ಮೈಸೂರು: ಹೆಚ್ಡಿಕೆ ಯಾವಾಗ ಹೇಗೆ ಬಣ್ಣ ಬದಲಾಯಿಸ್ತಾರೆ ಗೊತ್ತಾಗಲ್ಲ ಎಂದು ಸಚಿವ ಹೆಚ್.ಸಿ. ಬಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಹೆಚ್ಡಿಕೆ ಈಗ ಸಿದ್ದರಾಮಯ್ಯನವರ ಮೇಲೆ ಪ್ರೀತಿ ತೋರಿಸ್ತಿದ್ದಾರೆ. ಇವರ ಈ ಪ್ರೀತಿ ಮತ್ತೊಂದು ಅಪಾಯಕಾರಿ ಎಂದಿದ್ದಾರೆ.
ಎಲ್ಲಾ ವಿಚಾರ ಗೊತ್ತಾದ ಮೇಲೆಯೇ ನಾನು ಅವರಿಂದ ದೂರವಾಗಿದ್ದು ಎಂದಿರುವ ಅವರು, ಪ್ರತಿನಿತ್ಯ ಸುದ್ದಿಗೋಷ್ಠಿ ಮಾಡುವ ಸಚಿವರು ಇದ್ದಾರಾ ಎಂದು ಪ್ರಶ್ನಿಸಿದ್ದಾರೆ. ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಮಾತಾಡೋದನ್ನ ನೋಡಿದ್ದೇವೆ. ಆದರೆ ದಿನ ಬೆಳಗಾದ್ರೆ ಆರೋಪ ಮಾಡೋದೆ ಇವರ ಕೆಲಸ ಎಂದು ಕಿಡಿಕಾರಿದ್ದಾರೆ.


















