ಚಾಮರಾಜನಗರ : ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಹನೂರಿನಲ್ಲಿ ಮೂವರು ಬಲಿಯಾಗಿದ್ದ ವೇಳೆ ಸ್ಥಳದಲ್ಲಿದ್ದರೂ ಬಚಾವಾಗಿದ್ದ ಮಹಿಮದಾಸ್ ಇದೀಗ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ್ದಾನೆ.
ವಿಡಿಯೋದಲ್ಲಿ ಏನಿದೆ?
ಆ.15ರಂದು ಬೆಳಗಿನ ಜಾವ 5:20 ಆಗಿತ್ತು. ಈ ವೇಳೆ ನಾನು ಬೆಟ್ಟದಿಂದ ಕೆಳಗಿಳಿದು ಬಂದಿದ್ದೆ. ಅರಣ್ಯ ಇಲಾಖೆ ಸಿಬ್ಬಂದಿ ಬಂದರು, ಕೂಡಲೇ ಶೂಟ್ ಮಾಡಿದರು. ಇದರಿಂದ ಭಯಗೊಂಡು ಓಡಿ ಹೋದೆ. 5 ನಿಮಿಷ ಆದ್ಮೇಲೆ ಯಾವುದೇ ಶಬ್ದ ಇರಲಿಲ್ಲ. ನಂಗೆ ಹುಷಾರಿರಲಿಲ್ಲ ಹೀಗಾಗಿ ನಾನು ಅಲ್ಲಿಂದ ಓಡಿ ಮನೆಗೆ ಬಂದೆ, ಬಳಿಕ ನನ್ನನ್ನು ಆಸ್ಪತ್ರೆಗೆ ಸೇರಿಸಿದರು. ಇದೀಗ ಅರಣ್ಯ ಇಲಾಖೆಯವರು ಸಾಕ್ಷಿ ಆಗಲು ನನ್ನನ್ನು ಹುಡುಕುತ್ತಿದ್ದಾರೆ. ನಂಗೆ ಭಯವಾಗ್ತಿದೆ. ಪೊಲೀಸರೇ ನನಗೆ ರಕ್ಷಣೆ ಕೊಡಬೇಕು ಎಂದು ಹೇಳಿದ್ದಾನೆ.
ಸದ್ಯ ಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿ ಪ್ರಕರಣವನ್ನ ಸರ್ಕಾರ ಮ್ಯಾಜಿಸ್ಟ್ರೇಟ್ ತನಿಖೆ ನಡೆಸುವಂತೆ ಅಧಿಕೃತವಾಗಿ ಆದೇಶಿಸಿದ್ದು, 7 ದಿನದೊಳಗಾಗಿ ತನಿಖೆ ನಡೆಸಿ ವರದಿ ನೀಡಲು ಸೂಚಿಸಿದೆ. ಕೊಳ್ಳೇಗಾಲ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ನೇತೃತ್ವದಲ್ಲಿ ತನಿಖೆ ನಡೆಯಲಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ ಕ್ರಾಂತಿ ಗೌಡ್‌ಗೆ ಸರ್ಪ್ರೈಸ್ ನೀಡಿದ ಪಾಂಡ್ಯ : ಆರಾಧ್ಯ ದೈವನಿಂದ ಸಿಕ್ತು ವಿಶೇಷ ಜನ್ಮದಿನದ ಉಡುಗೊರೆ



















