ಮೈಸೂರು:ಜಗತ್ಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪಾರಂಪರಿಕ ನಡಿಗೆ ಆಯೋಜಿಸಲಾಗಿದೆ. ಅರಮನೆ ನಗರಿಯಲ್ಲಿ ಪಾರಂಪರಿಕ ಕಟ್ಟಡಗಳ ಇತಿಹಾಸ ತಿಳಿಸಲು ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ ಈ ನಡಿಗೆ ಹಮ್ಮಿಕೊಳ್ಳಲಾಗಿದೆ.
ಸಿನಿಮಾ ನಿರ್ದೇಶಕ ಸುರೇಶ್ ಹಸಿರು ನಿಶಾನೆ ತೋರಿಸುವ ಮೂಲಕ ಪಾರಂಪರಿಕ ನಡಿಗೆಗೆ ಚಾಲನೆ ನೀಡಿದ್ದಾರೆ. ಟೌನ್ಹಾಲ್ನಿಂದ ಆರಂಭವಾದ ನಡಿಗೆ, ದೊಡ್ಡ ಗಡಿಯಾರ ವೃತ್ತ, 10ನೇ ಚಾಮರಾಜ ಒಡೆಯರ್ ವೃತ್ತ, ಕೆ.ಆರ್. ವೃತ್ತ ಹಾಗೂ ದೇವರಾಜ ಮಾರ್ಕೆಟ್ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಟೌನ್ಹಾಲ್ ಬಳಿ ಕೊನೆಗೊಂಡಿದೆ.
ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಯುವ ಸಮೂಹ ಪಾರಂಪರಿಕ ಕಟ್ಟಡಗಳ ಇತಿಹಾಸ, ವಾಸ್ತುಶಿಲ್ಪ ಶೈಲಿ ಮಹತ್ವ ತಿಳಿಯಲು ಆಗಮಿಸಿದ್ದರು. ಪೋಸ್ಟರ್ಗಳನ್ನು ಹಿಡಿದು ಸಾಗಿದ ಯುವಕ-ಯುವತಿಯರಿಗೆ ಇತಿಹಾಸ ತಜ್ಞ ಡಾ. ಶೆಲ್ವಪಿಳ್ಳೆ ಅಯ್ಯಂಗಾರ್ ಮತ್ತು ಡಾ. ರಂಗರಾಜು ಮಾರ್ಗಮಧ್ಯೆ ಸಿಗುವ ಕಟ್ಟಡಗಳ ಬಗ್ಗೆ ಮಾಹಿತಿ ನೀಡಿದ್ದಾರೆ.


















