ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

ತಂದೆಯ ಹಣ, ಕೆಲಸಕ್ಕಾಗಿ ತಾಯಿಯನ್ನೇ ಉಸಿರುಗಟ್ಟಿಸಿ ಕೊಂದ ಮಗಳು!

April 30, 2026
Share on WhatsappShare on FacebookShare on Twitter

ರಾಂಚಿ : ಐಷಾರಾಮಿ ಜೀವನದ ವ್ಯಾಮೋಹ ಮತ್ತು ಹಣದ ಆಸೆ ಮನುಷ್ಯನನ್ನು ಎಂತಹ ಕ್ರೌರ್ಯಕ್ಕೂ ದೂಡಬಲ್ಲದು ಎಂಬುದಕ್ಕೆ ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ತನ್ನ ತಂದೆ ಬಿಟ್ಟುಹೋಗಿದ್ದ ಲಕ್ಷಾಂತರ ರೂಪಾಯಿ ಹಣ ಹಾಗೂ ಅನುಕಂಪದ ಆಧಾರದ ಮೇಲೆ ಸಿಗುವ ಕೆಲಸಕ್ಕಾಗಿ, 17 ವರ್ಷದ ಅಪ್ರಾಪ್ತ ಮಗಳು ತನ್ನ ಪ್ರಿಯತಮನೊಂದಿಗೆ ಸೇರಿ ಹೆತ್ತ ತಾಯಿಯನ್ನೇ ಬಲಿಪಡೆದಿದ್ದಾಳೆ.

ಮಣಿತೋಲಾದ ನಿವಾಸಿಯಾಗಿದ್ದ ನಹೀದಾ ಪರ್ವೀನ್ ಅವರು ತನ್ನ ದತ್ತುಪುತ್ರಿಯೊಂದಿಗೆ ವಾಸವಾಗಿದ್ದರು. ನಾಲ್ಕು ವರ್ಷಗಳ ಹಿಂದೆ ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ನಹೀದಾ ಅವರ ಪತಿ ನಿಧನರಾಗಿದ್ದರು. ಪತಿಯ ನಿಧನದ ನಂತರ ಬಂದಿದ್ದ ಸುಮಾರು 45 ಲಕ್ಷ ರೂಪಾಯಿ ಪರಿಹಾರದ ಹಣಕ್ಕೆ ಮಗಳೇ ನಾಮಿನಿಯಾಗಿದ್ದಳು.

ಆದರೆ, ಈ ಹಣವನ್ನು ಮಗಳು ತನ್ನ ಪ್ರಿಯಕರ ಅರ್ಬಾಜ್‌ಗೆ ನೀಡುತ್ತಿದ್ದುದನ್ನು ಗಮನಿಸಿದ ನಹೀದಾ, ಮಗಳ ಹಣಕಾಸಿನ ವಹಿವಾಟಿಗೆ ಬ್ರೇಕ್ ಹಾಕಿದ್ದರು. ಇದೇ ವಿಚಾರವಾಗಿ ಮನೆಯಲ್ಲಿ ಆಗಾಗ ಜಗಳ ನಡೆಯುತ್ತಿತ್ತು. ತಾಯಿಯ ಅಡ್ಡಿಯಿಂದ ಬೇಸತ್ತ ಮಗಳು ಮತ್ತು ಆಕೆಯ ಪ್ರಿಯಕರ, ನಹೀದಾ ಅವರನ್ನು ಮುಗಿಸಲು ಸ್ಕೆಚ್ ಹಾಕಿದ್ದರು. ತಾಯಿ ಮೃತಪಟ್ಟರೆ ಹಣದ ಜೊತೆಗೆ ತಂದೆಯ ಕೆಲಸವೂ ತನಗೆ ಸಿಗುತ್ತದೆ ಎಂಬುದು ಮಗಳ ಲೆಕ್ಕಾಚಾರವಾಗಿತ್ತು.

