ಬೆಂಗಳೂರು : ನಗರದ ಕೋಟೆ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಧರ್ಮಸಂಸ್ಥೆಯ ಆಡಳಿತ ಸಮಿತಿಯ ಅಧ್ಯಕ್ಷರ ಆಯ್ಕೆ ವಿವಾದಕ್ಕೆ ಸಂಬಂಧಿಸಿದಂತೆ, ಆಡಳಿತ ಮಂಡಳಿ ಸದಸ್ಯ, ವಕೀಲರಾದ ನಿರಂಜನ್ ಗಾಣಿಗ ಅವರು ಸಲ್ಲಿಸಿದ ದೂರಿನ ಬೆನ್ನಲ್ಲೇ ಜಿಲ್ಲಾಧಿಕಾರಿಗಳ ಕಚೇರಿ ಕ್ರಮ ಕೈಗೊಂಡಿದೆ. ದೂರಿನ ಕುರಿತು ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಸಹಾಯಕ ಆಯುಕ್ತರಿಗೆ (ಮುಜರಾಯಿ ಕಾಮಗಾರಿಗಳು) ಜಿಲ್ಲಾಧಿಕಾರಿಗಳ ಕಚೇರಿ ಸೂಚನೆ ನೀಡಿದೆ.

ವಕೀಲ ನಿರಂಜನ್ ಗಾಣಿಗ ಅವರು ಜೂನ್ 17 ಹಾಗೂ ಜೂನ್ 20ರಂದು ಸಲ್ಲಿಸಿರುವ ದೂರನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗಳ ಕಚೇರಿ ಈ ಕ್ರಮ ಕೈಗೊಂಡಿದೆ.
ವಕೀಲ ನಿರಂಜನ್ ಗಾಣಿಗ ಅವರು ಸಲ್ಲಿಸಿರುವ ದೂರಿನಲ್ಲಿ ಧರ್ಮಸಂಸ್ಥೆಯ ಅಧ್ಯಕ್ಷರಾಗಿರುವ ಸುರೇಶ್ ಎಸ್. ಅವರು ಕಾನೂನುಬದ್ಧವಾಗಿ ಆಯ್ಕೆಯಾಗಿಲ್ಲ. ಅಲ್ಲದೆ ಸರ್ಕಾರದ ನಿಯಮಾವಳಿಗಳು ಹಾಗೂ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಧರ್ಮಸಂಸ್ಥೆಯ ಟ್ರಸ್ಟ್ ಡೀಡ್‌ನ ನಿಯಮಗಳನ್ನು ಪಾಲಿಸಿಲ್ಲ ಎಂದು ಆರೋಪಿಸಿದ್ದರು.
ಈ ಆರೋಪಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿ, ದೂರಿನಲ್ಲಿ ಉಲ್ಲೇಖಿಸಿರುವ ಎಲ್ಲಾ ಅಂಶಗಳ ಬಗ್ಗೆ ವಾಸ್ತವಾಂಶಗಳೊಂದಿಗೆ ವರದಿ ಸಲ್ಲಿಸುವಂತೆ ಸಹಾಯಕ ಆಯುಕ್ತರಿಗೆ ಜಿಲ್ಲಾಧಿಕಾರಿಗಳ ಕಚೇರಿ ಸೂಚನೆ ನೀಡಿದೆ.
ಇದನ್ನೂ ಓದಿ : ಇ-20 ಪೆಟ್ರೋಲ್ ವಿವಾದ : ಮನೆಯಲ್ಲಿ ಕಾರಿನ ಮೈಲೇಜ್ ನಿಖರವಾಗಿ ಅಳೆಯಲು ಸಾಧ್ಯವಿಲ್ಲ ಎಂದ ಗಡ್ಕರಿ!



















