ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

ಚೀನಾದ ಮೆಗಾ-ಅಣೆಕಟ್ಟನ್ನು “ಟಿಕ್ಕಿಂಗ್ ಬಾಂಬ್” ಎಂದ ಅರುಣಾಚಲ ಸಿಎಂ: ರಹಸ್ಯ ಯೋಜನೆ ಭಾರತಕ್ಕೇಕೆ ಆತಂಕಕಾರಿ?

July 11, 2025
Share on WhatsappShare on FacebookShare on Twitter

ನವದೆಹಲಿ: ಚೀನಾ ನಿರ್ಮಿಸುತ್ತಿರುವ ಯಾರ್ಲುಂಗ್ ತ್ಸಾಂಗ್ಪೋ ನದಿಯ (ಭಾರತದ ಬ್ರಹ್ಮಪುತ್ರ) ರಹಸ್ಯ ಮೆಗಾ-ಅಣೆಕಟ್ಟು ಯೋಜನೆ, ಭಾರತದ ಗಡಿಯಿಂದ ಕೇವಲ 50 ಕಿ.ಮೀ. ದೂರದಲ್ಲಿದ್ದು, ಇದನ್ನು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು “ಟಿಕ್ಕಿಂಗ್ ಟೈಮ್ ಬಾಂಬ್” ಎಂದು ಬಣ್ಣಿಸಿದ್ದಾರೆ. ಈ ಅಣೆಕಟ್ಟು ಬೃಹತ್ ಜಲಾಶಯ ಸಾಮರ್ಥ್ಯವನ್ನು ಹೊಂದಿದ್ದು, ದತ್ತಾಂಶಗಳ ಬಗ್ಗೆ ಸಂಪೂರ್ಣ ಪಾರದರ್ಶಕತೆಯಿಲ್ಲ. ಇದು ಕೆಳಭಾಗದ ಪ್ರದೇಶಗಳಲ್ಲಿ ಪರಿಸರ, ಕಾರ್ಯತಂತ್ರ ಮತ್ತು ಮಾನವೀಯ ಅಪಾಯಗಳನ್ನು ಸೃಷ್ಟಿಸುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಟಿಬೆಟ್‌ನಲ್ಲಿ ಯಾರ್ಲುಂಗ್ ತ್ಸಾಂಗ್ಪೋ ನದಿಯ ಮೇಲೆ ನಿರ್ಮಾಣಗೊಳ್ಳಲಿರುವ ಈ ಅಣೆಕಟ್ಟು, ಜಲವಿದ್ಯುತ್ ಉತ್ಪಾದನೆಯಲ್ಲಿ ಚೀನಾದ ತ್ರೀ ಗೋರ್ಜಸ್ ಅಣೆಕಟ್ಟನ್ನೂ ಮೀರಿಸಲಿದೆ. ವರದಿಯ ಪ್ರಕಾರ, 137 ಶತಕೋಟಿ ಡಾಲರ್ ವೆಚ್ಚದ ಈ ಯೋಜನೆಯು 60,000 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಿದೆ. ಆದಾಗ್ಯೂ, ಈ ಬೃಹತ್ ಯೋಜನೆ ಸಂಪೂರ್ಣ ರಹಸ್ಯವಾಗಿ ಉಳಿದಿದೆ. ಇದು ಭಾರತ ಮತ್ತು ಬಾಂಗ್ಲಾದೇಶದ ಕೆಳಭಾಗದ ಸಮುದಾಯಗಳು ಮತ್ತು ಅವುಗಳ ಪರಿಸರ ವ್ಯವಸ್ಥೆಗಳ ಮೇಲೆ ಇದು ವಿನಾಶಕಾರಿ ಪರಿಣಾಮ ಬೀರಬಹುದು ಎಂದು ಪೆಮಾ ಖಂಡು ಎಚ್ಚರಿಸಿದ್ದಾರೆ.

