ಬೆಂಗಳೂರು : ಬೈಕ್ ಟ್ಯಾಕ್ಸಿ ಚಾಲಕ ಮತ್ತು ಆಟೋ ಚಾಲಕನ ನಡುವೆ ಕ್ಷುಲ್ಲಕ ಕಾರಣಕ್ಕೆ ಹೊಡೆದಾಡಿಕೊಂಡ ಘಟನೆ ಬೆಂಗಳೂರಿನ ಬೆಳ್ಳಂದೂರಿನ ವರ್ಸ್ ಪಾರ್ಕ್ ವುಡ್ ಅಪಾರ್ಟ್‌ಮೆಂಟ್ ಮುಂಭಾಗ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ವಾಗ್ವಾದ ಕ್ಷಣಾರ್ಧದಲ್ಲೇ ಮಾರಾಮಾರಿ ಹಂತಕ್ಕೆ ತಲುಪಿದೆ. ಇಬ್ಬರೂ ರಸ್ತೆಯಲ್ಲೇ ಪರಸ್ಪರ ಹಲ್ಲೆ ನಡೆಸಿದ್ದು, ರಕ್ತ ಬರುವಂತೆ ಹೊಡೆದಾಡಿಕೊಂಡಿದ್ದಾರೆ.
ಈ ಗಲಾಟೆಯ ದೃಶ್ಯವನ್ನು ಅಲ್ಲಿದ್ದವರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇಬ್ಬರ ನಡುವೆ ನಡೆದ ಜಗಳ ತೀವ್ರ ಸ್ವರೂಪ ಪಡೆದಿದ್ದರಿಂದ ಸ್ಥಳೀಯರು ಮಧ್ಯ ಪ್ರವೇಶ ಮಾಡಿ ಇಬ್ಬರನ್ನೂ ಬೇರ್ಪಡಿಸಿ ಗಲಾಟೆ ಶಮನಗೊಳಿಸಿದರು.
ಇದನ್ನೂ ಓದಿ : ಆಗುಂಬೆಯಲ್ಲಿ ಅಪರೂಪದ ಮರವಾಸಿ ಸಿಹಿನೀರಿನ ಏಡಿ ಪತ್ತೆ!



















