ಬೆಂಗಳೂರು : ಸ್ವಾತಂತ್ರ್ಯ ದಿನಾಚರಣೆ ಹೊತ್ತಿನಲ್ಲಿ ಅಮೆಜಾನ್ ಜತೆಗೆ ಫ್ಲಿಪ್ ಕಾರ್ಟ್ ಕೂಡ ಗ್ರಾಹಕರಿಗೆ ಭರ್ಜರಿ ಆಫರ್ ಗಳನ್ನು ಘೋಷಿಸಿದೆ. ಅದರಲ್ಲೂ, ಹೊಸ ಐಫೋನ್ (iPhone) ಖರೀದಿಸಲು ಕಾಯುತ್ತಿರುವ ಗ್ರಾಹಕರಿಗೆ ಫ್ಲಿಪ್ಕಾರ್ಟ್ (Flipkart) ಅತ್ಯುತ್ತಮ ಅವಕಾಶ ನೀಡಿದೆ. ಸ್ವಾತಂತ್ರ್ಯ ದಿನಾಚರಣೆಯ ವಿಶೇಷವಾಗಿ ‘ಫ್ರಿಡಂ ಸೇಲ್ 2026’ (Flipkart Freedom Sale 2026) ಅನ್ನು ಆಗಸ್ಟ್ 8 ರಿಂದ ಅಧಿಕೃತವಾಗಿ ಆರಂಭಿಸುವುದಾಗಿ ಇ-ಕಾಮರ್ಸ್ ದೈತ್ಯ ಫ್ಲಿಪ್ ಕಾರ್ಟ್ ಘೋಷಿಸಿದೆ. ವಿವಿಧ ಐಫೋನ್ ಮಾಡೆಲ್ಗಳ ಮೇಲೆ ಭಾರಿ ರಿಯಾಯಿತಿಗಳು ಲಭ್ಯವಿರಲಿವೆ.
ಪ್ಲಸ್, ಬ್ಲ್ಯಾಕ್ ಮತ್ತು ಫ್ಲಿಪ್ ಕಾರ್ಟ್ ಕಾರ್ಡ್ ಸದಸ್ಯರು ಸೇಲ್ ಅಧಿಕೃತವಾಗಿ ಆರಂಭವಾಗುವುದಕ್ಕೂ 24 ಗಂಟೆಗಳ ಮುಂಚಿತವಾಗಿ ಈ ಡೀಲ್ ಗಳನ್ನು ಪಡೆದುಕೊಳ್ಳಬಹುದು. ಇದರೊಂದಿಗೆ ಎಸ್ ಬಿಐ (SBI) ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವವರಿಗೆ ಶೇಕಡಾ 10 ರಷ್ಟು ರಿಯಾಯಿತಿ ಸಿಗಲಿದೆ.
ಫ್ಲಿಪ್ಕಾರ್ಟ್ ಸೇಲ್ ಟೀಸರ್ ಪ್ರಕಾರ, ಫ್ರೀಡಂ ಸೇಲ್ ಸಮಯದಲ್ಲಿ ಐಫೋನ್ 17 ಪ್ರೊ ಮ್ಯಾಕ್ಸ್ (iPhone 17 Pro Max) ಮೇಲೆ 8,000 ರೂ.ವರೆಗೆ ರಿಯಾಯಿತಿ ಸಿಗಲಿದ್ದು, ಇದರಿಂದ ಇದರ ಬೆಲೆಯು ರೂ. 1,49,900 ರಿಂದ ರೂ. 1,41,900 ಕ್ಕೆ ಇಳಿಯಲಿದೆ. ಇದರೊಂದಿಗೆ, ಎಸ್ ಬಿಐ (SBI) ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಥವಾ ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುವ ಗ್ರಾಹಕರು 5,000 ರೂ.ವರೆಗಿನ ಇನ್ ಸ್ಟಂಟ್ ರಿಯಾಯಿತಿಯನ್ನು ಪಡೆದುಕೊಳ್ಳಬಹುದು, ಇದರಿಂದ ಪರಿಣಾಮಕಾರಿ ಖರೀದಿ ಬೆಲೆಯು 1,36,900 ರೂ.ಗೆ ತಲುಪುತ್ತದೆ.
ಉಳಿತಾಯ ಇಲ್ಲಿಗೆ ಮುಗಿಯುವುದಿಲ್ಲ. ಫ್ಲಿಪ್ಕಾರ್ಟ್ ಅರ್ಹ ವಹಿವಾಟುಗಳ ಮೇಲೆ ಶೇಕಡಾ 5 ರಷ್ಟು ಕ್ಯಾಶ್ ಬ್ಯಾಕ್ ಅನ್ನು ಸಹ ನೀಡುತ್ತಿದ್ದು, ಇದು ರಿಯಾಯಿತಿ ಪಡೆದ ಮೊತ್ತದ ಮೇಲೆ ಸುಮಾರು 4,000 ರೂ. ಆಗಿರುತ್ತದೆ. ಈ ಕ್ಯಾಶ್ ಬ್ಯಾಕ್ ಅನ್ನು ಒಳಗೊಂಡ ನಂತರ, ಇದರ ಪರಿಣಾಮಕಾರಿ ಬೆಲೆಯು ಸುಮಾರು 1,32,900 ರೂ.ಗೆ ಇಳಿಯಲಿದೆ. ಇದರಿಂದ ಗ್ರಾಹಕರಿಗೆ 17 ಸಾವಿರ ರೂ. ಉಳಿಯಲಿದೆ.
ಇದನ್ನೂ ಓದಿ : ನಾಳೆಯಿಂದ ಅಮೆಜಾನ್ ಫ್ರೀಡಂ ಸೇಲ್ : ಸ್ಮಾರ್ಟ್ ಫೋನ್ ಖರೀದಿಸುವವರಿಗೆ ಭರ್ಜರಿ ಡಿಸ್ಕೌಂಟ್



