2024ರಲ್ಲಿ ಮೆಡೋಗ್ ಕೌಂಟಿಯಲ್ಲಿ ಅಣೆಕಟ್ಟು ಅನುಮೋದನೆಯ ವರದಿಗಳ ಹೊರತಾಗಿಯೂ, ಬೀಜಿಂಗ್‌ನ ಪಾರದರ್ಶಕತೆಯ ಕೊರತೆಯು ಯೋಜನೆಯನ್ನು ಬಹುಪಾಲು ರಹಸ್ಯವಾಗಿರಿಸಿದೆ. ಇದು ಪ್ರಾದೇಶಿಕ ಉದ್ವಿಗ್ನತೆಗಳನ್ನೂ ಹೆಚ್ಚಿಸಿದೆ. ಈ ಅಣೆಕಟ್ಟು “ಅರುಣಾಚಲ ಪ್ರದೇಶದ ಅಸ್ತಿತ್ವಕ್ಕೂ ಬೆದರಿಕೆ”ಯಾಗಿದೆ. ಏಕೆಂದರೆ, ಹಠಾತ್ ನೀರು ಬಿಡುಗಡೆಯಾದರೆ ಸಿಯಾಂಗ್ ಮತ್ತು ಬ್ರಹ್ಮಪುತ್ರ ನದಿಗಳಲ್ಲಿ ಪ್ರವಾಹ ಉಂಟಾಗಬಹುದು, ಆದರೆ ಹರಿವನ್ನು ನಿರ್ಬಂಧಿಸಿದರೆ ನೀರಿನ ಲಭ್ಯತೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಯೋಜನೆಯ ರಹಸ್ಯ ಸ್ವರೂಪ – ಅಂತರರಾಷ್ಟ್ರೀಯ ಜಲ ಒಪ್ಪಂದಗಳಿಗೆ ಸಹಿ ಹಾಕಲು ಚೀನಾ ನಿರಾಕರಿಸುವುದರೊಂದಿಗೆ – ಪರಿಸರ ಮತ್ತು ಭೌಗೋಳಿಕ ರಾಜಕೀಯ ಪರಿಣಾಮಗಳ ಬಗ್ಗೆ ಕಳವಳಗಳನ್ನು ಮತ್ತಷ್ಟು ಹೆಚ್ಚಿಸಿದೆ.

ಅಣೆಕಟ್ಟಿನಿಂದ ಸಂಭಾವ್ಯ ಬೆದರಿಕೆಗಳು ಮತ್ತು ಆತಂಕಗಳಿದ್ದರೂ, ಕೆಲವು ತಜ್ಞರು ಚೀನಾ ಈ ನದಿಯನ್ನೇ ಅಸ್ತ್ರವಾಗಿ ಬಳಸಬಹುದೇ ಎಂಬ ಭೀತಿ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಅದರ ಯೋಜನೆಗಳು ಹೆಚ್ಚಾಗಿ ‘ರನ್-ಆಫ್-ದಿ-ರಿವರ್’ ಸ್ವರೂಪದ್ದಾಗಿದ್ದು, ಕೆಳಭಾಗದ ಹರಿವನ್ನು ಗಣನೀಯವಾಗಿ ಬದಲಾಯಿಸುವ ಸಾಧ್ಯತೆಯಿಲ್ಲ. ಭಾರತವು ಪಾಕಿಸ್ತಾನದೊಂದಿಗೆ ಸಿಂಧೂ ನದಿ ಒಪ್ಪಂದವನ್ನು ಅಮಾನತುಗೊಳಿಸಿದ ಬೆನ್ನಲ್ಲೇ ಈ ಕಳವಳಗಳು ಹೊರಬಿದ್ದಿವೆ.