ದಿಂಬಿನಿಂದ ಉಸಿರುಗಟ್ಟಿಸಿ ಬರ್ಬರ ಕೊಲೆ

ಏಪ್ರಿಲ್ 24ರ ಶುಕ್ರವಾರ ರಾತ್ರಿ, ನಹೀದಾ ಅವರು ಗಾಢ ನಿದ್ರೆಯಲ್ಲಿದ್ದಾಗ ಈ ಭೀಕರ ಕೃತ್ಯ ನಡೆದಿದೆ. ಮಗಳು ತನ್ನ ಪ್ರಿಯಕರ ಹಾಗೂ ಆತನ ಮೂವರು ಸ್ನೇಹಿತರಿಗೆ ತಾಯಿಯನ್ನು ಕೊಲ್ಲಲು 12 ಲಕ್ಷ ರೂ.ಗಳ ಸುಪಾರಿ ನೀಡಿದ್ದಳು ಎನ್ನಲಾಗಿದೆ. ಮೊದಲೇ ರೂಪಿಸಿದ್ದ ಸಂಚಿನಂತೆ ಮನೆಗೆ ನುಗ್ಗಿದ ಆರೋಪಿಗಳು, ನಹೀದಾ ಅವರ ಕೈಕಾಲುಗಳನ್ನು ಹಿಡಿದುಕೊಂಡು ಮುಖದ ಮೇಲೆ ದಿಂಬು ಒತ್ತಿ ಉಸಿರುಗಟ್ಟಿಸಿದ್ದಾರೆ.

ಈ ವೇಳೆ ಪ್ರತಿರೋಧ ಒಡ್ಡಿದ ನಹೀದಾ ಅವರ ಕುತ್ತಿಗೆಗೆ ತೀವ್ರ ಗಾಯಗಳಾಗಿ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೊಲೆಯ ನಂತರ ಸಾಕ್ಷ್ಯ ನಾಶಪಡಿಸಲು ಹಾಸಿಗೆಯನ್ನು ಮನೆಯ ಸಮೀಪದ ಮರವೊಂದರ ಬಳಿ ಬಚ್ಚಿಟ್ಟು, ಮೃತದೇಹವನ್ನು ಡೀಪ್ ಫ್ರೀಜರ್‌ನಲ್ಲಿ ಇರಿಸಲಾಗಿತ್ತು.

ಅಪಘಾತ ಎಂದು ನಂಬಿಸಲು ಯತ್ನಿಸಿ ಸಿಕ್ಕಿಬಿದ್ದ ಮಗಳು

ಮರುದಿನ ಬೆಳಗ್ಗೆ ಮಗಳು ತನ್ನ ಸಂಬಂಧಿಕರಿಗೆ ಫೋನ್ ಮಾಡಿ, ತಾಯಿ ಬಾತ್‌ರೂಮ್‌ನಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ಕಟ್ಟುಕಥೆ ಹೇಳಿದ್ದಳು. ಇದನ್ನು ನಂಬಿದ ಸಂಬಂಧಿಕರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಶವವನ್ನು ಹೂತು ಹಾಕಿದ್ದರು. ಆದರೆ, ನಹೀದಾ ಅವರ ಕುತ್ತಿಗೆಯ ಮೇಲಿದ್ದ ಗಾಯದ ಗುರುತುಗಳು ಸಂಬಂಧಿಕರಲ್ಲಿ ಅನುಮಾನ ಮೂಡಿಸಿತ್ತು. ಈ ಬಗ್ಗೆ ನಹೀದಾ ಅವರ ಭಾವ ಪೊಲೀಸರಿಗೆ ದೂರು ನೀಡಿದಾಗ ಪ್ರಕರಣದ ಸುರುಳಿ ಬಿಚ್ಚಿಕೊಳ್ಳಲಾರಂಭಿಸಿತು.

ಪೊಲೀಸ್ ತನಿಖೆ ವೇಳೆ ತಪ್ಪೊಪ್ಪಿಗೆ

ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಿಹಾರದ ಗಯಾದಲ್ಲಿದ್ದ ಪ್ರಿಯಕರ ಅರ್ಬಾಜ್ ಹಾಗೂ ಮಗಳನ್ನು ವಶಕ್ಕೆ ಪಡೆದರು. ವಿಚಾರಣೆಯ ವೇಳೆ ಮಗಳು ತನ್ನ ತಾಯಿಯನ್ನು ಕೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಘಟನೆಯ ಎರಡು ದಿನಗಳ ನಂತರ ಮೃತದೇಹವನ್ನು ಸಮಾಧಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಸ್ತುತ ರಾಂಚಿ ನಗರ ಪೊಲೀಸ್ ವರಿಷ್ಠಾಧಿಕಾರಿ ಪಾರಸ್ ರಾಣಾ ಅವರ ನೇತೃತ್ವದಲ್ಲಿ ತನಿಖೆ ಮುಂದುವರಿದಿದ್ದು, ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ತೀವ್ರಗೊಂಡಿದೆ.

