ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಕ್ರೀಡೆ

ಶೇಖ್ ಹಸೀನಾ ಸುದ್ದಿಗೋಷ್ಠಿಯಲ್ಲಿ ಭಾಗಿಯಾದ ಬೆನ್ನಲ್ಲೇ ಶಕೀಬ್ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ

August 6, 2026
Share on WhatsappShare on FacebookShare on Twitter

ಬಾಂಗ್ಲಾದೇಶ : ಬಾಂಗ್ಲಾದೇಶದ ಮಾಜಿ ನಾಯಕ ಹಾಗೂ ಸ್ಟಾರ್ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಅವರ ಮಗುರಾ ಜಿಲ್ಲೆಯಲ್ಲಿರುವ ನಿವಾಸದ ಮೇಲೆ ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ದೆಹಲಿಯಿಂದ ನಡೆಸಿದ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಶಕೀಬ್ ಭಾಗವಹಿಸಿದ ಕೆಲವೇ ಗಂಟೆಗಳಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಬಾಂಗ್ಲಾದೇಶದಲ್ಲಿ ರಾಜಕೀಯ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.

ಬುಧವಾರ ರಾತ್ರಿ ಸ್ಥಳೀಯ ಕಾಲಮಾನ ಸುಮಾರು ಎಂಟು ಮುಕ್ಕಾಲು ಗಂಟೆ ಸುಮಾರಿಗೆ ಶಕೀಬ್ ಅಲ್ ಹಸನ್ ಅವರ ಮನೆಗೆ ನುಗ್ಗಿದ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು, ಏಕಾಏಕಿ ಕಲ್ಲು ಮತ್ತು ಇಟ್ಟಿಗೆಗಳನ್ನು ತೂರಿ ದಾಂಧಲೆ ನಡೆಸಿದೆ. ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿರುವ ದುಷ್ಕರ್ಮಿಗಳು, ಮನೆಯನ್ನು ಸುಟ್ಟುಹಾಕುವ ಯತ್ನ ಮಾಡಿದ್ದಾರೆ. ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ನಿವಾಸದ ಮೇಲೆ ಪೆಟ್ರೋಲ್ ಬಾಂಬ್‌ಗಳನ್ನು ಸಹ ಎಸೆಯಲಾಗಿದೆ. ದಾಳಿಯ ಸಮಯದಲ್ಲಿ ಪಟಾಕಿ ಸಿಡಿಸಿದಂತಹ ಭಾರಿ ಸ್ಫೋಟದ ಶಬ್ದಗಳು ಕೇಳಿಬಂದಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಮಗುರಾ ಸದರ್ ಪೊಲೀಸ್ ಠಾಣೆಯ ಅಧಿಕಾರಿ ಅಬ್ದುಲ್ಲಾ ಅಲ್ ಮಾಮುನ್, ದುಷ್ಕರ್ಮಿಗಳು ಕಿಟಕಿಗಳನ್ನು ಧ್ವಂಸಗೊಳಿಸಿ, ಬೆಂಕಿ ಹಚ್ಚಲು ಯತ್ನಿಸಿರುವುದನ್ನು ಖಚಿತಪಡಿಸಿದ್ದಾರೆ. ಆದರೆ ಪೆಟ್ರೋಲ್ ಬಾಂಬ್ ಬಳಕೆಯ ಬಗ್ಗೆ ಪೊಲೀಸರು ಅಧಿಕೃತವಾಗಿ ಇನ್ನೂ ದೃಢಪಡಿಸಿಲ್ಲ. ಸದ್ಯ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಇದೀಗ ಮನೆಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ಮಾಜಿ ಪ್ರಧಾನಿ ಶೇಖ್ ಹಸೀನಾ ಸುದ್ದಿಗೋಷ್ಠಿಯಲ್ಲಿ ಭಾಗಿ

