ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಕ್ರೀಡೆ

ಇಂಗ್ಲೆಂಡ್ ಸರಣಿ ಸೋಲಿಗೆ ಗಂಭೀರ್ ಹೊಣೆ : ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಶ್ರೀಕಾಂತ್ ಕಿಡಿ

July 21, 2026
Share on WhatsappShare on FacebookShare on Twitter

ಬೆಂಗಳೂರು : ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿದ್ದ ಭಾರತ ಕ್ರಿಕೆಟ್ ತಂಡ, ಟಿ20 ಹಾಗೂ ಏಕದಿನ ಸರಣಿ ಎರಡರಲ್ಲೂ ಹೀನಾಯ ಸೋಲು ಅನುಭವಿಸಿ ತವರಿಗೆ ಮರಳಿದೆ. 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಜಯ ಸಾಧಿಸಿ ಶುಭಾರಂಭ ಮಾಡಿದ್ದ ಟೀಮ್ ಇಂಡಿಯಾ, ನಂತರದ ಎರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿ 2-1 ಅಂತರದಲ್ಲಿ ಸರಣಿಯನ್ನು ಆತಿಥೇಯರಿಗೆ ಒಪ್ಪಿಸಿದೆ. ಅದೇ ರೀತಿ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಳಲ್ಲೂ ಭಾರತ ಮುಗ್ಗರಿಸಿತ್ತು. ಈ ಕಳಪೆ ಪ್ರದರ್ಶನದ ಬೆನ್ನಲ್ಲೇ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ಇಡೀ ಭಾರತೀಯ ಕ್ರಿಕೆಟ್ ತಂಡದ ಮ್ಯಾನೇಜ್ಮೆಂಟ್ ವಿರುದ್ಧ ಮಾಜಿ ನಾಯಕ ಕ್ರಿಸ್ ಶ್ರೀಕಾಂತ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸೋಲುಗಳನ್ನು ಮುಚ್ಚಿಹಾಕುವ ತಂತ್ರದ ಬಗ್ಗೆ ಶ್ರೀಕಾಂತ್ ಅಸಮಾಧಾನ

ತಮ್ಮ ಯೂಟ್ಯೂಬ್ ಚಾನೆಲ್ ‘ಚೀಕಿ ಚೀಕಾ (Cheeky Cheeka)’ ನಲ್ಲಿ ಮಾತನಾಡಿದ ಕ್ರಿಸ್ ಶ್ರೀಕಾಂತ್, ಇಂತಹ ಹೀನಾಯ ಸೋಲುಗಳ ನಡುವೆಯೂ ಮುಂಬರುವ ಚಾಂಪಿಯನ್ಸ್ ಟ್ರೋಫಿ ಮತ್ತು ಟಿ20 ವಿಶ್ವಕಪ್ ನೆಪದಲ್ಲಿ ಮ್ಯಾನೇಜ್ಮೆಂಟ್ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಈ ಎಲ್ಲ ಸೋಲುಗಳ ನಡುವೆಯೂ ಭಾರತ ಚಾಂಪಿಯನ್ಸ್ ಟ್ರೋಫಿಯನ್ನೋ ಅಥವಾ ಟಿ20 ವಿಶ್ವಕಪ್‌ನ್ನೋ ಒಮ್ಮೆ ಗೆದ್ದರೆ ಸಾಕು. ಆ ಗೆಲುವಿನ ಸಂಪೂರ್ಣ ಶ್ರೇಯಸ್ಸನ್ನು ಗೌತಮ್ ಗಂಭೀರ್ ಅವರಿಗೆ ನೀಡಲಾಗುತ್ತದೆ. ಆದರೆ, ಈಗಿನ ಸರಣಿ ಸೋಲಿನ ಫಲಿತಾಂಶಕ್ಕೂ ಗಂಭೀರ್ ಅವರನ್ನೇ ಹೊಣೆಗಾರರನ್ನಾಗಿ ಮಾಡಬೇಕು. ಆದರೆ, ದುರದೃಷ್ಟವಶಾತ್ ಭಾರತದಲ್ಲಿ ಹಾಗಾಗುವುದಿಲ್ಲ. ತಂಡದ ಮ್ಯಾನೇಜ್ಮೆಂಟ್‌ಗೆ ಹೊಣೆಗಾರಿಕೆ ಇರುವುದಿಲ್ಲ, ಈ ಸೋಲುಗಳನ್ನು ನೆಪ ಹೇಳಿ ಮುಚ್ಚಿಹಾಕಲಾಗುತ್ತದೆ” ಎಂದು ಶ್ರೀಕಾಂತ್ ಹೇಳಿದ್ದಾರೆ.