ಮುಖ್ಯಮಂತ್ರಿ ಖಂಡು ಹೇಳಿದ್ದೇನು?
ಪಿಟಿಐ ಸುದ್ದಿ ಸಂಸ್ಥೆಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಅವರು ಚೀನಾದ ಮೆಗಾ-ಅಣೆಕಟ್ಟನ್ನು ಗಂಭೀರ ಕಳವಳವೆಂದು ವಿವರಿಸಿದ್ದು, ಅದನ್ನು “ಜಲ ಬಾಂಬ್” ಮತ್ತು ಬೀಜಿಂಗ್‌ನ ಮಿಲಿಟರಿ ಅಪಾಯಗಳಿಗಿಂತಲೂ ಮೀರಿದ “ಅಸ್ತಿತ್ವದ ಬೆದರಿಕೆ” ಎಂದು ಕರೆದಿದ್ದಾರೆ. ಅರುಣಾಚಲ ಪ್ರದೇಶವು ಟಿಬೆಟ್‌ನೊಂದಿಗೆ 1,200 ಕಿ.ಮೀ. ಗಡಿಯನ್ನು ಹಂಚಿಕೊಂಡಿದೆಯೇ ವಿನಹಾ ಚೀನಾದೊಂದಿಗೆ ಅಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ಟಿಬೆಟ್ ಅನ್ನು ಚೀನಾ 1950 ರಲ್ಲಿ ಆಕ್ರಮಿಸಿಕೊಂಡಿದ್ದನ್ನು ಅವರು ಉಲ್ಲೇಖಿಸಿದ್ದಾರೆ.

“ಯಾರಿಗೆ ಗೊತ್ತು ಚೀನಾ ಏನು ಮಾಡಬಹುದು ಎಂದು? ಅಂತರರಾಷ್ಟ್ರೀಯ ಜಲ ಒಪ್ಪಂದಗಳಿಗೆ ಸಹಿ ಹಾಕದ ರಾಷ್ಟ್ರವಾಗಿರುವುದರಿಂದ, ಅದನ್ನು ಒಂದು ರೀತಿಯ ‘ಜಲ ಬಾಂಬ್’ ಆಗಿಯೂ ಬಳಸಬಹುದು” ಎಂದು ಖಂಡು ಹೇಳಿದ್ದಾರೆ.

ಅವರು ಮೆಡೋಗ್ ಅಣೆಕಟ್ಟು ಅರುಣಾಚಲ, ಅಸ್ಸಾಂ ಮತ್ತು ಬಾಂಗ್ಲಾದೇಶಕ್ಕೆ ನಿರ್ಣಾಯಕವಾಗಿರುವ ಸಿಯಾಂಗ್ ಮತ್ತು ಬ್ರಹ್ಮಪುತ್ರ ನದಿಗಳಿಗೆ ಅಡ್ಡಿಪಡಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದಿದ್ದಾರೆ. ಚೀನಾದ ಈ ದುಸ್ಸಾಹಸದ ಸಂಭಾವ್ಯ ದುಷ್ಪರಿಣಾಮಗಳನ್ನು ನಿಗ್ರಹಿಸಲು ಮತ್ತು ಯಾವುದೇ ಅನಿರೀಕ್ಷಿತ ಪರಿಸ್ಥಿತಿಗೆ ಸನ್ನದ್ಧರಾಗಲು, ಅರುಣಾಚಲ ಪ್ರದೇಶವು ನೀರಿನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅದನ್ನು ರಕ್ಷಣಾ ಕಾರ್ಯವಿಧಾನವಾಗಿ ಸ್ಥಾಪಿಸಲು ಬಹುಉದ್ದೇಶಿತ ಸಿಯಾಂಗ್ ಮೇಲ್ದಂಡೆ ಯೋಜನೆ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪಿಸಿದ್ದೇವೆ ಎಂದೂ ಖಂಡು ಬಹಿರಂಗಪಡಿಸಿದ್ದಾರೆ.

ಚೀನಾದ ‘ಜಲ ಬಾಂಬ್’ ಬಗ್ಗೆ ಭಾರತ ಆತಂಕಪಡಬೇಕೇ?
ಯಾರ್ಲುಂಗ್ ತ್ಸಾಂಗ್ಪೋ ನದಿಯು ಅರುಣಾಚಲಕ್ಕೆ ಸಿಯಾಂಗ್ ಆಗಿ ಹರಿಯುವ ಮಹಾ ತಿರುವಿನಲ್ಲೇ ಚೀನಾದ ಅಣೆಕಟ್ಟು ಇದೆ. ಇದು ನೀರಿನ ಹರಿವನ್ನು ಬದಲಾಯಿಸಿದರೆ, ಉದ್ದೇಶಪೂರ್ವಕವಾಗಿ ಅಥವಾ ಅನ್ಯಥಾ, ವಿನಾಶಕಾರಿ ಪ್ರವಾಹದ ಭೀತಿಯನ್ನು ಹುಟ್ಟುಹಾಕುತ್ತದೆ. ಚೀನಾ ಹಠಾತ್ತನೆ ನೀರನ್ನು ಬಿಡುಗಡೆ ಮಾಡಿದರೆ, “ನಮ್ಮ ಸಂಪೂರ್ಣ ಸಿಯಾಂಗ್ ಪಟ್ಟಿಯು ನಾಶವಾಗುತ್ತದೆ” ಎನ್ನುತ್ತಾರೆ ಖಂಡು. ಇದು ಆದಿ ಬುಡಕಟ್ಟು ಸಮುದಾಯ ಮತ್ತು ಇತರ ಸಮುದಾಯಗಳಿಗೆ ಅಪಾಯವನ್ನುಂಟುಮಾಡುವುದು ಖಚಿತ, ಅಲ್ಲದೇ ಆಸ್ತಿ, ಭೂಮಿ ಮತ್ತು ಮಾನವ ಜೀವಗಳಿಗೆ ವಿನಾಶಕಾರಿ ನಷ್ಟವನ್ನು ಉಂಟುಮಾಡಬಹುದು ಎಂದಿದ್ದಾರೆ.

ಚೀನಾ, ಮೇಲ್ಭಾಗದ ದೇಶವಾಗಿ, ಬ್ರಹ್ಮಪುತ್ರದಂತಹ ನದಿಗಳ ಹರಿವಿನ ಮೇಲೆ ಕಾರ್ಯತಂತ್ರದ ನಿಯಂತ್ರಣವನ್ನು ಹೊಂದಿದೆ. ಇದು ಏಕಪಕ್ಷೀಯವಾಗಿ ನೀರನ್ನು ತಿರುಗಿಸಲು ಅಥವಾ ಅಣೆಕಟ್ಟು ಕಟ್ಟಲು ಶಕ್ತಿಯನ್ನು ನೀಡುತ್ತದೆ, ಇದು ಭಾರತ ಮತ್ತು ಬಾಂಗ್ಲಾದೇಶದಂತಹ ಕೆಳಭಾಗದ ರಾಷ್ಟ್ರಗಳಿಗೆ ಗಂಭೀರ ಪರಿಸರ ಮತ್ತು ಭದ್ರತಾ ಬೆದರಿಕೆಗಳನ್ನು ಒಡ್ಡುತ್ತದೆ.

ಸಿಯಾಂಗ್ ಮತ್ತು ಬ್ರಹ್ಮಪುತ್ರದಲ್ಲಿ ನೀರಿನ ಹರಿವು ಕಡಿಮೆಯಾದರೆ ಭಾರತದ ಈಶಾನ್ಯ ಮತ್ತು ಬಾಂಗ್ಲಾದೇಶದಲ್ಲಿ ಕೃಷಿ, ಮೀನುಗಾರಿಕೆ ಮತ್ತು ಜೀವನೋಪಾಯಕ್ಕೆ ಅಡ್ಡಿಯಾಗಬಹುದು.

ಮೆಡೋಗ್ ಅಣೆಕಟ್ಟು ‘ರನ್-ಆಫ್-ದಿ-ರಿವರ್’ ಯೋಜನೆಯಾಗಿದ್ದರೂ, ಇದು ಗಣನೀಯ ಜಲಾಶಯವನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ, ಅಂದರೆ ಇದು ಗಮನಾರ್ಹ ಪ್ರಮಾಣದ ನೀರನ್ನು ಸಂಗ್ರಹಿಸಬಹುದು ಮತ್ತು ಕೆಳಭಾಗದ ಹರಿವಿನ ಮೇಲೆ ಪರಿಣಾಮ ಬೀರಬಹುದು.