ಈ ದಾಳಿಗೂ ಮುನ್ನ, ದೆಹಲಿಯಿಂದ ಶೇಖ್ ಹಸೀನಾ ಅವರು ಸೌತ್ ಏಷ್ಯಾ ಫಾರಿನ್ ಕರೆಸ್ಪಾಂಡೆಂಟ್ಸ್ ಕ್ಲಬ್ ಆಯೋಜಿಸಿದ್ದ ವರ್ಚುವಲ್ ಮಾಧ್ಯಮ ಸಂವಾದದಲ್ಲಿ ಮಾತನಾಡಿದ್ದರು. ಈ ಕಾರ್ಯಕ್ರಮದಲ್ಲಿ ಶಕೀಬ್ ಅಲ್ ಹಸನ್ ಕೂಡ ಉಪಸ್ಥಿತರಿದ್ದರು. ಜುಲೈ-ಆಗಸ್ಟ್ ತಿಂಗಳಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಆಂದೋಲನವು ಒಂದು “ಪೂರ್ವನಿಯೋಜಿತ ಆಡಳಿತ ಬದಲಾವಣೆಯ ತಂತ್ರ” ಎಂದು ಹಸೀನಾ ಇದೇ ವೇಳೆ ಸಮರ್ಥಿಸಿಕೊಂಡಿದ್ದರು. ಹಸೀನಾ ಅವರ ಈ ಕಾರ್ಯಕ್ರಮದಲ್ಲಿ ಶಕೀಬ್ ಕಾಣಿಸಿಕೊಂಡಿದ್ದೇ ಅವರ ಮೇಲಿನ ದಾಳಿಗೆ ಪ್ರಮುಖ ಕಾರಣ ಎಂದು ಶೇಖ್ ಹಸೀನಾ ಅವರ ‘ಅವಾಮಿ ಲೀಗ್’ ಪಕ್ಷ ಆರೋಪಿಸಿದೆ. ಪಕ್ಷವು ತನ್ನ ಎಕ್ಸ್ ಖಾತೆಯಲ್ಲಿ ದಾಳಿಯ ವಿಡಿಯೋವನ್ನು ಹಂಚಿಕೊಂಡಿದ್ದು, ಬಾಂಗ್ಲಾದೇಶದಲ್ಲಿ ನವ-ಫ್ಯಾಸಿಸಂ ಆವರಿಸುತ್ತಿದೆ ಎಂದು ಕಿಡಿಕಾರಿದೆ.

ಮುಂದುವರಿದ ರಾಜಕೀಯ ಬಿಕ್ಕಟ್ಟು ಮತ್ತು ವಿರೋಧ

ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಅಧಿಕಾರ ಕಳೆದುಕೊಂಡ ಬಳಿಕ ರಾಜಕೀಯ ವಾತಾವರಣವು ಸಂಪೂರ್ಣವಾಗಿ ಕಲುಷಿತಗೊಂಡಿದೆ. ಹಸೀನಾ ಅವರ ವರ್ಚುವಲ್ ಸುದ್ದಿಗೋಷ್ಠಿಯನ್ನು ವಿರೋಧ ಪಕ್ಷಗಳಾದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ), ಜಮಾತ್-ಎ-ಇಸ್ಲಾಮಿ ಮತ್ತು ನ್ಯಾಷನಲ್ ಸಿಟಿಜನ್ ಪಾರ್ಟಿ ತೀವ್ರವಾಗಿ ಖಂಡಿಸಿದ್ದವು. ಜೊತೆಗೆ, ಹಸೀನಾ ಅವರ ಹೇಳಿಕೆಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಎಚ್ಚರಿಕೆ ಕೂಡ ನೀಡಿದ್ದವು. ಇದೇ ಸಂದರ್ಭದಲ್ಲಿ ಶಕೀಬ್ ಅವರು ಹಸೀನಾ ಬೆಂಬಲಕ್ಕೆ ನಿಂತಿರುವುದು ವಿರೋಧಿಗಳ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಆದರೆ, ದಾಳಿಗೂ ಹಾಗೂ ಶಕೀಬ್ ಅವರ ಮಾಧ್ಯಮ ಸಂವಾದದ ಭಾಗವಹಿಸುವಿಕೆಗೂ ಇರುವ ಸಂಬಂಧವನ್ನು ಪೊಲೀಸರು ಅಧಿಕೃತವಾಗಿ ದೃಢಪಡಿಸಿಲ್ಲ.

ತಾಯ್ನಾಡಿಗೆ ಮರಳದ ಸ್ಟಾರ್ ಆಟಗಾರ

ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಶಕೀಬ್ ಅಲ್ ಹಸನ್, ೨೦೨೪ರ ಸಾರ್ವತ್ರಿಕ ಚುನಾವಣೆಯಲ್ಲಿ ಅವಾಮಿ ಲೀಗ್ ಪಕ್ಷದಿಂದ ಮಗುರಾ-೧ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಆಗಸ್ಟ್ ತಿಂಗಳಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಭಾರಿ ರಾಜಕೀಯ ಪಲ್ಲಟದ ಬಳಿಕ ಅವಾಮಿ ಲೀಗ್ ಪಕ್ಷವನ್ನು ರಾಜಕೀಯ ಚಟುವಟಿಕೆಗಳಿಂದ ನಿರ್ಬಂಧಿಸಲಾಗಿದೆ. ಹಸೀನಾ ಸರ್ಕಾರ ಪತನವಾದಾಗಿನಿಂದ ಶಕೀಬ್ ಬಾಂಗ್ಲಾದೇಶಕ್ಕೆ ಮರಳಿಲ್ಲ. ಪ್ರಸ್ತುತ ಅವರ ಮೇಲೆ ಕೊಲೆ ಪ್ರಕರಣ ಸೇರಿದಂತೆ ಹಲವು ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ. ತಮಗೆ ಸೂಕ್ತ ಭದ್ರತೆ ಮತ್ತು ಕಿರುಕುಳ ನೀಡದ ಭರವಸೆ ಸಿಕ್ಕರೆ ಮಾತ್ರ ತಾಯ್ನಾಡಿಗೆ ಮರಳಿ ಕಾನೂನು ಪ್ರಕ್ರಿಯೆ ಎದುರಿಸುವುದಾಗಿ ಶಕೀಬ್ ಈ ಹಿಂದೆಯೇ ಸ್ಪಷ್ಟಪಡಿಸಿದ್ದಾರೆ. ಸದ್ಯ ಅವರು ತಮ್ಮ ಕುಟುಂಬದೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದು, ಕೆರಿಬಿಯನ್ ಪ್ರೀಮಿಯರ್ ಲೀಗ್ ಮತ್ತು ಲಂಕಾ ಪ್ರೀಮಿಯರ್ ಲೀಗ್‌ನಂತಹ ವಿವಿಧ ಫ್ರಾಂಚೈಸಿ ಕ್ರಿಕೆಟ್ ಟೂರ್ನಿಗಳಲ್ಲಿ ಆಡುತ್ತಿದ್ದಾರೆ.

ಇದನ್ನೂ ಓದಿ : ಅಲ್ಜಾರಿ ಜೋಸೆಫ್ ವಿವಾದ : ಕೋಚ್ ಡ್ಯಾರೆನ್ ಸಾಮಿ ವಿರುದ್ಧ ಹರಿಹಾಯ್ದ ದಿಗ್ಗಜ ವಿವಿಯನ್ ರಿಚರ್ಡ್ಸ್!

Tags: Bangladesh NewsBangladesh PoliticsBreaking NewsCricket NewsInternational NewsKarnataka News beatKNBPetrol Bomb AttackPolitical ViolenceShakib Al Hasansheikh hasinaSouth Asia News
SendShareTweet
Previous Post

2013ರ ಲೈಂಗಿಕ ದೌರ್ಜನ್ಯ ಪ್ರಕರಣ : ತೆಹಲ್ಕಾ ಸಂಸ್ಥಾಪಕ ತರುಣ್ ತೇಜ್‌ಪಾಲ್ ದೋಷಿ

Next Post

ಫ್ಲಿಪ್‌ಕಾರ್ಟ್‌ನಿಂದಲೂ ಸ್ವಾತಂತ್ರ್ಯ ದಿನಾಚರಣೆ ಕೊಡುಗೆ : ಐಫೋನ್ ಬೆಲೆಯಲ್ಲಿ 17 ಸಾವಿರ ರೂ. ಇಳಿಕೆ

Related Posts

ಅಲ್ಜಾರಿ ಜೋಸೆಫ್ ವಿವಾದ : ಕೋಚ್ ಡ್ಯಾರೆನ್ ಸಾಮಿ ವಿರುದ್ಧ ಹರಿಹಾಯ್ದ ದಿಗ್ಗಜ ವಿವಿಯನ್ ರಿಚರ್ಡ್ಸ್!
ಕ್ರೀಡೆ

ಅಲ್ಜಾರಿ ಜೋಸೆಫ್ ವಿವಾದ : ಕೋಚ್ ಡ್ಯಾರೆನ್ ಸಾಮಿ ವಿರುದ್ಧ ಹರಿಹಾಯ್ದ ದಿಗ್ಗಜ ವಿವಿಯನ್ ರಿಚರ್ಡ್ಸ್!

ಬೆಂಕಿ-ಬೆಳಕಿನ ಅಪೂರ್ವ ಸಂಗಮ : ಕೊಹ್ಲಿ ಜೊತೆಗಿನ ಐತಿಹಾಸಿಕ ಟೆಸ್ಟ್ ಜೊತೆಯಾಟದ ಗುಟ್ಟು ರಟ್ಟು ರಹಾನೆ
ಕ್ರೀಡೆ

ಬೆಂಕಿ-ಬೆಳಕಿನ ಅಪೂರ್ವ ಸಂಗಮ : ಕೊಹ್ಲಿ ಜೊತೆಗಿನ ಐತಿಹಾಸಿಕ ಟೆಸ್ಟ್ ಜೊತೆಯಾಟದ ಗುಟ್ಟು ರಟ್ಟು ರಹಾನೆ

BWF ಚಾಂಪಿಯನ್‌ಶಿಪ್ : ಪಿವಿ ಸಿಂಧು ಸೇರಿದಂತೆ ಭಾರತದ ನಾಲ್ಕು ಸ್ಪರ್ಧಿಗಳಿಗೆ ಶ್ರೇಯಾಂಕದ ಗರಿ
ಕ್ರೀಡೆ

BWF ಚಾಂಪಿಯನ್‌ಶಿಪ್ : ಪಿವಿ ಸಿಂಧು ಸೇರಿದಂತೆ ಭಾರತದ ನಾಲ್ಕು ಸ್ಪರ್ಧಿಗಳಿಗೆ ಶ್ರೇಯಾಂಕದ ಗರಿ

ಪಾಕ್‌ ಕ್ರಿಕೆಟ್ ಮಂಡಳಿಗೆ ಆರ್ಥಿಕ ಸಂಕಷ್ಟದ ಭೀತಿ : ನ್ಯಾಯಾಲಯದ ಮೊರೆ ಹೋದ ಪಿಸಿಬಿ
ಕ್ರೀಡೆ

ಪಾಕ್‌ ಕ್ರಿಕೆಟ್ ಮಂಡಳಿಗೆ ಆರ್ಥಿಕ ಸಂಕಷ್ಟದ ಭೀತಿ : ನ್ಯಾಯಾಲಯದ ಮೊರೆ ಹೋದ ಪಿಸಿಬಿ

ಪಾಕ್ ಆಟಗಾರನ ಕಾಲೆಳೆದ ಸ್ಕೈ : ಸೂರ್ಯಕುಮಾರ್ ಅಭ್ಯಾಸದ ವಿಡಿಯೋ ವೈರಲ್
ಕ್ರೀಡೆ

ಪಾಕ್ ಆಟಗಾರನ ಕಾಲೆಳೆದ ಸ್ಕೈ : ಸೂರ್ಯಕುಮಾರ್ ಅಭ್ಯಾಸದ ವಿಡಿಯೋ ವೈರಲ್

ಕೊಹ್ಲಿ-ಅನುಷ್ಕಾ ದಂಪತಿಯ ಆಧ್ಯಾತ್ಮಿಕ ಭೇಟಿಯನ್ನು ಟೀಕಿಸಿದವರಿಗೆ ಶಮಿ ತಿರುಗೇಟು
ಕ್ರೀಡೆ

ಕೊಹ್ಲಿ-ಅನುಷ್ಕಾ ದಂಪತಿಯ ಆಧ್ಯಾತ್ಮಿಕ ಭೇಟಿಯನ್ನು ಟೀಕಿಸಿದವರಿಗೆ ಶಮಿ ತಿರುಗೇಟು

Next Post
ಫ್ಲಿಪ್‌ಕಾರ್ಟ್‌ನಿಂದಲೂ ಸ್ವಾತಂತ್ರ್ಯ ದಿನಾಚರಣೆ ಕೊಡುಗೆ : ಐಫೋನ್ ಬೆಲೆಯಲ್ಲಿ 17 ಸಾವಿರ ರೂ. ಇಳಿಕೆ

ಫ್ಲಿಪ್‌ಕಾರ್ಟ್‌ನಿಂದಲೂ ಸ್ವಾತಂತ್ರ್ಯ ದಿನಾಚರಣೆ ಕೊಡುಗೆ : ಐಫೋನ್ ಬೆಲೆಯಲ್ಲಿ 17 ಸಾವಿರ ರೂ. ಇಳಿಕೆ

  • Trending
  • Comments
  • Latest
ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ರಾಜ್ಯ ಸರ್ಕಾರದ KSRLPS ಸಂಸ್ಥೆಯಲ್ಲಿ 14 ಹುದ್ದೆಗಳ ನೇಮಕ : ಈ 2 ಜಿಲ್ಲೆಯವರಿಗೆ ಗುಡ್ ನ್ಯೂಸ್

ರಾಜ್ಯ ಸರ್ಕಾರದ KSRLPS ಸಂಸ್ಥೆಯಲ್ಲಿ 14 ಹುದ್ದೆಗಳ ನೇಮಕ : ಈ 2 ಜಿಲ್ಲೆಯವರಿಗೆ ಗುಡ್ ನ್ಯೂಸ್

ಫ್ಲಿಪ್‌ಕಾರ್ಟ್‌ನಿಂದಲೂ ಸ್ವಾತಂತ್ರ್ಯ ದಿನಾಚರಣೆ ಕೊಡುಗೆ : ಐಫೋನ್ ಬೆಲೆಯಲ್ಲಿ 17 ಸಾವಿರ ರೂ. ಇಳಿಕೆ

ಫ್ಲಿಪ್‌ಕಾರ್ಟ್‌ನಿಂದಲೂ ಸ್ವಾತಂತ್ರ್ಯ ದಿನಾಚರಣೆ ಕೊಡುಗೆ : ಐಫೋನ್ ಬೆಲೆಯಲ್ಲಿ 17 ಸಾವಿರ ರೂ. ಇಳಿಕೆ

ಶೇಖ್ ಹಸೀನಾ ಸುದ್ದಿಗೋಷ್ಠಿಯಲ್ಲಿ ಭಾಗಿಯಾದ ಬೆನ್ನಲ್ಲೇ ಶಕೀಬ್ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ

ಶೇಖ್ ಹಸೀನಾ ಸುದ್ದಿಗೋಷ್ಠಿಯಲ್ಲಿ ಭಾಗಿಯಾದ ಬೆನ್ನಲ್ಲೇ ಶಕೀಬ್ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ

2013ರ ಲೈಂಗಿಕ ದೌರ್ಜನ್ಯ ಪ್ರಕರಣ : ತೆಹಲ್ಕಾ ಸಂಸ್ಥಾಪಕ ತರುಣ್ ತೇಜ್‌ಪಾಲ್ ದೋಷಿ

2013ರ ಲೈಂಗಿಕ ದೌರ್ಜನ್ಯ ಪ್ರಕರಣ : ತೆಹಲ್ಕಾ ಸಂಸ್ಥಾಪಕ ತರುಣ್ ತೇಜ್‌ಪಾಲ್ ದೋಷಿ

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ರಾಜ್ಯ ಸರ್ಕಾರದ KSRLPS ಸಂಸ್ಥೆಯಲ್ಲಿ 14 ಹುದ್ದೆಗಳ ನೇಮಕ : ಈ 2 ಜಿಲ್ಲೆಯವರಿಗೆ ಗುಡ್ ನ್ಯೂಸ್

ರಾಜ್ಯ ಸರ್ಕಾರದ KSRLPS ಸಂಸ್ಥೆಯಲ್ಲಿ 14 ಹುದ್ದೆಗಳ ನೇಮಕ : ಈ 2 ಜಿಲ್ಲೆಯವರಿಗೆ ಗುಡ್ ನ್ಯೂಸ್

ಫ್ಲಿಪ್‌ಕಾರ್ಟ್‌ನಿಂದಲೂ ಸ್ವಾತಂತ್ರ್ಯ ದಿನಾಚರಣೆ ಕೊಡುಗೆ : ಐಫೋನ್ ಬೆಲೆಯಲ್ಲಿ 17 ಸಾವಿರ ರೂ. ಇಳಿಕೆ

ಫ್ಲಿಪ್‌ಕಾರ್ಟ್‌ನಿಂದಲೂ ಸ್ವಾತಂತ್ರ್ಯ ದಿನಾಚರಣೆ ಕೊಡುಗೆ : ಐಫೋನ್ ಬೆಲೆಯಲ್ಲಿ 17 ಸಾವಿರ ರೂ. ಇಳಿಕೆ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat