ಬೆಂಗಳೂರು : ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎಮ್ಎಸ್ ಬಿಲ್ಡಿಂಗ್ನಲ್ಲಿ ಕಾಂಟ್ರಾಕ್ಟ್ ಬೇಸ್ ಮೇಲೆ ಕೆಲಸ ಮಾಡಿಕೊಂಡಿದ್ದ 28 ವರ್ಷದ ಕವಿತಾ ಜಿ.ಕೆ ಎಂಬ ಮಹಿಳೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಮಹಿಳೆಯ ಸಹೋದರ ದರ್ಶನ್ ಅವರು ನೀಡಿದ ದೂರಿನ ಮೇರೆಗೆ ಸಂಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಹಿಳೆಯ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.

ಸಹೋದರ ದರ್ಶನ್ ನೀಡಿದ ದೂರಿನ ವಿವರ :
ನನ್ನ ಅಕ್ಕ ಕವಿತಾ ಎಮ್ಎಸ್ ಬಿಲ್ಡಿಂಗ್ನ 6ನೇ ಮಹಡಿಯಲ್ಲಿ ಕಾಂಟ್ರಾಕ್ಟ್ ಬೇಸ್ನಲ್ಲಿ ಕೆಲಸ ಮಾಡಿಕೊಂಡಿದ್ದು, ಸೆ.20ರಂದು ಮದ್ಯಾಹ್ನ 2:15 ಗಂಟೆಯ ಸುಮಾರಿಗೆ ನನ್ನ ಅಕ್ಕ ನನಗೆ ಕರೆ ಮಾಡಿ ನಿಮ್ಮ ಭಾವ ನನಗೆ ಕರೆ ಮಾಡಿ ಬೈಯುತ್ತಿದ್ದಾರೆ ಎಂದು ತಿಳಿಸಿದ್ದು, ಅದಕ್ಕೆ ನಾನು ಆಯ್ತು ಸಾಯಂಕಾಲ ಮನೆಗೆ ಬಂದು ಮಾತಾನಾಡುವುದಾಗಿ ತಿಳಿಸಿದ್ದೆನು. ನಂತರ ಸಂಜೆ ಸುಮಾರು 6:45 ಗಂಟೆಗೆ ಮನೆಗೆ ಬಂದು ನೋಡಿದಾಗ ನನ್ನ ಅಕ್ಕ ಕವಿತಾ ಮನೆಯಲ್ಲಿ ಇರಲಿಲ್ಲ. ಈ ವೇಳೆ ನಾನು ನನ್ನ ಅಕ್ಕನ ಮೊಬೈಲ್ ನಂಬರ್ಗೆ ಕರೆ ಮಾಡಿದ್ದೇನೆ. ಅವಳ ಮೊಬೈಲ್ ಫೋನ್ ಮನೆಯಲ್ಲೇ ಇತ್ತು. ಮನೆಯ ಸುತ್ತ ಮುತ್ತ ಹುಡುಕಾಡಿದ ಅಕ್ಕ ಕಾಣಲಿಲ್ಲ. ಆ ಬಳಿಕ ನಾನು ಸಂಬಂಧಿಂದಿಕರಿಗೆ ಹಾಗೂ ಅವರ ಸ್ನೇಹಿತರಿಗೆ ಕರೆ ಮಾಡಿ ವಿಚಾರಿಸಿದಾಗಲೂ ಅಕ್ಕ ಪತ್ತೆಯಾಗಿಲ್ಲ. ಇನ್ನು, ಮನೆಯ ವಾಷಿಂಗ್ ಮೆಷಿನ್ ಮೇಲೆ ನನ್ನ ಅಕ್ಕ ಬರೆದಿಟ್ಟ ಪತ್ರ ಸಿಕ್ಕಿತು. ಅದರಲ್ಲಿ ನನಗೆ ಬೇಜಾರಾಗಿ ಮನೆ ಬಿಟ್ಟು ಹೋಗುತ್ತಿದೇನೆ, ನನ್ನನ್ನು ಯಾರೂ ಹುಡುಕಬೇಡಿ ಎಂದು ಬರೆದಿದ್ದರು ಎಂದು ಸಹೋದರ ದರ್ಶನ್ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸದ್ಯ ಘಟನಾ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸಂಜಯನಗರ ಪೊಲೀಸರು, ತನಿಖೆ ಮುಂದುವರೆಸಿದ್ದು, ಮಹಿಳೆಯ ಪತ್ತೆಗಾಗಿ ಪ್ರಕಟಣೆ ಹೊರಡಿಸಿದ್ದಾರೆ.
ಕಾಣೆಯಾಗಿರುವ ಮಹಿಳೆಯ ವಿವರ |
ಹೆಸರು : ಶ್ರೀಮತಿ ಕವಿತಾ ಜಿ.ಕೆ
ವಯಸ್ಸು : 28 ವರ್ಷ
ತಂದೆ : ಗುರುಮಲ ಶೆಟ್ಟಿ
ತಾಯಿ : ಶ್ರೀಮತಿ ಜಯಲಕ್ಷ್ಮಿ
ಗಂಡ : ಮಹದೇವಸ್ವಾಮಿ
ವಿದ್ಯಾಭ್ಯಾಸ : ಬಿಕಾಂ
ಚಹರೆ : ಗೋಧಿ ಮೈ ಬಣ್ಣ, ಗುಂಡು ಮುಖ, ಸಾದಾರಣ ಮೈಕಟ್ಟು, 4.8 ಅಡಿ ಎತ್ತರ
ಭಾಷೆ : ಕನ್ನಡ
ಧರಿಸಿರುವ ಬಟ್ಟೆ : ಹಸಿರು ಬಣ್ಣದ ಚೂಡಿದಾರ..
ಈ ಮಹಿಳೆಯ ಬಗ್ಗೆ ಮಾಹಿತಿ ಇದ್ದಲ್ಲಿ ಸಂಜಯನಗರ ಪೊಲೀಸ್ ಠಾಣೆಗೆ ಸಂಪರ್ಕಿಸಲು ಕೋರಲಾಗಿದೆ. 080 22942533, 9480801332
ಇದನ್ನೂ ಓದಿ : ನೇಪಾಳದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ | ಜೆನ್ ಝೀ-ಕಮ್ಯುನಿಸ್ಟ್ ಪಕ್ಷದ ಯುವಕರ ನಡುವೆ ಘರ್ಷಣೆ.. ಕರ್ಫ್ಯೂ ಜಾರಿ



