ಇದಲ್ಲದೆ, ಗಡಿ ದಾಟುವ ನದಿಗಳ ಸಮಾನ ಹಂಚಿಕೆ ಮತ್ತು ನಿರ್ವಹಣೆಯನ್ನು ನಿಯಂತ್ರಿಸುವ 1997ರ ವಿಶ್ವಂಸಸ್ಥೆಯ ಗಡಿರಹಿತ ಜಲಮಾರ್ಗಗಳ ಬಳಕೆ ಕುರಿತ ಸಮಾವೇಶಕ್ಕೆ ಸಹಿ ಹಾಕಲು ಚೀನಾದ ನಿರಾಕರಣೆಯು ಭಾರತಕ್ಕೆ ಮಾತ್ರವಲ್ಲದೆ ಪ್ರವಾಹ ಪೀಡಿತ ಬಾಂಗ್ಲಾದೇಶಕ್ಕೂ ಕಳವಳಕಾರಿಯಾಗಿದೆ.

Tags: Arunachal CMChina's mega-damsecret projectticking bomb
SendShareTweet
Previous Post

ಮತಾಂತರಕ್ಕಾಗಿ ಉತ್ತರಪ್ರದೇಶದ ಚಂಗೂರ್ ಬಾಬಾಗೆ ಇಸ್ಲಾಮಿಕ್ ದೇಶಗಳಿಂದ ಹರಿದುಬಂದಿತ್ತು 300 ಕೋಟಿ ರೂ.?

Next Post

ಹೊಸ ರಾಜಕೀಯ ಪಕ್ಷ ಸ್ಥಾಪಿಸುತ್ತಾರಾ ಲಾಲು ಪುತ್ರ ತೇಜ್ ಪ್ರತಾಪ್?

Related Posts

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್
ದೇಶ

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಗುಟ್ಕಾ, ಕಲಬೆರಕೆ ತಡೆ ನಂತರ ಮಹಾರಾಷ್ಟ್ರ ಎಫ್‌ಡಿಎ ಮುಂದಿನ ಗುರಿ ಚೈನೀಸ್ ಫುಡ್ ಸ್ಟಾಲ್‌!
ದೇಶ

ಗುಟ್ಕಾ, ಕಲಬೆರಕೆ ತಡೆ ನಂತರ ಮಹಾರಾಷ್ಟ್ರ ಎಫ್‌ಡಿಎ ಮುಂದಿನ ಗುರಿ ಚೈನೀಸ್ ಫುಡ್ ಸ್ಟಾಲ್‌!

ಜಾರ್ಖಂಡ್‌ನಲ್ಲಿ ಉಗ್ರ ರೂಪಕ್ಕೆ ತಿರುಗಿದ ವಿದ್ಯಾರ್ಥಿಗಳ ದಂಗೆ : ಪ್ರತಿಭಟನಾ ಸ್ಥಳದಲ್ಲೇ ಗುಂಡಿನ ಚಕಮಕಿ!
ದೇಶ

ಜಾರ್ಖಂಡ್‌ನಲ್ಲಿ ಉಗ್ರ ರೂಪಕ್ಕೆ ತಿರುಗಿದ ವಿದ್ಯಾರ್ಥಿಗಳ ದಂಗೆ : ಪ್ರತಿಭಟನಾ ಸ್ಥಳದಲ್ಲೇ ಗುಂಡಿನ ಚಕಮಕಿ!

ಪ್ರಕ್ಷುಬ್ಧತೆಗೆ ಒಳಗಾದ ಏರ್ ಇಂಡಿಯಾ ಪೈಲಟ್ ಮಾದಕದ್ರವ್ಯ ಪರೀಕ್ಷೆಯಲ್ಲಿ ಫೇಲ್ : ತನಿಖೆಗೆ ಆದೇಶ!
ದೇಶ

ಪ್ರಕ್ಷುಬ್ಧತೆಗೆ ಒಳಗಾದ ಏರ್ ಇಂಡಿಯಾ ಪೈಲಟ್ ಮಾದಕದ್ರವ್ಯ ಪರೀಕ್ಷೆಯಲ್ಲಿ ಫೇಲ್ : ತನಿಖೆಗೆ ಆದೇಶ!

