ಅಹಮದಾಬಾದಿನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಬದುಕುಳಿದ ವ್ಯಕ್ತಿಯ ಪರಿಸ್ಥಿತಿ ಯಾರಿಗೂ ಬೇಡ. ತಾನೊಬ್ಬನೇ ಬದುಕಿದ್ದೇನೆ ಎಂದು ಖುಷಿ ಪಡಬೇಕೆ, ತನ್ನೊಂದಿಗೆ ಇದ್ದವರೆಲ್ಲಾ ಕಣ್ಮುಂದೆಯೇ ಹೋದರಲ್ಲಾ ಎಂದು ಮರುಕ ಪಡಬೇಕೆ ಇದೆರಡರ ನಡುವಿನ ಗೊಂದಲದಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ ವಿಶ್ವಾಸ್ ಕುಮಾರ್ ರಮೇಶ್. ಆ ವ್ಯಕ್ತಿ ಈಗ ಹೇಗಿದ್ದಾನೆ? ಅವನ ಮನಸ್ಥಿತಿ ಈಗ ಹೇಗಿದೆ ಗೊತ್ತಾ? ಈ ಸ್ಟೋರಿ ನೋಡಿ
ಜೂನ್ 12ರಂದು ಅಹಮದಾಬಾದಿನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ಬೋಯಿಂಗ್, 787 ಡ್ರೀಮ್ಲೈನರ್ ವಿಮಾನ ಬಿಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಕಟ್ಟಡಕ್ಕೆ ಡಿಕ್ಕಿ ಹೊಡೆದು ಪತನಗೊಂಡಿತ್ತು. ಅದ್ರಲ್ಲಿ ಬಲಿಯಾಗಿದ್ದು, 260 ಜೀವಗಳು. ಆದ್ರೆ ಅದಷ್ಟವಶಾತ್ ಓರ್ವ ಮಾತ್ರ ಬದುಕುಳಿದಿದ್ದ ಅದು ಆತನ ಏಳು ಜನ್ಮಗಳ ಪುಣ್ಯ ಅಂದ್ರೆ ತಪ್ಪಾಗಲಾರದು, ಅವರು ತಮ್ಮನ್ನು “ಲಕ್ಕಿಯಸ್ಟ್ ಮ್ಯಾನ್” ಎಂದು ಹೇಳಿಕೊಂಡರೂ, ಆದರೆ ಈ ದುರಂತದ ನಂತರ ಅವರ ಜೀವನದಲ್ಲಿ ಬಂದ ಬದಲಾವಣೆಗಳು ಇಂದಿಗೂ ಸಹ ತುಂಬಾ ನೋವಿನಿಂದಲೇ ಕೂಡಿವೆ. ಇದನ್ನೂ ಓದಿ : ಪ್ರಾಥಮಿಕ ಕೃಷಿ ಸಹಕಾರ ಸಂಘದಲ್ಲಿ 3 ಹುದ್ದೆಗಳ ನೇಮಕ: 83 ಸಾವಿರ ರೂ. ಸ್ಯಾಲರಿ
ಮೂಲತಃ ಬ್ರಿಟಿಷ್ ಪ್ರಜೆಯಾದ ವಿಶ್ವಾಸ್ ಕುಮಾರ್ ರಮೇಶ್, ಅವರಿದ್ದ ವಿಮಾನವು ಅಹಮದಾಬಾದ್‌ನ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಬಿದ್ದಾಗ ಅದೃಷ್ಟವಶಾತ್ ಅವರು ಬದುಕುಳಿದರು. ಆದ್ರೆ ಅವರ ತಮ್ಮ ಅಜಯ್ ಆ ಅಪಘಾತದಲ್ಲಿ ಸಾವನ್ನಪ್ಪಿದರು. ಈ ಕುರಿತು “ನನ್ನ ತಮ್ಮನನ್ನು ಕಳೆದುಕೊಂಡು ಬದುಕಿರುವುದು ನನಗೆ ಇಂದಿಗೂ ನಂಬಲಾಗುವುದಿಲ್ಲ. ಇದು ಒಂದು ಅಚ್ಚರಿಯ ವಿಷಯ ಬಿಬಿಸಿ ಸಂದರ್ಶನದಲ್ಲಿ ವ್ಯಕ್ತಪಡಿಸಿದ್ದಾರೆ.
ನನ್ನ ಸಹೋದರ ನನ್ನ ಬೆನ್ನೆಲುಬಾಗಿದ್ದ, ಅವನು ಕಳೆದ ಕೆಲ ವರ್ಷಗಳಿಂದ ಎಲ್ಲ ವಿಷಯಗಳಲ್ಲೂ ನನ್ನೊಂದಿಗೆ ಇದ್ದ. ಆದ್ರೆ ಈಗ ನಾನು ಸಂಪೂರ್ಣ ಒಂಟಿಯಾಗಿದ್ದೇನೆ. ನನ್ನ ಹೆಂಡತಿ ಮತ್ತು ಮಗನೊಂದಿಗೂ ಮಾತನಾಡುವುದಿಲ್ಲ. ಮನೆಯಲ್ಲೇ ಸಂಪೂರ್ಣವಾಗಿ ಮೌನವಾಗಿಯೇ ಇರುತ್ತೇನೆ ಎಂದು ದುಖಿಃತರಾದರು.
