ಈ ಸೀಸನ್ ಬಿಗ್‌ಬಾಸ್ ಉಳಿದ ಸೀಸನ್‌ಗಿಂತ ಬಿನ್ನವಾಗಿರುತ್ತೇ ಎಂದು ಕಾರ್ಯಕ್ರಮದ ಮೊದಲ ವಾರದಲ್ಲೇ ಸುದೀಪ್ ಹೇಳಿದ್ದರು. ಅಂತೆಯೇ ಪ್ರತಿವಾರ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕಂಡುಬರುತ್ತಿದೆ.
ಅಂತೆಯೇ ಈ ವಾರ ಬಿಗ್ ಬಾಸ್, ಪ್ಯಾಲೆಸ್ ಆಗಿ ಕನ್ವರ್ಟ್ ಆಗಿತ್ತು. ರೆಸಾರ್ಟ್ ಟಾಸ್ಕ್ ನೀಡಿದ್ದರು ಬಿಗ್ ಬಾಸ್, ಅತಿಥಿಗಳ ಸತ್ಕಾರ ಮಾಡೋದು ಸಿಬ್ಬಂದಿ ಕರ್ತವ್ಯ ಆಗಿತ್ತು. ಆದರೆ ಟಾಸ್ಕ್‌ನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಅಂತೂ ಹೇಗೋ ಟಾಸ್ಕ್ ಮುಗಿಸಿದ್ದಾರೆ ಸ್ಪರ್ಧಿಗಳು. ಈ ಬಗ್ಗೆ ಕಿಚ್ಚ ಕೂಡ ಮಾತನಾಡಿದ್ದರು. ಇದೀಗ ಇಬ್ಬರು ಸ್ಪರ್ಧಿಗಳು ಮನೆಯಲ್ಲೇ ಉಳಿದುಕೊಂಡಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಆಗಿ. ರಜತ್ ಮತ್ತು ಚೈತ್ರಾ ಅವರು ಸ್ಪರ್ಧಿಗಳಾಗಿ ಬಿಗ್‌ಬಾಸ್ ಮನೆಯಲ್ಲಿ ಇರುತ್ತಾರೆ ಆದರೆ ಅದರಲ್ಲಿಯೂ ಟ್ವಿಸ್ಟ್ ಇರಲಿದೆಯಂತೆ ಅಂತ ಸುದೀಪ್ ಹೇಳಿದ್ದಾರೆ.
ಬಂದ ಐವರಲ್ಲಿ ಮೂವರು ಅತಿಥಿಗಳು ಮಾತ್ರವೇ ಮರಳಿ ಹೋಗುತ್ತಾರೆ. ಇಬ್ಬರು ಮನೆಯಲ್ಲಿಯೇ ಉಳಿದುಕೊಳ್ಳಲಿದ್ದಾರೆ ಎಂದಿದ್ದರು. ನಿಮ್ಮ ಪ್ರಕಾರ ಯಾರು ಉಳಿದುಕೊಳ್ಳಬೇಕು ಎಂಬ ಪ್ರಶ್ನೆಗೆ ಬಹುತೇಕ ಸ್ಪರ್ಧಿಗಳು ಮೋಕ್ಷಿತಾ ಹೆಸರು ಹೇಳಿದರು.
ಕೆಲವರು ಚೈತ್ರಾ, ತ್ರಿವಿಕ್ರಮ್ ಹೆಸರು ತೆಗೆದುಕೊಂಡರು. ಸುದೀಪ್ ಅವರು ಮದುವೆ ಇದ್ದ ಕಾರಣ ಉಗ್ರಂ ಮಂಜು ಅವರು ಹೊರಡುತ್ತಾರೆ, ಇನ್ನು ಭದ್ರೇಗೌಡ, ತ್ರಿವಿಕ್ರಮ್ ಧಾರಾವಾಹಿಯಲ್ಲಿ ಬ್ಯುಸಿ ಇದ್ದಾರೆ ಅನ್ನೋ ಅರ್ಥದಲ್ಲಿ ಹೇಳಿದ್ದರು.
ಮೋಕ್ಷಿತಾ ಕೂಡ ಹೊರಗೆ ಹೋಗಲಿದ್ದಾರೆ ಅಂತ ಅನೌನ್ಸ್ ಮಾಡಿದರು. ರಜತ್ ಹಾಗೂ ಚೈತ್ರಾ ಕುಂದಾಪುರ ಅವರು ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳಾಗಿ ಮುಂದುವರಿಯಲಿದ್ದಾರೆ ಎಂದರು.
ಇದನ್ನೂ ಓದಿ : ನಟಿ ಆಶಿಕಾ ರಂಗನಾಥ್ ಮಾವನ ಮಗಳು ಆತ್ಮಹತ್ಯೆ | ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಪ್ರಾಣ ಕಳೆದುಕೊಂಡ ಯುವತಿ



















