ದೆಹಲಿ : ಮದುವೆ ಸಮಾರಂಭದಲ್ಲಿ ಖುಷಿಯಿಂದ ನೃತ್ಯ ಮಾಡುತ್ತಿದ್ದ ಪತ್ನಿಗೆ ಪತಿಯೊಬ್ಬ ಕಪಾಳ ಮೋಕ್ಷ ಮಾಡಿದ ಅಘಾತಕಾರಿ ಘಟನೆ ನಡೆದಿದೆ. ಮದುವೆ ಸಮಾರಂಭದಲ್ಲಿ ಅತಿಥಿಗಳ ಸಮ್ಮುಖದಲ್ಲಿ ಮಹಿಳೆಯೊಬ್ಬರು ನೃತ್ಯ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಆಕೆಯ ಪತಿ ಆಗಮಿಸಿ ಕುಣಿಯುತ್ತಾ ಕುಣಿಯುತ್ತಲೇ ಪತ್ನಿ ಮೇಲೆ ಹಲ್ಲೆ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಕ್ರಮ ಕೈಗೊಳ್ಳಿ ಎಂದಿದ್ದಾರೆ.
ಪತಿಯ ಹಲ್ಲೆ ಕಂಡು ದಿಗ್ಭ್ರಮೆಗೊಂಡ ಆಕೆ ಆರಂಭದಲ್ಲಿ ತಾನು ಕೂಡ ಒದೆಯುವ ಮೂಲಕ ಪ್ರತಿರೋಧ ತೋರುತ್ತಾಳೆ. ಆದರೆ, ನಂತರ ಆತ ಆಕೆಯ ಎದೆಗೆ ಒದೆಯುತ್ತಲೇ ಇರುತ್ತಾನೆ. ವಿಚಿತ್ರವೆಂದರೆ, ಹಿನ್ನೆಲೆಯಲ್ಲಿ ಹಾಡು ಕೇಳಿಸುತ್ತಿದ್ದ ಲಯಕ್ಕೆ ಅನುಗುಣವಾಗಿ ಆತ ಹೊಡೆದಿದ್ದಾನೆ. ಆದರೆ ಈ ಸಮಯದಲ್ಲಿ ನೆರದಿದ್ದ ಜನರಲ್ಲಿ ಯಾರೊಬ್ಬರು ಮಹಿಳೆಯ ರಕ್ಷಣೆಗೆ ಬಂದಿಲ್ಲ ಹೊಡೆಯುತ್ತಾ ಹೊರ ಹೋಗುವವರೆಗೂ ಹಲ್ಲೆ ಮಾಡುತ್ತಲೇ ಇದ್ದ ಪಾಪಿ ಪತಿ.
ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಈ ರೀತಿಯಾಗಿ ಹಲ್ಲೆ ನಡೆಯುತ್ತಿದ್ದರೂ ಮಧ್ಯ ಪ್ರವೇಶಿಸದ ಜನರ ವರ್ತನೆಯ ಬಗ್ಗೆ ಟೀಕೆ ಮಾಡಿದ್ದಾರೆ. ನೆಟ್ಟಿಗರೊಬ್ಬರು ಪತ್ನಿ ಸ್ಟೆಪ್ ನೋಡಿ ಆತನಿಗೆ ಶಾಕ್ ಆಗಿರಬೇಕು ಎಂದು ಬರೆದು ಕೊಂಡಿದ್ದಾರೆ. ಮತ್ತೊಬ್ಬರು ಆತ ಹಾಡಿನ ಲಯಕ್ಕೆ ತಕ್ಕಂತೆ ಎದೆಮೇಲೆ ಹೊಡೆದಿದದ್ದಾನೆ. ಇಂತಹ ಕಟುಕರು ಸಮಾಜದಲ್ಲಿ ಇದ್ದರಾ? ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ : ಆರ್ಯಭಟ ಸಂಶೋಧನಾ ಸಂಸ್ಥೆಯಲ್ಲಿ 3 ಹುದ್ದೆಗಳ ನೇಮಕ : ಬೆಂಗಳೂರಿನಲ್ಲೇ ಉದ್ಯೋಗ



















