ಉಡುಪಿ : ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ಕಾಡುಗಳ ವಿಶಿಷ್ಟ ಜೀವವೈವಿಧ್ಯಕ್ಕೆ ಜಾಗತಿಕ ಮನ್ನಣೆ ದೊರಕಿಸಿಕೊಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಮಹತ್ವದ ಹೆಜ್ಜೆ ಇರಿಸಿದೆ.
ಪ್ರಕೃತಿ ಸಮತೋಲನದ ದೃಷ್ಟಿಯಿಂದ ಸೂಕ್ಷ್ಮ ಹಾಗೂ ಅಪರೂಪದ ಪ್ರಭೇದಗಳಾದ “ಮಲಬಾರ್ ಟ್ರೀ ಟೋಡ್ (ಮರಗಂತಿ) ಕಪ್ಪೆಗೆ “ರಾಜ್ಯ ಉಭಯಚರ’ ಹಾಗೂ ಸ್ಥಳೀಯ ಪ್ರಭೇದವಾದ “ತುಡುವೆ ಜೇನು‘ ನೊಣಕ್ಕೆ “ರಾಜ್ಯ ಕೀಟ’ ಸ್ಥಾನಮಾನ ನೀಡಲು ಸರ್ಕಾರ ಕ್ರಮವಹಿಸಿದ್ದು, ರಾಜ್ಯ ವನ್ಯಜೀವಿ ಮಂಡಳಿ ಅನುಮೋದನೆ ಬೆನ್ನಲ್ಲೇ ಅಧಿಕೃತ ಮುದ್ರೆ ಬೀಳಲಿದೆ.
ಆಗುಂಬೆ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಸೋಮೇಶ್ವರ ವನ್ಯಜೀವಿ ವಲಯ, ಕೊಲ್ಲೂರು ವನ್ಯಜೀವಿ ಧಾಮ, ಹಾಗೆಯೇ ಹೊರಜಿಲ್ಲೆಯ ಪಶ್ಚಿಮಘಟ್ಟ ವ್ಯಾಪ್ತಿ ಕಾಡುಗಳಲ್ಲಿ ಈ ಕಪ್ಪೆಗಳು, ತುಡುವೆ ಜೇನು ನೊಣ ಕಾಣ ಸಿಗುತ್ತವೆ.
“ಪಶ್ಚಿಮಘಟ್ಟಗಳಲ್ಲಿ ಕಂಡುಬರುವ ವಿಶಿಷ್ಟ ಪ್ರಭೇದದ ಕಪ್ಪೆ ‘ಮಲಬಾರ್ ಟ್ರೀ ಟೋಡ್’ ಅನ್ನು ‘ರಾಜ್ಯ ಉಭಯ ಜೀವಿ’ ಹಾಗೂ ತುಡುವೆ ಜೇನಿಗೆ ‘ರಾಜ್ಯ ಕೀಟ’ ಎಂಬುದಾಗಿ ಘೋಷಿಸುವ ಬಗ್ಗೆ ಪ್ರಸ್ತಾಪ ಸರ್ಕಾರದ ಮುಂದೆ ಇದೆ. ಈ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು” ಎಂದು ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಇದನ್ನೂ ಓದಿ : ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಧ್ಯೆ ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್ : ಇಂದು ಬೆಲೆ ಇಳಿಕೆ!



