ಇದನ್ನೂ ಓದಿ : ಭೀಕರ ಅಫಘಾತ.. ಎಸ್‌ಯುವಿಗೆ ಪಿಕಪ್ ಡಿಕ್ಕಿಯಾಗಿ 15 ಮಂದಿ ದುರ್ಮರಣ!

Tags: IndiaKarnataka News beat
SendShareTweet
Previous Post

ಭೀಕರ ಅಫಘಾತ.. ಎಸ್‌ಯುವಿಗೆ ಪಿಕಪ್ ಡಿಕ್ಕಿಯಾಗಿ 15 ಮಂದಿ ದುರ್ಮರಣ!

Next Post

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಕೇಸ್ ರೈಟರ್ ಹುದ್ದೆಗಳ ನೇಮಕಾತಿ!

Related Posts

ಭೀಕರ ಅಫಘಾತ.. ಎಸ್‌ಯುವಿಗೆ ಪಿಕಪ್ ಡಿಕ್ಕಿಯಾಗಿ 15 ಮಂದಿ ದುರ್ಮರಣ!
ದೇಶ

ಭೀಕರ ಅಫಘಾತ.. ಎಸ್‌ಯುವಿಗೆ ಪಿಕಪ್ ಡಿಕ್ಕಿಯಾಗಿ 15 ಮಂದಿ ದುರ್ಮರಣ!

ಚಿನ್ನಾಭರಣ ಖರೀದಿಸಲು ತೀರ್ಮಾನಿಸಿದ್ದೀರಾ? ಹಾಗಾದ್ರೆ ಯಾವುದೇ ಕಾರಣಕ್ಕೂ ಈ ತಪ್ಪು ಮಾಡದಿರಿ!
ವ್ಯಾಪಾರ

ಚಿನ್ನಾಭರಣ ಖರೀದಿಸಲು ತೀರ್ಮಾನಿಸಿದ್ದೀರಾ? ಹಾಗಾದ್ರೆ ಯಾವುದೇ ಕಾರಣಕ್ಕೂ ಈ ತಪ್ಪು ಮಾಡದಿರಿ!

ಮುಂಬೈನ ಆಯಕಟ್ಟಿನ ಪ್ರದೇಶಗಳ ಮೇಲೆ ಉಗ್ರನ ಕಣ್ಣು : ಹ್ಯಾಂಡ್ ಮ್ಯಾಪ್‌ಗಳ ರಹಸ್ಯ ಬಿಚ್ಚಿಟ್ಟ ‘ಒಂಟಿ ತೋಳ’ ತನಿಖೆ!
ದೇಶ

ಮುಂಬೈನ ಆಯಕಟ್ಟಿನ ಪ್ರದೇಶಗಳ ಮೇಲೆ ಉಗ್ರನ ಕಣ್ಣು : ಹ್ಯಾಂಡ್ ಮ್ಯಾಪ್‌ಗಳ ರಹಸ್ಯ ಬಿಚ್ಚಿಟ್ಟ ‘ಒಂಟಿ ತೋಳ’ ತನಿಖೆ!

ಈ ಬ್ಯಾಂಕ್‌ನಲ್ಲಿ ಖಾತೆ ತೆರೆದರೆ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ, ಉಚಿತ ಆರೋಗ್ಯ ತಪಾಸಣೆ!
ದೇಶ

ಈ ಬ್ಯಾಂಕ್‌ನಲ್ಲಿ ಖಾತೆ ತೆರೆದರೆ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ, ಉಚಿತ ಆರೋಗ್ಯ ತಪಾಸಣೆ!

ಬೇಸಿಗೆಯಲ್ಲಿ ಪಾನಿಪುರಿ ಸೇವನೆ ಪ್ರಾಣಕ್ಕೆ ಕುತ್ತು ತರಬಲ್ಲದೇ? ಜಾರ್ಖಂಡ್ ದುರಂತ ಬಿಚ್ಚಿಟ್ಟ ಆಘಾತಕಾರಿ ಸತ್ಯ!
ದೇಶ

ಬೇಸಿಗೆಯಲ್ಲಿ ಪಾನಿಪುರಿ ಸೇವನೆ ಪ್ರಾಣಕ್ಕೆ ಕುತ್ತು ತರಬಲ್ಲದೇ? ಜಾರ್ಖಂಡ್ ದುರಂತ ಬಿಚ್ಚಿಟ್ಟ ಆಘಾತಕಾರಿ ಸತ್ಯ!

ಗಂಗಾ ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆ : ಉ.ಪ್ರದೇಶದ ಆರ್ಥಿಕತೆಗೆ ಹೊಸ ವೇಗ!
ದೇಶ

ಗಂಗಾ ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆ : ಉ.ಪ್ರದೇಶದ ಆರ್ಥಿಕತೆಗೆ ಹೊಸ ವೇಗ!

Next Post
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಕೇಸ್ ರೈಟರ್ ಹುದ್ದೆಗಳ ನೇಮಕಾತಿ!

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಕೇಸ್ ರೈಟರ್ ಹುದ್ದೆಗಳ ನೇಮಕಾತಿ!

  • Trending
  • Comments
  • Latest
ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಧೂಮಪಾನ ವಿವಾದದಿಂದ ಪಾರಾದ ರಿಯಾನ್ ಪರಾಗ್ ; IPL ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಂಡ BCCI

ಧೂಮಪಾನ ವಿವಾದದಿಂದ ಪಾರಾದ ರಿಯಾನ್ ಪರಾಗ್ ; IPL ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಂಡ BCCI

ಪತ್ನಿಯ ಮಾಂಗಲ್ಯ ಅಡವಿಟ್ಟು ಬೆಳೆದಿದ್ದ 3 ಎಕರೆ ಬಾಳೆ ತೋಟ ನೆಲಸಮ.. ರೈತ ಕಂಗಾಲು!

ಪತ್ನಿಯ ಮಾಂಗಲ್ಯ ಅಡವಿಟ್ಟು ಬೆಳೆದಿದ್ದ 3 ಎಕರೆ ಬಾಳೆ ತೋಟ ನೆಲಸಮ.. ರೈತ ಕಂಗಾಲು!

SHR ವಿರುದ್ಧವೂ ಮುಂದುವರಿದ ಸೂರ್ಯಕುಮಾರ್ ಕಳಪೆ ಆಟ ; ಮುಂಬೈ ಅಭಿಮಾನಿಗಳ ಆಕ್ರೋಶ!

SHR ವಿರುದ್ಧವೂ ಮುಂದುವರಿದ ಸೂರ್ಯಕುಮಾರ್ ಕಳಪೆ ಆಟ ; ಮುಂಬೈ ಅಭಿಮಾನಿಗಳ ಆಕ್ರೋಶ!

ಬೆಂಗಳೂರಿಗರೇ ಎಚ್ಚರ ; ಇಂದೂ ಸಹ ನಗರಕ್ಕೆ  ಅಪ್ಪಳಿಸಲಿದೆ ರಣರಕ್ಕಸ ಮಳೆ.. ಹವಾಮಾನ ಇಲಾಖೆ ಮುನ್ಸೂಚನೆ!

ಬೆಂಗಳೂರಿಗರೇ ಎಚ್ಚರ ; ಇಂದೂ ಸಹ ನಗರಕ್ಕೆ ಅಪ್ಪಳಿಸಲಿದೆ ರಣರಕ್ಕಸ ಮಳೆ.. ಹವಾಮಾನ ಇಲಾಖೆ ಮುನ್ಸೂಚನೆ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಧೂಮಪಾನ ವಿವಾದದಿಂದ ಪಾರಾದ ರಿಯಾನ್ ಪರಾಗ್ ; IPL ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಂಡ BCCI

ಧೂಮಪಾನ ವಿವಾದದಿಂದ ಪಾರಾದ ರಿಯಾನ್ ಪರಾಗ್ ; IPL ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಂಡ BCCI

ಪತ್ನಿಯ ಮಾಂಗಲ್ಯ ಅಡವಿಟ್ಟು ಬೆಳೆದಿದ್ದ 3 ಎಕರೆ ಬಾಳೆ ತೋಟ ನೆಲಸಮ.. ರೈತ ಕಂಗಾಲು!

ಪತ್ನಿಯ ಮಾಂಗಲ್ಯ ಅಡವಿಟ್ಟು ಬೆಳೆದಿದ್ದ 3 ಎಕರೆ ಬಾಳೆ ತೋಟ ನೆಲಸಮ.. ರೈತ ಕಂಗಾಲು!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat