ಕೋಲಾರ : ಜಿಲ್ಲೆಯ ಮುಳಬಾಗಿಲು ತಾಲೂಕಿನ ತಾಯಲೂರು ಗ್ರಾಮದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ PDO ವಿರುದ್ಧ ಶಾಸಕ ಸಮೃದ್ಧಿ ಮಂಜುನಾಥ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಬಂದಿದ್ದ 78 ಅರ್ಜಿಗಳ ಪೈಕಿ 56 ಅರ್ಜಿಗಳು PDO ಕಾರ್ಯವೈಖರಿ ವಿರುದ್ಧವೇ ಇದ್ದವು ಎಂಬುದು ಬೆಳಕಿಗೆ ಬಂದಿದೆ. ಇದರಿಂದ ಕೆಂಡಮಂಡಲವಾದ ಶಾಸಕ, PDO ಶ್ರೀನಿವಾಸರೆಡ್ಡಿ ಮುಖದ ಮೇಲೆ ಅರ್ಜಿಯನ್ನು ಎಸೆದು ಅಸಮಾಧಾನ ಹೊರಹಾಕಿದ್ದಾರೆ.
ಗ್ರಾಮದ ನೈರ್ಮಲ್ಯ ಸಮಸ್ಯೆ, ಚರಂಡಿಗಳ ಸ್ವಚ್ಛತೆ ಕೊರತೆ, ಅನಧಿಕೃತ ಅಂಗಡಿಗಳ ತೆರವು ಇಲ್ಲದಿರುವುದು ಹಾಗೂ ದೇವಾಲಯದ ಎದುರು ಮಾಂಸದ ಅಂಗಡಿಗೆ ಅನುಮತಿ ನೀಡಿರುವುದು ಸೇರಿದಂತೆ ಹಲವು ದೂರುಗಳು ಕೇಳಿಬಂದ ಹಿನ್ನೆಲೆ ಶಾಸಕ ಸಮೃದ್ಧಿ ಮಂಜುನಾಥ್ PDO ವಿರುದ್ಧ ಗುಡುಗಿದ್ದಾರೆ.
ಬಳಿಕ ಪರಿಸ್ಥಿತಿ ಗಂಭೀರವಾಗಿರುವುದನ್ನು ಗಮನಿಸಿದ ಶಾಸಕ, PDO ಅವರನ್ನು ಕೂಡಲೇ ಬದಲಾಯಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಸ್ಥಳೀಯರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಒದಗಿಸಬೇಕು ಎಂದು ಅವರು ಎಚ್ಚರಿಸಿದ್ದಾರೆ.
ಇದನ್ನೂ ಓದಿ : ಇರಾನ್‌ನ ಗುಪ್ತ ನೌಕೆಗಳ ಮೇಲೆ ಟ್ರಂಪ್ ಕಣ್ಣು : ‘ಶ್ಯಾಡೋ ಫ್ಲೀಟ್’ ಜಾಲಕ್ಕೆ ಬ್ರೇಕ್ ಹಾಕಲು ಅಮೆರಿಕ ಸನ್ನದ್ಧ!


















