ಬೆಂಗಳೂರು : ಅಮೋಘ ಆಟವಾಡಿದ ಅರವಿಂದ್ ಅವೇಂಜರ್ಸ್ ತಂಡ ಬಿ ಝೆಡ್ ಕಪ್ ಮೀಡಿಯಾ ಕ್ರಿಕೆಟ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. 9ಡ್ರೀಮ್ಸ್ ಸಂಸ್ಥೆ ಆಯೋಜಿಸಿದ್ದ ಟೂರ್ನಿಯ ರೋಚಕ ಫೈನಲ್ ಪಂದ್ಯದಲ್ಲಿ ಅರವಿಂದ್ ಅವೇಂಜರ್ಸ್ ತಂಡವು ದೇವ್ ಬ್ಯಾಟಲರ್ಸ್ ತಂಡವನ್ನು 21 ರನ್‌ಗಳಿಂದ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿತು.
ನಗರದ ಜಿಕೆವಿಕೆ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅರವಿಂದ್ ಅವೇಂಜರ್ಸ್ ತಂಡ ನಿಗದಿತ 5 ಓವರ್‌ಗಳಲ್ಲಿ 59 ರನ್ ದಾಖಲಿಸಿತು. ಬಳಿಕ 60 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ದೇವ್ ಬ್ಯಾಟಲರ್ಸ್ ತಂಡ 5 ಓವರ್‌ಗಳಲ್ಲಿ 38 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಅರವಿಂದ್ ಅವೇಂಜರ್ಸ್ ತಂಡ 21 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಟೂರ್ನಿಯ ಚಾಂಪಿಯನ್ ಹಾಗೂ ರನ್ನರ್‌ಅಪ್ ತಂಡಗಳಿಗೆ ಮಾಜಿ ಮುಖ್ಯಮಂತ್ರಿ ಅವರ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಹಾಗೂ ವಸತಿ ಸಚಿವರ ಮಾಧ್ಯಮ ಸಲಹೆಗಾರ ಲಕ್ಷ್ಮೀನಾರಾಯಣ್ ಅವರು ಟ್ರೋಫಿ ಹಸ್ತಾಂತರಿಸಿದರು.
ಒಟ್ಟು 12 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು. ಪತ್ರಕರ್ತರು, ಜನಪ್ರತಿನಿಧಿಗಳ ಮಾಧ್ಯಮ ಸಲಹೆಗಾರರು, ಪೊಲೀಸ್ ಅಧಿಕಾರಿಗಳು ಹಾಗೂ ಕಲಾವಿದರು ಟೂರ್ನಿಯಲ್ಲಿ ಪಾಲ್ಗೊಂಡು ಕ್ರಿಕೆಟ್ ಆಡಿದರು.
ಇದನ್ನೂ ಓದಿ : ಗಡಿ ದಾಟಿದ ಗಣೇಶೋತ್ಸವದ ಸಂಭ್ರಮ : ಪಾಕಿಸ್ತಾನದ ಕರಾಚಿಯಲ್ಲಿ ಗಣಪತಿ ವಿಗ್ರಹಕ್ಕೆ ಬಣ್ಣ ಬಳಿದ ಮುಸ್ಲಿಂ ಕಲಾವಿದ!


















