜು ಶುಲ್ಕ ಪಾವತಿಸಿದ ರಶೀದಿಗಳು
• ಆಧಾರ್ ಕಾರ್ಡ್
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಮತ್ತು ಆಸಕ್ತ ವಿದ್ಯಾರ್ಥಿನಿಯರು https://ffe.org/amazon-future-engineer/ ವೆಬ್ ಸೈಟ್ ಗೆ ಭೇಟಿ ನೀಡಬೇಕು. ನೋಂದಣಿ ಮಾಡಿಕೊಂಡು ಅರ್ಜಿಯನ್ನು ಭರ್ತಿ ಮಾಡಬೇಕು. ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನವಾಗಿದೆ.


















