ಮೈಸೂರು : ಮೈಸೂರಿನ ಸಿದ್ದಾರ್ಥ ಬಡಾವಣೆಯಲ್ಲಿರುವ ಮನೆಯೊಂದಕ್ಕೆ ನುಗ್ಗಿದ ಚಿರತೆ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಸುರೇಶ್ ಎಂಬುವವರ ನಿವಾಸದೊಳಗೆ ನುಗ್ಗಿದ ಚಿರತೆ ಮನೆಯ ಕೊಣೆಯಲ್ಲಿದ್ದ ಮಂಚದ ಕೆಳಗೆ ಅಡಗಿ ಕುಳಿತಿತ್ತು.

ಚಿರತೆ ಎಂಟ್ರಿಯಾದ ಸಮಯದಲ್ಲಿ ಮನೆಯಲ್ಲಿ ಸುರೇಶ್ ಅವರ ಪತ್ನಿ ಸುಜಾತ ಹಾಗೂ ತಾಯಿ ಶೈಲಜಾ ಇದ್ದರು. ಚಿರತೆ ಶೈಲಜಾ ಅವರ ಕೊಠಡಿಗೆ ನುಗ್ಗಿದ ವೇಳೆ, ಸುಜಾತ ತಮ್ಮ ಸಮಯಪ್ರಜ್ಞೆ ಹಾಗೂ ಧೈರ್ಯದಿಂದ ತಾಯಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಈ ವೇಳೆ ಅರಣ್ಯ ಅಧಿಕಾರಿಗಳಿಗೆ ವಿಷಯ ತಿಳಿಸಲಾಗಿದ್ದು, ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ಆರಂಭಿಸಿದರು. ಕೆಲ ಗಂಟೆಗಳ ಪ್ರಯತ್ನದ ಬಳಿಕ ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಈ ಘಟನೆ ಪ್ರದೇಶದಲ್ಲಿ ಕೆಲಕಾಲ ಆತಂಕ ಮೂಡಿಸಿದರೂ, ಮಹಿಳೆಯ ಧೈರ್ಯ ಹಾಗೂ ಅರಣ್ಯಾಧಿಕಾರಿಗಳ ತ್ವರಿತ ಕಾರ್ಯಾಚರಣೆ ಪ್ರಶಂಸೆಗೆ ಪಾತ್ರವಾಗಿದೆ.

ಇದನ್ನೂ ಓದಿ : ಜನಸ್ಪಂದನ ಕಾರ್ಯಕ್ರಮದಲ್ಲಿ PDO ವಿರುದ್ದ ಶಾಸಕ ಗರಂ.. ಅರ್ಜಿ ಎಸೆದು ಆಕ್ರೋಶ!



















