ಚಿಕ್ಕಬಳ್ಳಾಪುರ : ಎರಡು ವರ್ಷದ ಕಂದಮ್ಮ ಮೊದಲ ಮಹಡಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಹೃದಯ ವಿದ್ರಾವಕ ಘಟನೆ ನಗರದ ಪಿಳ್ಳಪ್ಪ ಕಾಂಪ್ಲೆಕ್ಸ್ ಬಳಿ ನಡೆದಿದ್ದು, ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಗೊಲ್ಲದಡ್ಡಿ ಗ್ರಾಮದ ನಾರಾಯಣಸ್ವಾಮಿ ಹಾಗೂ ಮಧು ದಂಪತಿ ತಮ್ಮ ಪುತ್ರಿ ಸಂಗೀತಾಗೆ ಬಟ್ಟೆ ತೆಗೆದುಕೊಳ್ಳಲು ನಗರದ ಬಟ್ಟೆ ಅಂಗಡಿಗೆ ಬಂದಿದ್ದರು. ತಂದೆ-ತಾಯಿ ಬಟ್ಟೆ ಖರೀದಿಸುತ್ತಿದ್ದ ವೇಳೆ, ಬಾಲಕಿ ಸಂಗೀತಾ ಆಟವಾಡುತ್ತಾ ಅಂಗಡಿಯ ಮುಂಭಾಗಕ್ಕೆ ಬಂದಿದ್ದಾಳೆ.
ಈ ವೇಳೆ ಆಯತಪ್ಪಿದ ಮಗು ಮೊದಲ ಮಹಡಿಯಿಂದ ಕೆಳಗೆ ಬಿದ್ದಿದೆ. ತಕ್ಷಣ ಸ್ಥಳೀಯರು ಹಾಗೂ ಪೋಷಕರು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ. ಎರಡು ವರ್ಷದ ಸಂಗೀತಾ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದ್ದು, ಘಟನೆ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ
ಇದನ್ನೂ ಓದಿ : ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಅಗ್ನಿ ಅವಘಡ.. ತಪ್ಪಿದ ಭಾರೀ ಅನಾಹುತ!



















