ಮುಂಬೈ : ನಟ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಬಗ್ಗೆ ಕೇಳಿಬರುತ್ತಿರುವ ನೆಗೆಟಿವ್ ವಿಮರ್ಶೆಗಳ ಪ್ರಶ್ನೆಗೆ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಪ್ರತಿಕ್ರಿಯಿಸಿದ್ದು, ಯಶ್ ಏನನ್ನೋ ಹೊಸದಾಗಿ ಪ್ರಯತ್ನಿಸಿದ್ದಾರೆ. ಹೊಸ ಕಥೆ ಹೇಳುವ ಹಕ್ಕು ಎಲ್ಲರಿಗೂ ಇದೆ ಎಂದು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಮುಂಬೈನಲ್ಲಿ ‘ಒರಿಜಿನಲ್ ಮಾನ್‌ಸ್ಟರ್’ ಚಿತ್ರದ ಘೋಷಣೆ ಕಾರ್ಯಕ್ರಮದ ವೇಳೆ ಮಾತನಾಡಿದ ಶಿವಣ್ಣ ಅವರಿಗೆ ‘ಟಾಕ್ಸಿಕ್’ ಚಿತ್ರದ ನೆಗೆಟಿವಿಟಿ ಕುರಿತು ಪ್ರಶ್ನೆ ಕೇಳಲಾಯಿತು. ಈ ವೇಳೆ ಯಶ್ ಪರವಾಗಿ ಮಾತನಾಡಿದ ಶಿವಣ್ಣ, ಸಿನಿಮಾ ಬಗ್ಗೆ ಪ್ರೇಕ್ಷಕರು ಯಾವ ದೃಷ್ಟಿಕೋನದಲ್ಲಿ ನೋಡುತ್ತಾರೆ ಎಂಬುದು ಮುಖ್ಯ ಎಂದು ಅಭಿಪ್ರಾಯಪಟ್ಟರು.
“ನಾನಿನ್ನೂ ‘ಟಾಕ್ಸಿಕ್’ ಸಿನಿಮಾ ನೋಡಿಲ್ಲ. ಆದರೆ ಯಶ್ ಹೊಸದಾಗಿ ಏನನ್ನೋ ಪ್ರಯತ್ನಿಸಿದ್ದಾರೆ. ಹೊಸ ಕಥೆ ಹೇಳಲು ಎಲ್ಲರಿಗೂ ಹಕ್ಕಿದೆ. ಪ್ರೇಕ್ಷಕರು ಸಿನಿಮಾವನ್ನು ಯಾವ ದೃಷ್ಟಿಯಲ್ಲಿ ನೋಡುತ್ತಾರೆ ಎಂಬುದು ಮುಖ್ಯ” ಎಂಬರ್ಥದಲ್ಲಿ ಶಿವಣ್ಣ ಪ್ರತಿಕ್ರಿಯಿಸಿದ್ದಾರೆ.
‘ಟಾಕ್ಸಿಕ್’ ಚಿತ್ರದ ವಿರುದ್ಧ ಕೇಳಿಬರುತ್ತಿರುವ ನೆಗೆಟಿವ್ ವಿಮರ್ಶೆಗಳ ನಡುವೆ ಶಿವಣ್ಣ ನೀಡಿರುವ ಈ ಪ್ರತಿಕ್ರಿಯೆ ಇದೀಗ ಯಶ್ ಅಭಿಮಾನಿಗಳ ಗಮನ ಸೆಳೆದಿದೆ. ಯಶ್ ಹೊಸ ಪ್ರಯತ್ನಕ್ಕೆ ಬೆಂಬಲವಾಗಿ ಹ್ಯಾಟ್ರಿಕ್ ಹೀರೊ ಶಿವಣ್ಣ ನಿಂತಿದ್ದಾರೆ.
ಇದನ್ನೂ ಓದಿ : ಪಾದಚಾರಿ ಮಾರ್ಗ ಒತ್ತುವರಿ ವಿರುದ್ಧ ಉತ್ತರ ನಗರ ಪಾಲಿಕೆ ಕ್ರಮ ; ಮದರ್‌ಹುಡ್ ಆಸ್ಪತ್ರೆಗೆ 1 ಲಕ್ಷ ದಂಡ!



