ದುರ್ಬಲ ತಂಡಗಳ ವಿರುದ್ಧದ ಜಯದ ಮೂಲಕ ಸ್ಥಾನ ಭದ್ರ!

ಮುಂಬರುವ ದಿನಗಳಲ್ಲಿ ಭಾರತ ತಂಡವು ಜಿಂಬಾಬ್ವೆ, ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್‌ನಂತಹ ಅಷ್ಟೇನೂ ಬಲಿಷ್ಠವಲ್ಲದ ಶ್ರೇಯಾಂಕದಲ್ಲಿ ಕೆಳಗಿರುವ ತಂಡಗಳ ವಿರುದ್ಧ ಸರಣಿ ಆಡಲಿದೆ. ಈ ಸರಣಿಗಳಲ್ಲಿ ಟೀಮ್ ಇಂಡಿಯಾ ಸುಲಭವಾಗಿ ಜಯ ಸಾಧಿಸಲಿದ್ದು, ಈ ಗೆಲುವನ್ನೇ ಮುಂದಿಟ್ಟುಕೊಂಡು ಇಂಗ್ಲೆಂಡ್ ಪ್ರವಾಸದ ಕಳಪೆ ಆಟವನ್ನು ಮರೆಸಲಾಗುವುದು ಎಂದು ಶ್ರೀಕಾಂತ್ ಗಂಭೀರ ಆರೋಪ ಮಾಡಿದ್ದಾರೆ.

“ಮುಂದೆ ಜಿಂಬಾಬ್ವೆ, ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ತಂಡಗಳನ್ನು ಸುಲಭವಾಗಿ ಮಣಿಸುತ್ತಾರೆ. ಮುಂದಿನ ವರ್ಷದ ವಿಶ್ವಕಪ್‌ವರೆಗೂ ಇದೇ ರೀತಿ ಸಮಯ ಕಳೆಯುತ್ತಾರೆ. ಆಗ ಎಲ್ಲರೂ ಭಾರತ ಮತ್ತೆ ಫಾರ್ಮ್‌ಮಿಗೆ ಬಂದಿದೆ ಎಂದು ಬೊಬ್ಬೆ ಹೊಡೆಯುತ್ತಾರೆ. ಆದರೆ ವಾಸ್ತವವಾಗಿ ಈ ದುರ್ಬಲ ತಂಡಗಳ ಸರಣಿಗಳನ್ನೇ ಪರಿಗಣನೆಗೆ ತೆಗೆದುಕೊಳ್ಳಬಾರದು” ಎಂದು ವಿವರಿಸಿದ್ದಾರೆ.

ತಪ್ಪು ಆಟಗಾರರ ಆಯ್ಕೆ : ಮ್ಯಾನೇಜ್ಮೆಂಟ್ ವಿರುದ್ಧ ಆಕ್ರೋಶ

ಇದೇ ವೇಳೆ ಶ್ರೀಕಾಂತ್ ತಂಡದ ಆಯ್ಕೆಯ ಬಗ್ಗೆಯೂ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಲಾರ್ಡ್ಸ್ ಮೈದಾನದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್‌ಗಳು ಬರೋಬ್ಬರಿ 387 ರನ್ ಚಚ್ಚಿ 2-1 ಅಂತರದಲ್ಲಿ ಸರಣಿ ಗೆದ್ದುಕೊಂಡರು. ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್ ಹಾಗೂ ಗುರ್ನೂರ್ ಬ್ರಾರ್ ಅವರನ್ನೊಳಗೊಂಡ ಭಾರತದ ವೇಗದ ಬೌಲಿಂಗ್ ಪಡೆಯ ವೈಫಲ್ಯ ಲಂಡನ್‌ನಲ್ಲಿ ಬಯಲಾಗಿದೆ ಎಂದು ಹೇಳಿದ್ದಾರೆ. “ಮುಂದೆ ಎರಡೇ ದಿನಗಳಲ್ಲಿ ಜಿಂಬಾಬ್ವೆ ಸರಣಿ ಶುರುವಾಗಲಿದ್ದು ಆ ಬಳಿಕ ಎಲ್ಲರೂ ಈ ಇಂಗ್ಲೆಂಡ್ ಸರಣಿಯ ಸೋಲನ್ನು ಮರೆಯುತ್ತಾರೆ. ಆಗ ಮ್ಯಾನೇಜ್ಮೆಂಟ್ ಮತ್ತೆ ತಮ್ಮ ನೆಚ್ಚಿನ ಆಟಗಾರರನ್ನು ಆಯ್ಕೆ ಮಾಡುತ್ತದೆ. ಆದರೆ ಅದ್ಭುತವಾಗಿ ಆಡಬಲ್ಲ ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕೃಣಾಲ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಅವರಂತಹ ಯೋಗ್ಯ ಆಟಗಾರರನ್ನು ಪುನಃ ತಂಡದಿಂದ ಹೊರಗಿಡಲಾಗುತ್ತದೆ” ಎಂದು ಮಾಜಿ ಕ್ಯಾಪ್ಟನ್ ಕಿಡಿಕಾರಿದ್ದಾರೆ.

ಇದನ್ನೂ ಓದಿ : ಆಟಗಾರರ ಗಾಯದ ಸಮಸ್ಯೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಶುಭ್‌ಮನ್ ಗಿಲ್!

Tags: BCCICricket AnalysisCricket ControversyCricket NewsCricket UpdateEngland Series LossGautam GambhirIndia vs EnglandIndian CricketIndian Team CoachKannadanewsKannadanewsChannelkarnatakanewsbeatKNBKris SrikkanthLatestNewsSports newsTeam Indiateam managementTrendingNews
SendShareTweet
Previous Post

ತಂದೆಯನ್ನೇ ರಾಡ್‌ನಿಂದ ಹೊಡೆದು ಹತ್ಯೆಗೈದ ಪಾಪಿ ಮಗ!

Next Post

ಮನೆಯಲ್ಲೇ ಹ್ಯಾಂಡ್‌ಮೆಡ್ ಗನ್ ತಯಾರಿಸುತ್ತಿದ್ದ ಆರೋಪಿ ಬಂಧನ!

Related Posts

ಆಟಗಾರರ ಒತ್ತಡ ಕಡಿಮೆ ಮಾಡಲು BCCI ಮಹತ್ವದ ನಿರ್ಧಾರ!
ಕ್ರೀಡೆ

ಆಟಗಾರರ ಒತ್ತಡ ಕಡಿಮೆ ಮಾಡಲು BCCI ಮಹತ್ವದ ನಿರ್ಧಾರ!

ಐಪಿಎಲ್‌ 2027ರಲ್ಲಿ ಧೋನಿ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಆಡಲ್ಲ ; ಬದ್ರಿನಾಥ್‌ ಸ್ಫೋಟಕ ಹೇಳಿಕೆ
ಕ್ರೀಡೆ

ಐಪಿಎಲ್‌ 2027ರಲ್ಲಿ ಧೋನಿ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಆಡಲ್ಲ ; ಬದ್ರಿನಾಥ್‌ ಸ್ಫೋಟಕ ಹೇಳಿಕೆ

ಬಾಂಗ್ಲಾ ಕ್ರಿಕೆಟಿಗರಿಗೆ ಬಂಪರ್ ವೇತನ ಹೆಚ್ಚಳ ; BPL ನಡೆಯದಿದ್ದರೂ ಆಟಗಾರರಿಗೆ ಆರ್ಥಿಕ ಭದ್ರತೆ
ಕ್ರೀಡೆ

ಬಾಂಗ್ಲಾ ಕ್ರಿಕೆಟಿಗರಿಗೆ ಬಂಪರ್ ವೇತನ ಹೆಚ್ಚಳ ; BPL ನಡೆಯದಿದ್ದರೂ ಆಟಗಾರರಿಗೆ ಆರ್ಥಿಕ ಭದ್ರತೆ

ದುಲೀಪ್​ ಟ್ರೋಫಿ ಫೈನಲ್‌ಗೆ ಸೂರ್ಯವಂಶಿ ಗೈರು? ಕಾರಣವೇನು ಗೊತ್ತಾ?
ಕ್ರೀಡೆ

ದುಲೀಪ್​ ಟ್ರೋಫಿ ಫೈನಲ್‌ಗೆ ಸೂರ್ಯವಂಶಿ ಗೈರು? ಕಾರಣವೇನು ಗೊತ್ತಾ?

ವಯಸ್ಸಿನ ದಾಖಲೆಗಳಲ್ಲಿ ಗೊಂದಲ ; ಭಾರತ ಅಂಡರ್‌-19 ಆಟಗಾರ ರೋಹಿತ್‌ ಯಾದವ್‌ಗೆ BCCI 2 ವರ್ಷ ನಿಷೇಧ
ಕ್ರೀಡೆ

ವಯಸ್ಸಿನ ದಾಖಲೆಗಳಲ್ಲಿ ಗೊಂದಲ ; ಭಾರತ ಅಂಡರ್‌-19 ಆಟಗಾರ ರೋಹಿತ್‌ ಯಾದವ್‌ಗೆ BCCI 2 ವರ್ಷ ನಿಷೇಧ

BCCI ಸಭೆಗೆ ಅಗರ್ಕರ್ ಗೈರು : ಮುಖ್ಯ ಆಯ್ಕೆದಾರರು ಬರದಿದ್ದಕ್ಕೆ ಕಾರಣ ಬಯಲು ಮಾಡಿದ ಸೈಕಿಯಾ
ಕ್ರೀಡೆ

BCCI ಸಭೆಗೆ ಅಗರ್ಕರ್ ಗೈರು : ಮುಖ್ಯ ಆಯ್ಕೆದಾರರು ಬರದಿದ್ದಕ್ಕೆ ಕಾರಣ ಬಯಲು ಮಾಡಿದ ಸೈಕಿಯಾ

Next Post
ಮನೆಯಲ್ಲೇ ಹ್ಯಾಂಡ್‌ಮೆಡ್ ಗನ್ ತಯಾರಿಸುತ್ತಿದ್ದ ಆರೋಪಿ ಬಂಧನ!

ಮನೆಯಲ್ಲೇ ಹ್ಯಾಂಡ್‌ಮೆಡ್ ಗನ್ ತಯಾರಿಸುತ್ತಿದ್ದ ಆರೋಪಿ ಬಂಧನ!

  • Trending
  • Comments
  • Latest
ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಗಡಿ ದಾಟಿದ ಗಣೇಶೋತ್ಸವದ ಸಂಭ್ರಮ : ಪಾಕಿಸ್ತಾನದ ಕರಾಚಿಯಲ್ಲಿ ಗಣಪತಿ ವಿಗ್ರಹಕ್ಕೆ ಬಣ್ಣ ಬಳಿದ ಮುಸ್ಲಿಂ ಕಲಾವಿದ!

ಗಡಿ ದಾಟಿದ ಗಣೇಶೋತ್ಸವದ ಸಂಭ್ರಮ : ಪಾಕಿಸ್ತಾನದ ಕರಾಚಿಯಲ್ಲಿ ಗಣಪತಿ ವಿಗ್ರಹಕ್ಕೆ ಬಣ್ಣ ಬಳಿದ ಮುಸ್ಲಿಂ ಕಲಾವಿದ!

ಆಟಗಾರರ ಒತ್ತಡ ಕಡಿಮೆ ಮಾಡಲು BCCI ಮಹತ್ವದ ನಿರ್ಧಾರ!

ಆಟಗಾರರ ಒತ್ತಡ ಕಡಿಮೆ ಮಾಡಲು BCCI ಮಹತ್ವದ ನಿರ್ಧಾರ!

‘ಮಹಿಳೆಯರು ಮನೆಯಿಂದ ಹೊರಬರಬಾರದು’ : ವಿವಾದದ ಬೆನ್ನಲ್ಲೇ ಧರ್ಮಗುರು ಕಾಂತಪುರಂ ಸ್ಪಷ್ಟನೆಯೇನು?

‘ಮಹಿಳೆಯರು ಮನೆಯಿಂದ ಹೊರಬರಬಾರದು’ : ವಿವಾದದ ಬೆನ್ನಲ್ಲೇ ಧರ್ಮಗುರು ಕಾಂತಪುರಂ ಸ್ಪಷ್ಟನೆಯೇನು?

ವೋಕ್ಸ್‌ವ್ಯಾಗನ್ ಕಾರುಗಳ ಮೇಲೆ ಭರ್ಜರಿ ಆಫರ್‌ ; ಟೈಗನ್, ಟಿಗುವಾನ್‌ಗೆ 6 ಲಕ್ಷ ರೂಪಾಯಿ ವರೆಗೆ ಲಾಭ!

ವೋಕ್ಸ್‌ವ್ಯಾಗನ್ ಕಾರುಗಳ ಮೇಲೆ ಭರ್ಜರಿ ಆಫರ್‌ ; ಟೈಗನ್, ಟಿಗುವಾನ್‌ಗೆ 6 ಲಕ್ಷ ರೂಪಾಯಿ ವರೆಗೆ ಲಾಭ!

Recent News

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಗಡಿ ದಾಟಿದ ಗಣೇಶೋತ್ಸವದ ಸಂಭ್ರಮ : ಪಾಕಿಸ್ತಾನದ ಕರಾಚಿಯಲ್ಲಿ ಗಣಪತಿ ವಿಗ್ರಹಕ್ಕೆ ಬಣ್ಣ ಬಳಿದ ಮುಸ್ಲಿಂ ಕಲಾವಿದ!

ಗಡಿ ದಾಟಿದ ಗಣೇಶೋತ್ಸವದ ಸಂಭ್ರಮ : ಪಾಕಿಸ್ತಾನದ ಕರಾಚಿಯಲ್ಲಿ ಗಣಪತಿ ವಿಗ್ರಹಕ್ಕೆ ಬಣ್ಣ ಬಳಿದ ಮುಸ್ಲಿಂ ಕಲಾವಿದ!

ಆಟಗಾರರ ಒತ್ತಡ ಕಡಿಮೆ ಮಾಡಲು BCCI ಮಹತ್ವದ ನಿರ್ಧಾರ!

ಆಟಗಾರರ ಒತ್ತಡ ಕಡಿಮೆ ಮಾಡಲು BCCI ಮಹತ್ವದ ನಿರ್ಧಾರ!

  • About
  • Advertise
  • Privacy & Policy
  • Contact Us

© 2025 News beat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 News beat