ಮನೆಗೆ ಹಿಂದಿರುಗಿರುವ ರಮೇಶ್‌ಗೆ ಆ ದಿನಗಳ ನೆನಪು ಇನ್ನೂ ಕಾಡುತ್ತಿದೆಯಂತೆ, ಪತ್ನಿ,ಮನೆಯವರು ಯಾರ ಬಳಿಯೂ ಮಾತನಾಡದೆ ರೂಮಿನಲ್ಲಿ ಒಂಟಿಯಾಗಿ ಇರುತ್ತಿದ್ದೇನೆ.ನಾವೆಲ್ಲರೂ ಮಾನಸಿಕವಾಗಿ ನೊಂದಿದ್ದೇವೆ, ನನ್ನ ತಾಯಿ ಕೂಡಾ ನಾಲ್ಕು ತಿಂಗಳಿನಿಂದ ಮನೆಯ ಹೊರಗೆ ಹೋಗಿ ಕೂರುತ್ತಿದ್ದಾರೆ. ಯಾರೊಂದಿಗೂ ಅಷ್ಟು ಮಾತನಾಡುತ್ತಿಲ್ಲ. ಈಗ ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ, 21,500 ಯುಕೆ ಪೌಂಡ್‌ಗಳ ಮಧ್ಯಂತರ ಪರಿಹಾರವನ್ನು ನೀಡಿದೆ. ಆದರೆ ಅದು ಅವರ ದೈನಂದಿನ ಅಗತ್ಯಗಳನ್ನು ಪೂರೈಸಲು ಸಾಕಾಗುತ್ತಿಲ್ಲ, ಇದರಿಂದ ಅವರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.
ಅಪಘಾತದ ನಂತರ ರಮೇಶ್ ಅವರಿಗೆ ತಲೆ, ಕಾಲು ಹಾಗೂ ಎದೆ ಭಾಗದಲ್ಲಿ ಹಲವು ಗಾಯಗಳು ಆಗಿದ್ದವು. ಅವರು ಸುಮಾರು ಮೂರು ವಾರಗಳ ಕಾಲ ಅಹಮದಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ವೈದ್ಯರ ಪ್ರಕಾರ, ಅವರ ಶರೀರದ ಸ್ಥಿತಿ ಈಗ ಸ್ಥಿರವಾಗಿದೆ. ಆದರೆ ಮಾನಸಿಕ ಸ್ಥಿತಿಯಲ್ಲಿ ಕುಗ್ಗಿ ಹೋಗಿದ್ದಾರೆ.
ವಿಶ್ವಾಸ್ ಕುಮಾರ್ ಲಂಡನ್ ಗ್ಯಾಟ್‌ವಿಕ್-ಬೌಂಡ್‌ಗೆ ಹೊರಟಿದ್ದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನದ 11A ಸೀಟ್‌ನಲ್ಲಿ ಕುಳಿತಿದ್ದರು. ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್-ಆಫ್ ಆದ ತಕ್ಷಣ ವಿಮಾನ ಪತನಗೊಂಡಿತು. ಈ ದುರಂತದಲ್ಲಿ ಸಮೀಪದ ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್‌ನ ಭಾಗಗಳು ನಾಶವಾಗಿ, ನೆಲದ ಮೇಲೆ 19 ಮಂದಿ ಸಾವನ್ನಪ್ಪಿದ್ದರು. ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೋ ನೀಡಿದ ಪ್ರಾಥಮಿಕ ವರದಿಯ ಪ್ರಕಾರ, ಟೇಕ್-ಆಫ್ ಆದ ಕೆಲವೇ ಸೆಕೆಂಡ್‌ಗಳಲ್ಲಿ ಎಂಜಿನ್‌ಗಳಿಗೆ ಇಂಧನ ಪೂರೈಕೆ ಸ್ಥಗಿತಗೊಂಡಿರುವುದೇ ಈ ದುರಂತಕ್ಕೆ ಕಾರಣ ಎಂದು ತಿಳಿದುಬಂದಿದೆ. ಈ ದುರಂತವು ಏರ್ ಇಂಡಿಯಾ ವಿಮಾನದ ಇಂಧನ ಪೂರೈಕೆ ವೈಫಲ್ಯದಿಂದ ಸಂಭವಿಸಿದೆ ಎಂದು ತನಿಖೆ ಸೂಚಿಸಿದೆ.



