ಜೆನ್ ಝೀ ನಮ್ಮ ಮಕ್ಕಳು, ಅವರನ್ನು ದಾರಿ ತಪ್ಪಿಸಲಾಯಿತು : ಧರ್ಮೇಂದ್ರ ಪ್ರಧಾನ್
ದೇಶ

ಜೆನ್ ಝೀ ನಮ್ಮ ಮಕ್ಕಳು, ಅವರನ್ನು ದಾರಿ ತಪ್ಪಿಸಲಾಯಿತು : ಧರ್ಮೇಂದ್ರ ಪ್ರಧಾನ್

ಮತ್ತೆ ಒಂದಾದ ವಿಜಯ್ -ಸಂಗೀತ : ಒಂದು ವಾರಗಳ ಹಿಂದೆಯೇ ಹಿಂಟ್ ಕೊಟ್ರಾ ತ್ರಿಷಾ?
ಸಿನಿಮಾ

ಮತ್ತೆ ಒಂದಾದ ವಿಜಯ್ -ಸಂಗೀತ : ಒಂದು ವಾರಗಳ ಹಿಂದೆಯೇ ಹಿಂಟ್ ಕೊಟ್ರಾ ತ್ರಿಷಾ?

Next Post
ಹೊಸ ರಾಜಕೀಯ ಪಕ್ಷ ಸ್ಥಾಪಿಸುತ್ತಾರಾ ಲಾಲು ಪುತ್ರ ತೇಜ್ ಪ್ರತಾಪ್?

ಹೊಸ ರಾಜಕೀಯ ಪಕ್ಷ ಸ್ಥಾಪಿಸುತ್ತಾರಾ ಲಾಲು ಪುತ್ರ ತೇಜ್ ಪ್ರತಾಪ್?

  • Trending
  • Comments
  • Latest
ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಶ್ರೀಲಂಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆರಂಭದಲ್ಲೇ ವಿಕೆಟ್ ಕಳೆದುಕೊಂಡ ಜೈಸ್ವಾಲ್

ಶ್ರೀಲಂಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆರಂಭದಲ್ಲೇ ವಿಕೆಟ್ ಕಳೆದುಕೊಂಡ ಜೈಸ್ವಾಲ್

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಅಮೆರಿಕದ ಸೇನಾನೆಲೆ ಮೇಲಿಂದ ಹಾರಿತೇ ‘100 ಅಡಿ’ ಅಗಲದ ಹಾರುವ ತಟ್ಟೆ? ತನಿಖೆಗೆ ಪೆಂಟಗನ್ ಆದೇಶ!

ಅಮೆರಿಕದ ಸೇನಾನೆಲೆ ಮೇಲಿಂದ ಹಾರಿತೇ ‘100 ಅಡಿ’ ಅಗಲದ ಹಾರುವ ತಟ್ಟೆ? ತನಿಖೆಗೆ ಪೆಂಟಗನ್ ಆದೇಶ!

IPL 2027 ಟ್ರೇಡ್‌ ಬಝ್ : ಶಿವಂ ದುಬೆ, ನೆಹಾಲ್ ವಧೇರಾ ಮೇಲೆ ಗುಜರಾತ್ ಟೈಟನ್ಸ್ ಕಣ್ಣು!

IPL 2027 ಟ್ರೇಡ್‌ ಬಝ್ : ಶಿವಂ ದುಬೆ, ನೆಹಾಲ್ ವಧೇರಾ ಮೇಲೆ ಗುಜರಾತ್ ಟೈಟನ್ಸ್ ಕಣ್ಣು!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಶ್ರೀಲಂಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆರಂಭದಲ್ಲೇ ವಿಕೆಟ್ ಕಳೆದುಕೊಂಡ ಜೈಸ್ವಾಲ್

ಶ್ರೀಲಂಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆರಂಭದಲ್ಲೇ ವಿಕೆಟ್ ಕಳೆದುಕೊಂಡ ಜೈಸ್ವಾಲ್

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat