ಬಾಲಕಿಯನ್ನು ಶಾಲೆಗೆ ಬಿಡಲು ಕಾವಲುಗಾರನಂತೆ ಮರಿಯಾನೆ ಹೊರಟಿರುವ ಹೃದಯ ಸ್ಪರ್ಶಿ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಪುಟ್ಟ ಹುಡುಗಿಯನ್ನು ಶಾಲೆಗೆ ಬಿಟ್ಟು ಬರಲು ಮರಿಯಾನೆಯ ವಿಡಿಯೋ ವೈರಲ್ ಆಗಿದೆ. ಈ ಮುದ್ದಾದ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ.
ಪುಟ್ಟ ಹುಡುಗಿಯು ಶಾಲೆಗೆ ಹೋಗಲು ರೆಡಿಯಾಗಿದ್ದು, ಆಕೆಯ ಹಿಂದೆಯೇ ಆನೆಯೊಂದು ಹೋಗುತ್ತಿರುವುದನ್ನು ಕಾಣಬಹುದು. ಈ ದೃಶ್ಯವು ಆನೆಯು ಈ ಪುಟ್ಟ ಹುಡುಗಿಯನ್ನು ಜೋಪಾನವಾಗಿ ಶಾಲೆಗೆ ಬಿಟ್ಟು ಬರಲು ಹೊರಟಂತಿದೆ. ಈ ಪುಟಾಣಿಯೂ ಆನೆಯ ಜತೆಗೆ ಹೋಗುತ್ತಾ ಎಂಜಾಯ್ ಮಾಡುತ್ತಿರುವುದನ್ನು ನೀವು ನೋಡಬಹುದು.
ಈ ವಿಡಿಯೋ ಇದುವರೆಗೆ ಅರವತ್ತೊಂದು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಮುಗ್ಧ ಪ್ರಾಣಿಗಳ ಜತೆಗಿನ ಸ್ನೇಹವೇ ಸುಂದರ ಎಂದಿದ್ದಾರೆ. ಮುದ್ದಾಗಿದೆ, ದಯವಿಟ್ಟು ಅದಕ್ಕೆ ಆಹಾರ ನೀಡಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ನನಗೂ ಕೂಡ ಈ ಆನೆಯೊಂದಿಗೆ ಸ್ನೇಹ ಬೆಳೆಸಬೇಕೆನಿಸುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ದಾಸೋಹರತ್ನ ದಾನೇಶ್ವರ ಸ್ವಾಮೀಜಿ ಲಿಂಗೈಕ್ಯ | ಶೋಕ ಸಾಗರದಲ್ಲಿ ಭಕ್ತಗಣ



















