ಬೆಂಗಳೂರು : ಡಿಜಿಟಲ್ ಯುಗದಲ್ಲಿ ಇಪಿಎಫ್ಒ ಹಲವು ನಿಯಮಗಳನ್ನು ಸರಳಗೊಳಿಸಿದೆ. ಹಾಗಾಗಿ, ಈಗ ಆನ್ ಲೈನ್ ಮೂಲಕವೇ ಪಿಎಫ್ ಮೊತ್ತವನ್ನು ವಿತ್ ಡ್ರಾ ಮಾಡಬಹುದಾಗಿದೆ. ಕೆಲವೇ ದಿನಗಳಲ್ಲಿ ಆನ್ ಲೈನ್ ಮೂಲಕ ಕ್ಲೇಮ್ ಮಾಡಿದರೆ, ಇಪಿಎಫ್ಒ ಖಾತೆದಾರರ ಬ್ಯಾಂಕ್ ಖಾತೆಗೆ ಪಿಎಫ್ ಮೊತ್ತವು ಜಮೆಯಾಗುತ್ತದೆ. ಹೀಗೆ ಯಾವುದೇ ತುರ್ತು ಸಂದರ್ಭದಲ್ಲಿ ಪಿಎಫ್ ಹಣವನ್ನು ವಿತ್ ಡ್ರಾ ಮಾಡಲು ಅವಕಾಶ ನೀಡಲಾಗಿದೆ. ಆದರೆ, ಇಪಿಎಫ್ಒ ವೆಬ್ ಸೈಟ್ ನಲ್ಲಿ ಕೆಲವು ಪ್ರಕ್ರಿಯೆ ಅನುಸರಿಸದಿದ್ದರೆ ಪಿಎಫ್ ಮೊತ್ತ ವಿತ್ ಡ್ರಾ ಮಾಡಲು ಕಷ್ಟವಾಗುತ್ತದೆ.
ಇಂತಹ ಪ್ರಮುಖ ಪ್ರಕ್ರಿಯೆಗಳಲ್ಲಿ ಇ-ಕೆವೈಸಿ ಮಾಡುವುದು ಕೂಡ ಪ್ರಮುಖವಾಗಿದೆ. ಇಪಿಎಫ್ಒ ವೆಬ್ ಸೈಟ್ ನಲ್ಲಿ ಸದಸ್ಯರು ಕಡ್ಡಾಯವಾಗಿ ಇ-ಕೆವೈಸಿ ಮಾಡಬೇಕು. ಇ-ಕೆವೈಸಿ ಆಗಿದ್ದರೆ ಮಾತ್ರ ಸದಸ್ಯರು ಪಿಎಫ್ ಮೊತ್ತವನ್ನು ವಿತ್ ಡ್ರಾ ಮಾಡಬಹುದಾಗಿದೆ. ಮದುವೆ, ಮನೆ ಖರೀದಿ, ನಿರುದ್ಯೋಗ ಹಾಗೂ ವೈದ್ಯಕೀಯ ಕಾರಣಗಳಿಗೆ ಪಿಎಫ್ ಹಣ ವಿತ್ ಡ್ರಾ ಮಾಡುವಾಗ ಇ-ಕೆವೈಸಿ ಆಗಿಲ್ಲದಿದ್ದರೆ ಸಮಸ್ಯೆಯಾಗುತ್ತದೆ. ಹಾಗಾಗಿ, ಸದಸ್ಯರು ಆನ್ ಲೈನ್ ಮೂಲಕವೇ ಇ-ಕೆವೈಸಿ ಮಾಡುವುದು ಉತ್ತಮ.
ಇ-ಕೆವೈಸಿ ಮಾಡುವುದು ಹೇಗೆ?
• ಮೊದಲು https://unifiedportal-emp.epfindia.gov.in/epfo/ ಗೆ ಭೇಟಿ ನೀಡಿ. ನಿಮ್ಮ UAN ಸಂಖ್ಯೆ, ಪಾಸ್ ವರ್ಡ್ ಮತ್ತು ಕ್ಯಾಪ್ಚಾ ನಮೂದಿಸಿ ಸೈನ್ ಇನ್ ಆಗಿ.
• ಲಾಗಿನ್ ಆದ ನಂತರ, ಮೇಲ್ಭಾಗದ ಮೆನುವಿನಲ್ಲಿರುವ ‘Manage’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ‘KYC’ ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.
• ಈಗ ನೀವು ಅಪ್ ಡೇಟ್ ಮಾಡಬೇಕಾದ ದಾಖಲೆಗಳ ಪಟ್ಟಿ ಕಾಣಿಸುತ್ತದೆ (Bank, PAN, Aadhaar). ನೀವು ಯಾವುದನ್ನು ಅಪ್ ಡೇಟ್ ಮಾಡಬೇಕೋ ಅದರ ಮುಂದಿನ ಬಾಕ್ಸ್ ಅನ್ನು ಟಿಕ್ ಮಾಡಿ.
• ನಿಮ್ಮ ದಾಖಲೆ ಸಂಖ್ಯೆ ಮತ್ತು ದಾಖಲೆಯಲ್ಲಿರುವಂತೆ ನಿಮ್ಮ ಹೆಸರನ್ನು ಟೈಪ್ ಮಾಡಿ.
• ವಿವರಗಳನ್ನು ಭರ್ತಿ ಮಾಡಿದ ನಂತರ ‘Save’ ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಒಂದು OTP ಬರುತ್ತದೆ. ಅದನ್ನು ನಮೂದಿಸಿ ‘Submit’ ಕೊಡಿ.
ಇದನ್ನೂ ಓದಿ : ಪರಾಗ್ ವೇಪಿಂಗ್ ವಿವಾದ ; ತಂಡದ ಸಂಸ್ಕೃತಿ ಕಾಪಾಡಿಕೊಳ್ಳುವಂತೆ ಆಟಗಾರರಿಗೆ ಸಂಗಕ್ಕಾರ ಎಚ್ಚರಿಕೆ



















