ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗ್ತಿದೆ. ಭಾರೀ ವರ್ಷಧಾರೆ ಹಿನ್ನಲೆಯಲ್ಲಿ ಕಡಬ ಗ್ರಾಮದ ಬಳಿ ಗುಡ್ಡ ಕುಸಿತ ಸಂಭವಿಸಿದೆ.
ಕಡಬ ಬಳಿ ಘಟಿಸಿರೋ ಗುಡ್ಡ ಕುಸಿತದಿಂದಾಗಿ ಈ ಭಾಗದಲ್ಲಿ ಸಂಚಾರ ಸಂಪೂರ್ಣ ಅಯೋಮಯವಾಗಿದೆ. ರಾಷ್ಟ್ರೀಯ ಹೆದ್ದಾರಿ 75ರ ಮೇಲೆ ದೊಡ್ಡ ಪ್ರಮಾಣದಲ್ಲಿ ಮಣ್ಣು ಕುಸಿದಿರುವುದರಿಂದ ಸಂಚಾರ ಸ್ತಬ್ಧವಾಗಿದೆ. ಬೆಂಗಳೂರು-ಮಂಗಳೂರು ನಡುವಿನ ಸಂಚಾರಕ್ಕೆ ದೊಡ್ಡ ಪೆಟ್ಟು ಬಿದ್ದಿದ್ದು, ಸಂಚಾರ ಸೇತುವೇ ಕಟ್ ಆಗಿದೆ.



















