ಬೆಂಗಳೂರು : ಕರ್ನಾಟಕದಲ್ಲಿ ತ್ವರಿತ ವಾಣಿಜ್ಯ ಆ್ಯಪ್‌ಗಳ ಮೂಲಕ ವಿಷಕಾರಿ ಉಮ್ಮತ್ತಿ ಕಾಯಿ (Datura) ಹಣ್ಣು ಹಾಗೂ ಬೀಜಗಳ ಮಾರಾಟ ಪತ್ತೆಯಾಗಿದ್ದು, ಆಹಾರ ಸುರಕ್ಷತೆ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಮಾನವ ಸೇವನೆಗೆ ಯೋಗ್ಯವಲ್ಲದ ಈ ಉತ್ಪನ್ನಗಳನ್ನು ಆಹಾರ ಪದಾರ್ಥವೆಂಬಂತೆ FSSAI ಲೇಬಲ್‌ನೊಂದಿಗೆ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರಾಟ ಮಾಡುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ ಅಮೆಜಾನ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಹಾಗೂ ಬಿಗ್‌ಬಾಸ್ಕೆಟ್ ಸಂಸ್ಥೆಗಳ ಆಹಾರ ಪರವಾನಗಿಯನ್ನು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಮಾನತುಗೊಳಿಸಿದೆ. ಜೊತೆಗೆ ಉಮ್ಮತ್ತಿ ಕಾಯಿ ಹಾಗೂ ಬೀಜಗಳ ಮಾರಾಟಕ್ಕೆ ಸಂಬಂಧಿಸಿದ ಆನ್‌ಲೈನ್ ಲಿಸ್ಟಿಂಗ್, ಜಾಹೀರಾತು ಮತ್ತು ವಿತರಣೆಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಆಹಾರ ಗುಣಮಟ್ಟದ ಕುರಿತು ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು ತ್ವರಿತ ವಾಣಿಜ್ಯ ಆ್ಯಪ್‌ಗಳ ಮೇಲೂ ನಿಗಾ ವಹಿಸಿದ್ದಾರೆ. ಉಮ್ಮತ್ತಿ ಕಾಯಿ ಸೇವನೆಯಿಂದ ಕೆಲವರು ಅಸ್ವಸ್ಥರಾದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಮತ್ತಷ್ಟು ಮಹತ್ವ ಪಡೆದಿದ್ದು, ಆನ್‌ಲೈನ್‌ನಲ್ಲಿ ಆಹಾರ ಖರೀದಿಸುವಾಗ ಉತ್ಪನ್ನದ ಸುರಕ್ಷತೆ ಹಾಗೂ ಲೇಬಲ್ ಮಾಹಿತಿಯನ್ನು ಪರಿಶೀಲಿಸುವಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ : 25ನೇ ವಾರ್ಷಿಕೋತ್ಸವದ ಅದ್ಧೂರಿ ಕೊಡುಗೆ : ಮಾರುಕಟ್ಟೆಗೆ ಲಗ್ಗೆ ಇಟ್ಟ ಆಲ್-ನ್ಯೂ ಕ್ಲಾಸಿಕ್ ಬಜಾಜ್ ಪಲ್ಸರ್ 125!


















