ಬೆಂಗಳೂರು : ಚಿನ್ನ ಖರೀದಿಸುವವರಿಗೆ ಇಂದು ಶುಭ ಸೋಮವಾರ ಆಗಿದೆ. ಜೂನ್ 26 ಹಾಗೂ ಜೂನ್ 27ರಂದು ಸತತ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಸೋಮವಾರ ಭಾರಿ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 93 ರೂಪಾಯಿ ಇಳಿಕೆಯಾದರೆ, 22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 85 ರೂಪಾಯಿ ಇಳಿಕೆಯಾಗಿದೆ. ಇದರೊಂದಿಗೆ ಸೋಮವಾರ ಚಿನ್ನ ಖರೀದಿಸುವವರಿಗೆ ಭಾರಿ ಉಳಿತಾಯವಾಗಲಿದೆ.
ಸೋಮವಾರದ ಇಳಿಕೆಯೊಂದಿಗೆ ಬೆಂಗಳೂರಿನಲ್ಲಿ 24 ಕ್ಯಾರೆಟ್ ನ 1 ಗ್ರಾಂ ಚಿನ್ನದ ದರವು 14,302 ರೂಪಾಯಿಗೆ ಇಳಿಕೆಯಾಗಿದೆ. ಹಾಗೆಯೇ, 22 ಕ್ಯಾರೆಟ್ ನ 1 ಗ್ರಾಂ ಚಿನ್ನದ ದರವು 13,110 ರೂಪಾಯಿಗೆ ಇಳಿಕೆಯಾಗಿದೆ. ಕಳೆದ 10 ದಿನಗಳಲ್ಲಿ ಚಿನ್ನದ ಧಾರಣೆಯಲ್ಲಿ 4 ಬಾರಿ ಇಳಿಕೆಯಾದರೆ, 4 ಬಾರಿ ಏರಿಕೆಯಾಗಿದೆ. ಇನ್ನು ಎರಡು ದಿನ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ.
ಅಮೆರಿಕದ ಕೇಂದ್ರೀಯ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್ ಬಡ್ಡಿ ದರದಲ್ಲಿ ಇಳಿಕೆ ಮಾಡದೆ, ಏರಿಕೆಯ ಚಿಂತನೆ ನಡೆದಿದೆ ಎಂಬ ವರದಿಗಳು ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಲು ಕಾರಣ ಎಂದು ತಜ್ಞರು ತಿಳಿಸಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಬಂಗಾರದ ಧಾರಣೆಯ ಇಳಿಕೆಯು ಕೂಡ ಭಾರತೀಯರಿಗೆ ಸಿಹಿ ಸುದ್ದಿ ದೊರಕಲು ಕಾರಣವಾಗಿದೆ.
ಬೆಳ್ಳಿಯ ಬೆಲೆ ಯಥಾಸ್ಥಿತಿ
ಚಿನ್ನದ ಬೆಲೆಯಲ್ಲಿ ಇಳಿಕೆಯಾದರೆ ಸೋಮವಾರ ಬೆಳ್ಳಿಯ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಬೆಂಗಳೂರಿನಲ್ಲಿ ಒಂದು ಕೆ.ಜಿ ಬೆಳ್ಳಿಯ ಧಾರಣೆಯು 2.4 ಲಕ್ಷ ರೂಪಾಯಿ ಆಗಿದೆ. ಕಳೆದ ಮೂರು ದಿನಗಳಿಂದಲೂ ಬೆಳ್ಳಿಯ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಜುಲೈ 26ರಂದು ಮಾತ್ರ ಒಂದು ಕೆ.ಜಿ ಬೆಳ್ಳಿ ಧಾರಣೆಯಲ್ಲಿ 5 ಸಾವಿರ ರೂಪಾಯಿ ಏರಿಕೆಯಾಗಿತ್ತು. ಇದಕ್ಕೂ ಮೊದಲು ಸತತ ಇಳಿಕೆ ಕಂಡಿತ್ತು.
ಇದನ್ನೂ ಓದಿ : ‘ಅವರು ಅದ್ಭುತವಾಗಿ ಆಡಿದರು’ : ಸರಣಿ ಸೋಲಿನ ಬಳಿಕ ಐರ್ಲೆಂಡ್ ತಂಡವನ್ನು ಗುಣಗಾನ ಮಾಡಿದ ಅಯ್ಯರ್



















